For Quick Alerts
  ALLOW NOTIFICATIONS  
  For Daily Alerts

  26 ವರ್ಷದ ಹಿಂದೆಯೇ Rap ಸಾಂಗ್ ಮಾಡಿದ್ರು ಜಗ್ಗೇಶ್

  |

  Rap ಸಾಂಗ್ ಗಳು ಇಂದಿನ ಯುವ ಜನರಿಗೆ ಅಚ್ಚುಮೆಚ್ಚು. ಪಬ್, ಪಾರ್ಟಿಗಳಲ್ಲಿ ಎಂಜಾಯ್ ಮಾಡ್ತಿದ್ದ ಈ ಹಾಡುಗಳನ್ನ ಈಗ ಸಿನಿಮಾದಲ್ಲೂ ರೆಗ್ಯುಲರ್ ಆಗಿ ಬಳಸುತ್ತಿದ್ದಾರೆ. Rap ಸಾಂಗ್ ಅಂದಾಕ್ಷಣ ಚಂದನ್ ಶೆಟ್ಟಿ, ಆಲ್ ಓಕೆ ಅಲೋಕ್ ಗಾಯಕರು ಸದ್ದು ಮಾಡ್ತಿದ್ದಾರೆ.

  ಈಗ ಯಾರಿಗೂ ತಿಳಿಯದ ವಿಷ್ಯವೊಂದು ಬಹಿರಂಗವಾಗಿದೆ. ಹೌದು, ಈಗ ಸದ್ದು ಮಾಡ್ತಿರುವ Rap ಶೈಲಿಯ ಹಾಡನ್ನ ಸುಮಾರು 26 ವರ್ಷದ ಹಿಂದೆಯೇ ನಟ ಜಗ್ಗೇಶ್ ಮಾಡಿದ್ದರಂತೆ.

  'ನವರಸ ನಾಯಕನ ನಾಲ್ಕು ಹೆಜ್ಜೆ' ಹೆಸರಿನಲ್ಲಿ ಜಗ್ಗೇಶ್ ಆತ್ಮಕಥೆ

  ಈ ಬಗ್ಗೆ ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಬರೆದುಕೊಂಡಿರುವ ಜಗ್ಗೇಶ್ ಖುಷಿ ಹಂಚಿಕೊಂಡಿದ್ದಾರೆ. ''1993ರಲ್ಲಿ ನಾನು ನನ್ನ ಚಿತ್ರದಲ್ಲಿ ಹಾಡಿಸಿ ನಟಿಸಿದ #Rapsong ಅಂದು ನನಗೆ Rap ಎಂದು ಗೊತ್ತಿರಲಿಲ್ಲಾ! ಬದಲಾಗಿ ವಿಭಿನ್ನ ಶೈಲಿ ಯತ್ನಿಸಬೇಕು ಅಂದುಕೊಂಡೆ.. 26 ವರ್ಷದ ನಂತರ ಅಂದರೆ ಇಂದು Youtube ನಲ್ಲಿ Rap ಮಾಡಿದವರೆಲ್ಲಾ ಸಾಮಾಜಿಕ ಜಾಲತಾಣದಲ್ಲಿ #superstars..''

  ''26 ವರ್ಷದ ಹಿಂದೆ ನನ್ನ ಯತ್ನ ಇಂದು ಮೆಲುಕು ಹಾಕಿದಾಗ ನನ್ನ ಬಗ್ಗೆ ನನಗೆ ಪಶ್ಚಾತ್ತಾಪವಾಯಿತು ಕಾರಣ ನನ್ನ ಕಾಲದಲ್ಲಿ ಅದೆ ಗಿಡಮರ ಸುತ್ತಿ ಕಬ್ಬನ್ ಪಾರ್ಕ್ ಲಾಲ್ ಬಾಗ್ ನಂದಿಬೆಟ್ಟ ಅದೆ ಕಣ್ಣೀರು ಕಥೆ 6 ಫೈಟು 5 ಹಾಡು ಜಮಾನ..ಆಗ ಬಂದ ನಾನು ಎಲ್ಲಾ ಹೊಸ ನಿರ್ದೇಶಕರ ಸಂಗಡ ನನ್ನ ಸ್ವಂತ ಸಂಸ್ಥೆ ಅಡಿ 29ಚಿತ್ರ ನಟಿಸಿ ನಿರ್ಮಿಸಿ ತಲೆ ಎತ್ತಿ ರಾಯರು ಕನ್ನಡಿಗರ ಆಶೀರ್ವಾದದಿಂದ ನಿಂತು ಬಿಟ್ಟೆ..ಇದಕ್ಕೆ ನನ್ನ ಧನ್ಯವಾದ ನನ್ನ ಹಿರಿಯ ಭಾವ ಶ್ರೀನಿವಾಸಗೆ ಅರ್ಪಣೆ..''

  ಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆ

  ''ಕಾರಣ ಅಂದು ಅವರು ಜಗ್ಗಿ ನಿಮ್ಮಲ್ಲಿ ಅಗಾದವಾದ ಪ್ರತಿಭೆ ಇದೆ ಬಳಸಿಕೊಳ್ಳದಿದ್ದರೆ ನಿಮ್ಮ ಕಲಾ ಬದುಕು ಪೋಷಕ ಪಾತ್ರಕ್ಕೆ ಸೀಮಿತ ಮಾಡಿಬಿಡುತ್ತಾರೆ ಎಂದು ಸಾಲಮಾಡಿ 10ಲಕ್ಷ ತಂದು ವ್ಯೆಯಿಸಿ ನನ್ನ ಕಲಾಬದುಕಿಗೆ ದಾರಿದೀಪವಾದರು...ಯಶಸ್ಸು ಬಂದಮೇಲೆ ಅನುಮಾನಿಸಿದವರು ನನ್ನ ಬಳಸಿಕೊಂಡರು..ಪಾಪ 63ದಾಟಿದ ಭಾವ ದುಬಾಯ್ ನಲ್ಲಿ ಮಗಳ ಜೊತೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ! ಇಂದಿನ Rappersಗಳೆ ಹೇಗಿತ್ತು 30ವರ್ಷದ ಹಿಂದಿನ ನನ್ನ ತಾಕತ್ತು.. ನನ್ನ ಬದುಕಿನ ಒಂದು ಬಾಗದ ಅಮರ ಈ ಹಳೆ ನೆನಪು'' ಎಂದು ಸುದೀರ್ಘವಾಗಿ ಬರೆದು ಅಭಿಪ್ರಾಯ ಕೇಳಿದ್ದಾರೆ.

  English summary
  Kannada actor Jaggesh has taken his twitter account to shared his first rap song. he made first rap song in 1993.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X