For Quick Alerts
  ALLOW NOTIFICATIONS  
  For Daily Alerts

  ಅಪ್ಪಂದಿರ ದಿನಕ್ಕೆ ಅಪ್ಪನ ಭಾವುಕ ವಿಡಿಯೋ ಹಾಕಿದ ಜಗ್ಗೇಶ್

  |

  ಅಪ್ಪಂದಿರ ದಿನಕ್ಕೆ ನಟ ಜಗ್ಗೇಶ್ ತಮ್ಮ ತಂದೆಯ ವಿಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ ಭಾವುಕ ಸಾಲುಗಳನ್ನು ಸಹ ಬರೆದಿದ್ದಾರೆ.

  ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದ್ರು ದರ್ಶನ್ ಅಭಿಮಾನಿಗಳು|Darshan Fans Uninstalled TikTok

  ಜಗ್ಗೇಶ್ ಅವರು ಹಂಚಿಕೊಂಡಿರುವ ತಮ್ಮ ತಂದೆಯವರ ವಿಡಿಯೋ. ಜಗ್ಗೇಶ್ ಅವರು ತೆಗೆದ ಕೊನೆಯ ವಿಡಿಯೋ ಅಂತೆ. ಜಗ್ಗೇಶ್ ಅವರು ಆ ವಿಡಿಯೋ ತೆಗೆದ ಕೆಲವು ದಿನಕ್ಕೆ ಅವರ ತಂದೆ ಕಾಲವಾದರಂತೆ.

  ಜಗ್ಗೇಶ್ ಅವರು ಮಾಡಿರುವ ವಿಡಿಯೋದಲ್ಲಿ, 'ನಿಮ್ಮ ಅಮ್ಮ ಕಾರಿನ ಬಳಿ ನಿಂತುಕೊಂಡು ನನ್ನನ್ನು ಕರೆಯುತ್ತಿದ್ದಾಳೆ' ಎಂದಿದ್ದರಂತೆ. ಆಗ ಅವರಿಗೆ ಭ್ರಮೆ ಇರಬಹುದು ಎಂದುಕೊಂಡಿದ್ದರಂತೆ ಜಗ್ಗೇಶ್, ಆದರೆ ಈ ವಿಡಿಯೋ ತೆಗೆದ ಕೆಲವು ದಿನಕ್ಕೆ ಜಗ್ಗೇಶ್ ಅವರ ತಂದೆ ನಿಧನಹೊಂದಿದ್ದಾರೆ.

  ಅಪ್ಪನ ಬಗ್ಗೆ ಭಾವುಕ ಸಾಲು ಬರೆದಿರುವ ಜಗ್ಗೇಶ್, 'ನನ್ನ ಯೌವ್ವನದಲ್ಲಿ ನೆತ್ತಿಮೇಲಿನ ಸೂರ್ಯನಂತೆ ಇದ್ದವ ಸಾವು ಸಮೀಪಿಸಿದಾಗ ಹುಣ್ಣಿಮೆ ಚಂದ್ರನಂತಾದ' ಎಂದಿದ್ದಾರೆ.

  ಜಗ್ಗೇಶ್ ಯುವಕರಾಗಿದ್ದಾಗ ಅವರ ತಂದೆ ಬಹಳ ಶಿಸ್ತಿನ ಮನುಷ್ಯರಾಗಿದ್ದರಂತೆ. ಆದರೆ ನಂತರ ಇಳಿವಯಸ್ಸಿನಲ್ಲಿ ಮಗುವಂತೆ ಆಗಿಬಿಟ್ಟರಂತೆ.

  English summary
  Actor Jaggesh shared a video of his dad on twitter. He wrote some emotional lines about his dad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X