For Quick Alerts
  ALLOW NOTIFICATIONS  
  For Daily Alerts

  ಮದುವೆಯಾದ ಮೊದಲ ವರ್ಷ ಜಗ್ಗೇಶ್ ಹುಟ್ಟುಹಬ್ಬಕ್ಕೆ ಪತ್ನಿ ಬರೆದ ಪತ್ರ ಹೀಗಿದೆ

  |

  ನವರಸ ನಾಯಕ ಜಗ್ಗೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 57ನೇ ವರ್ಷದ ಹುಟ್ಟುಹಬ್ಬವನ್ನು ಜಗ್ಗೇಶ್ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

  ದಯವಿಟ್ಟು ಆಕೆಯನ್ನು ಬೆಂಗಳೂರಿಗೆ ಕರೆತನ್ನಿ ಎಂದು ಬೇಡಿಕೊಂಡ ಜಗ್ಗೇಶ್ | Jaggesh | Pregnant Woman

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನವರಸನಾಯಕ ವಿಶೇಷವಾದ ಉಡುಗೊರೆಯೊಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹೌದು, ಪತ್ನಿ ಪರಿಮಳಾ ಜಗ್ಗೇಶ್ ಮದುವೆಯಾದ ಮೊದಲ ವರ್ಷ ಹೇಗೆ ಜನ್ಮದಿನಕ್ಕೆ ಶುಭಕೋರಿದ್ದರು ಎನ್ನುವ ನೆನೆಪನ್ನು ತೆರೆದಿಟ್ಟಿದ್ದಾರೆ. ಮುಂದೆ ಓದಿ..

  ಗುರು ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್ಗುರು ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

  ಮದುವೆ ನಂತರ ಪತ್ನಿಯ ಮೊದಲ ವಿಶ್

  ಮದುವೆ ನಂತರ ಪತ್ನಿಯ ಮೊದಲ ವಿಶ್

  ಮದುವೆ ಆದ ಮೊದಲ ವರ್ಷ ಪರಿಮಳಾ ಜಗ್ಗೇಶ್ ಪತಿಯ ಜನ್ಮದಿನಕ್ಕೆ ಕೈಯಾರೆ ಗ್ರೀಟಿಂಗ್ ಕಾರ್ಡ್ ಮಾಡಿ ವಿಶ್ ಮಾಡಿದ್ದಾರೆ. ಈ ಉಡುಗೊರೆಯನ್ನು ಇಂದಿಗೂ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಜಗ್ಗೇಶ್. ಈ ಪ್ರೀತಿಯ ಶುಭಾಶಯಕ್ಕೆ ಈಗ 34 ವರ್ಷಗಳು ಕಳೆದಿವೆ. ಇಂದು ಗ್ರೀಟಿಂಗ್ ಕಾರ್ಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ ಜಗ್ಗೇಶ್.

  ಜಗ್ಗೇಶ್ ಹೇಳಿದ್ದೇನು?

  "ನಾನು ಮದುವೆಯಾದ ಮೊದಲ ವರ್ಷ ಪರಿಮಳ ಕೈಯಾರೆ ನನ್ನ ಆನಡಗು ಗ್ರಾಮದಲ್ಲಿ ಮಾಡಿ ಹರಿಸಿದ ಪ್ರಥಮ ಶುಭಹಾರೈಕೆ ಪ್ರೀತಿಯ ಓಲೆ. ಈ ಪ್ರೀತಿ ಸಂಕೇತಕ್ಕೆ 34ವರ್ಷ ವಯಸ್ಸು. ಅಂದು ಅವಳೊಬ್ಬಳೆ ಹರಸಿದ್ದಳು ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು. ಧನ್ಯೋಸ್ಮಿ ರಾಯರೆ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ" ಎಂದು ಬರೆದುಕೊಂಡಿದ್ದಾರೆ.

  ಸಂಕಷ್ಟದಲ್ಲಿ ಸಿಲುಕಿರುವ ಗರ್ಭಿಣಿಗೆ ಸಹಾಯಮಾಡಲು ಮಿಡಿದ ಜಗ್ಗೇಶ್ಸಂಕಷ್ಟದಲ್ಲಿ ಸಿಲುಕಿರುವ ಗರ್ಭಿಣಿಗೆ ಸಹಾಯಮಾಡಲು ಮಿಡಿದ ಜಗ್ಗೇಶ್

  ಮಂತ್ರಾಲಯದಲ್ಲಿ ನವರಸನಾಯಕ

  ಮಂತ್ರಾಲಯದಲ್ಲಿ ನವರಸನಾಯಕ

  ಪ್ರತಿವರ್ಷದಂತೆ ಈ ವರ್ಷವು ಜಗ್ಗೇಶ್ ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್ "ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆದಿನ ನೆನೆದು ಕೂತಕ್ಷಣ ರೋಮಾಂಚನ" ಎನ್ನುತ್ತ ರಾಯರ ಸನ್ನಿಧಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಪುನೀತ್ ಗೆ ವಿಶ್ ಮಾಡಿದ ಜಗ್ಗೇಶ್

  ಪುನೀತ್ ಗೆ ವಿಶ್ ಮಾಡಿದ ಜಗ್ಗೇಶ್

  ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಕೋರಿದ್ದಾರೆ. "ನಲ್ಮೆಯ ಸಹೋದರ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು ಆಯು ಆರೋಗ್ಯ ಯಶ್ ಪ್ರಾಪ್ತಿರಸ್ತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ" ಎಂದು ಟ್ವೀಟ್ ಮಾಡಿದ್ದಾರೆ.

  English summary
  Jaggesh revealed the letter of his wife first time birthday wish after marriage. Kannada Actor Jaggesh celebrating his 57th birthday in Mantralaya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X