For Quick Alerts
  ALLOW NOTIFICATIONS  
  For Daily Alerts

  ದಿವಂಗತ ಕರುಣಾನಿಧಿ ಜೊತೆಗಿನ ನೆನಪು ಹಂಚಿಕೊಂಡ ಜಗ್ಗೇಶ್

  By Bharath Kumar
  |
  ಕರುಣಾನಿಧಿ ಬಗ್ಗೆ ಜಗ್ಗೇಶ್ ಹೇಳಿದ್ದೇನು..? | Filmibeat Kannada

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ವಿಧಿವಶರಾಗಿದ್ದು, ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ. ಡಿಎಂಕೆ ಪಕ್ಷದ ನಾಯಕನ ಅಗಲಿಕೆಗೆ ಇಡೀ ರಾಜಕೀಯ ವಲಯವೇ ಕಂಬನಿ ಮಿಡಿದಿದೆ.

  ಅದೇ ರೀತಿ ಭಾರತೀಯ ಚಿತ್ರರಂಗ ಕೂಡ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿತ್ತು. ಇದೀಗ, ಸ್ಯಾಂಡಲ್ ವುಡ್ ನಟ ಜಗ್ಗೇಶ್ ಅವರು ಕರುಣಾನಿಧಿ ಜೊತೆಗಿರುವ ಫೋಟೋವೊಂದನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ, ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ.

  ತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹ

  ಈ ಚಿತ್ರದಲ್ಲಿ ಕರುಣಾನಿಧಿ, ನಟ ಜಗ್ಗೇಶ್ ಹಾಗೂ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ ಕಾಣಿಸಿಕೊಂಡಿದ್ದು, ಕರುಣಾನಿಧಿ ಅವರು ಯತಿರಾಜನ ಜೊತೆ ನಗುನಗುತ್ತಾ ಮಾತನಾಡುತ್ತಿದ್ದಾರೆ. ಅದನ್ನ ನೋಡಿ ಜಗ್ಗೇಶ್ ಕೂಡ ಸಂತಸವಾಗಿದ್ದಾರೆ.

  ಈ ಫೋಟೋ ಶೇರ್ ಮಾಡಿರುವ ಜಗ್ಗೇಶ್ ''ಯತಿರಾಜನ ಜೊತೆ ಹಾಸ್ಯ ಮಾಡುತ್ತಿರುವ ದಿ:ಕರುಣಾನಿಧಿ ರವರು..ಅವರಿಗೆ ಮಕ್ಕಳೆಂದರೆ ಬಹಳ ಪ್ರಿಯ..ಅವರಿಗಿದ್ದ ಪುಸ್ತಕ ಜ್ಞಾನದ ಹಸಿವು ಸಾಕ್ಷಿಗೆ ಗೋಡೆಯಾಗಿ ಹಿಂದೆ ನಿಂತಿದೆ..!! ಇಂಥ ಅನೇಕ ಮಹನೀಯರ ಕಾಣುವ ಭಾಗ್ಯ ನನ್ನ ಬದುಕಿನ ವಿಶೇಷ ಕ್ಷಣಗಳು ಅನ್ನಿಸುತ್ತದೆ..!! ಅಮರ ಹಳೆ ನೆನಪು..'' ಎಂದು ಬರೆದುಕೊಂಡಿದ್ದಾರೆ.

  ''ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಕರುಣಾನಿಧಿ ಒಬ್ಬರು'' - ಶಿವರಾಜ್ ಕುಮಾರ್''ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಕರುಣಾನಿಧಿ ಒಬ್ಬರು'' - ಶಿವರಾಜ್ ಕುಮಾರ್

  ಕರುಣಾನಿಧಿ ಅವರು ಕೇವಲ ರಾಜಕಾರಣಿ ಮಾತ್ರವಾಗಿರಲಿಲ್ಲ. ಅವರೊಬ್ಬ ಕ್ರಾಂತಿಕಾರಿ ಬರಹಗಾರರಾಗಿದ್ದರು. ತಮಿಳು ಚಿತ್ರರಂಗದಲ್ಲಿ ಚಿತ್ರಕಥೆಯ ಮೂಲಕ ಬಹುದೊಡ್ಡ ಹೆಸರು ಗಳಿಸಿದ್ದರು. ಕರುಣಾನಿಧಿ ಅವರ ಬರಹಕ್ಕೆ ಭಾಷೆಯ ಹಂಗಿಲ್ಲದೇ ತಮಿಳು ಮಾತ್ರವಲ್ಲ, ಕನ್ನಡ ಕಲಾವಿದರು ಕೂಡ ಫಿದಾ ಆಗಿದ್ದರು.

  English summary
  Kannada Actor Jaggesh has taken his twitter account to express his relationship with Tamil Nadu Ex Cm M Karunanidhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X