For Quick Alerts
  ALLOW NOTIFICATIONS  
  For Daily Alerts

  ನಟ ಜಗ್ಗೇಶ್ ಮತ್ತು ಗುರು ಪ್ರಸಾದ್ ಜೋಡಿಯ 'ರಂಗನಾಯಕ' ಸಿನಿಮಾ ಕಥೆ ಏನಾಯಿತು?

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಮತ್ತು ನಿರ್ದೇಶಕ ಮಠ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಚಿತ್ರಕ್ಕೆ ರಂಗನಾಯಕ ಎಂದು ಟೈಟಲ್ ಇಟ್ಟು ಚಿತ್ರಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದ್ದರು.

  ರಂಗನಾಯಕ ಸಿನಿಮಾದಿಂದ ಟೀಸರ್ ಸಹ ರಿಲೀಸ್ ಮಾಡಿದ್ದರು. ಈ ಸಿನಿಮಾ ಅನೌನ್ಸ್ ಮಾಡಿ ವರ್ಷದ ಮೇಲಾಗಿದೆ. ಈ ಬಗ್ಗೆ ಯಾವುದೇ ಅಪ್ ಡೇಟ್ ಸಿಗದೆ ಅಭಿಮಾನಿಗಳು ಕಂಗಾಲಾಗಿದ್ದರು. ಆದರೀಗ ಸಿನಿಮಾ ಕಡೆಯಿಂದ ಹೊಸ ಸುದ್ದಿ ಕೇಳಿಬಂದಿದೆ. ಚಿತ್ರೀಕರಣಕ್ಕೆ ಹೊರಡಲಿ ಸಿನಿಮಾತಂಡ ತಯಾರಿ ನಡೆಸುತ್ತಿದೆಯಂತೆ.

  'ಪದವಿ ಪೂರ್ವ' ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ನಟ ಜಗ್ಗೇಶ್

  ಮಠ, ಎದ್ದೇಳು ಮಂಜುನಾಥದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಮನಸ್ತಾಪ ಮಾಡಿಕೊಂಡು ದೂರ ದೂರ ಆಗಿದ್ದರು. ಆದರೆ ರಂಗನಾಯಕ ಮೂಲಕ ಮುನಿಸು ಮರೆತು ಮೂರನೆ ಬಾರಿಗೆ ಒಂದಾಗಿರುವ ಈ ಜೋಡಿಯ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ. ರಂಗನಾಯಕ ಈಗ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

  ಈಗಾಗಲೇ ಸಿನಿಮಾತಂಡ ಹಾಡಿನ ರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದೆ. ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೊರೊನಾ ಲಾಕ್ ಡೌನ್ ಬಳಿಕ ಜಗ್ಗೇಶ್ ಯಾವುದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ. ಆದರೀಗ ರಂಗನಾಯಕ ಮೂಲಕ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ.

  ಇದಕ್ಕೋಸ್ಕರ ತುಂಬಾ ದಿನದಿಂದ ಕಾಯ್ತಾ ಇದ್ದೆ | prajwal Devaraj | Veeram | Filmibeat Kannada

  ರಂಗನಾಯಕ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ ಎಂದು ಈ ಹಿಂದೆ ಜಗ್ಗೇಶ್ ಹೇಳಿದ್ದರು. ಅಲ್ಲದೆ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಯುತ್ತಿದೆ ಎಂದಿದ್ದರು. ಇದೀಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುತ್ತಿದೆ. ರಂಗನಾಯಕ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  English summary
  Sandalwood Actor Jaggesh's comedy entertainer Ranganayaka Movie to Begin Shooting from January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X