»   » ಜಗ್ಗೇಶ್ ದೊಡ್ಡತನಕ್ಕೆ ತಲೆಬಾಗಿ ಮುಗುಳ್ನಕ್ಕ ನಿರ್ದೇಶಕ ಯೋಗರಾಜ್ ಭಟ್.!

ಜಗ್ಗೇಶ್ ದೊಡ್ಡತನಕ್ಕೆ ತಲೆಬಾಗಿ ಮುಗುಳ್ನಕ್ಕ ನಿರ್ದೇಶಕ ಯೋಗರಾಜ್ ಭಟ್.!

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ 'ಹ್ಯಾಟ್ರಿಕ್' ಬಾರಿಸಲು 'ಮುಗುಳ್ನಗೆ' ಸಿನಿಮಾ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿ.[ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ']

ಈಗಾಗಲೇ 'ಮುಗುಳ್ನಗೆ' ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಹೀಗಿರುವಾಗಲೇ, 'ಮುಗುಳ್ನಗೆ' ಚಿತ್ರತಂಡದಿಂದ ಒಂದು ಇಂಟ್ರೆಸ್ಟಿಂಗ್ ನ್ಯೂಸ್ ಹೊರ ಬಿದ್ದಿದೆ.

'ಮುಗುಳ್ನಗೆ' ಚಿತ್ರದಲ್ಲಿದೆ ಸ್ಪೆಷಲ್ ಸಾಂಗ್

'ಮುಗುಳ್ನಗೆ' ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಒಂದು ಸ್ಪೆಷಲ್ ಸಾಂಗ್ ರೆಡಿ ಮಾಡಿದ್ದಾರೆ. ಅದ್ರೆ, ಹಾಡಲ್ಲಿ ಹೆಜ್ಜೆ ಹಾಕುವವರು ಯಾರು ಗೊತ್ತಾ.?

ಸ್ಪೆಷಲ್ ಹಾಡಲ್ಲಿ ನಟ ಜಗ್ಗೇಶ್

'ಮುಗುಳ್ನಗೆ' ಚಿತ್ರದ ವಿಶೇಷ ಹಾಡಿಗೆ ಸ್ಟೆಪ್ ಹಾಕುತ್ತಿರುವವರು ಬೇರೆ ಯಾರೂ ಅಲ್ಲ.. ನವರಸ ನಾಯಕ ಜಗ್ಗೇಶ್.!

ಮುಗುಳ್ನಗಲು ವಿಶೇಷ ಅತಿಥಿ

ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ 'ಮುಗುಳ್ನಗೆ' ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ ನಟ ಜಗ್ಗೇಶ್.

ಸಂಭಾವನೆ ಪಡೆಯಲ್ಲ: ಸ್ನೇಹಕ್ಕಾಗಿ ಎಲ್ಲ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ರವರೊಂದಿಗೆ ಆತ್ಮೀಯರಾಗಿರುವ ನಟ ಜಗ್ಗೇಶ್, ಸ್ನೇಹಕ್ಕೆ ಬೆಲೆ ಕೊಟ್ಟು ಸಂಭಾವನೆಯನ್ನು ಪಡೆಯದೆ 'ಮುಗುಳ್ನಗೆ' ಚಿತ್ರದ ಹಾಡಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ.

'ವಾಸ್ತು ಪ್ರಕಾರ' ಒಟ್ಟಾಗಿದ್ದಾರೆ

'ವಾಸ್ತು ಪ್ರಕಾರ' ಚಿತ್ರದಲ್ಲಿ ಯೋಗರಾಜ್ ಭಟ್ ಹಾಗೂ ಜಗ್ಗೇಶ್ ಒಂದಾಗಿದ್ದರು. 'ಕಾಮಿಡಿ ಕಿಲಾಡಿಗಳು' ಸೆಟ್ ನಲ್ಲೂ ಭಟ್ರು-ಜಗ್ಗೇಶ್ ಕಾಂಬಿನೇಷನ್ ವರ್ಕೌಟ್ ಆಗಿದೆ. ಈಗ 'ಮುಗುಳ್ನಗೆ' ತಯಾರಾಗುತ್ತಿದೆ.[ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

ಮೂರು ದಿನಗಳ ಕಾಲ ನಡೆಯಲಿದೆ ಶೂಟಿಂಗ್

ಫೆಬ್ರವರಿ 27 ರಿಂದ ಮಾರ್ಚ್ 1 ರವರೆಗೆ ಜಗ್ಗೇಶ್ ಇರುವ 'ಮುಗುಳ್ನಗೆ' ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ನಡೆಯಲಿದೆ.

'ಮುಗುಳ್ನಗೆ' ಚಿತ್ರದಲ್ಲಿ ಮೂವರು ನಾಯಕಿಯರು

'ಮುಗುಳ್ನಗೆ' ಚಿತ್ರದಲ್ಲಿ ಗಣೇಶ್ ಗೆ ಅಮೂಲ್ಯ, ನಿಕಿತಾ ನಾರಾಯಣ್ ಹಾಗೂ ಆಶಿಕಾ ರಂಗನಾಥ್ ಎಂಬ ಮೂವರು ನಾಯಕಿಯರು ಇರಲಿದ್ದಾರೆ.

English summary
Kannada Actor Jaggesh has agreed to be a part of Kannada Movie 'Mugulu Nage' through special song. 'Mugulu Nage' features Ganesh, Amulya in the lead. The movie is directed by Yogaraj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada