»   » ಶಂಕ್ರಣ್ಣನ ಅಭಿಮಾನಕ್ಕಾಗಿ ಜಗ್ಗೇಶ್ ಅವರ ಪ್ರೀತಿಯ ಉಡುಗೊರೆ!

ಶಂಕ್ರಣ್ಣನ ಅಭಿಮಾನಕ್ಕಾಗಿ ಜಗ್ಗೇಶ್ ಅವರ ಪ್ರೀತಿಯ ಉಡುಗೊರೆ!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರು ಬಹುಮುಖ ಪ್ರತಿಭೆ. ನಟನೆ ಮಾಡ್ತಾರೆ, ನಿರ್ದೇಶನ ಮಾಡ್ತಾರೆ, ನಿರ್ಮಾಣ ಮಾಡ್ತಾರೆ, ರಾಜಕೀಯ ಮಾಡ್ತಾರೆ, ಮಿಮಿಕ್ರಿ ಮಾಡ್ತಾರೆ. ಗಾಯನ ಕೂಡ ಮಾಡ್ತಾರೆ......ಹೀಗೆ ಹಲವು ಪ್ರತಿಭೆಗಳ ಮಾಲೀಕ ಜಗ್ಗೇಶ್ ಈಗ ಶಂಕರ್ ನಾಗ್ ಅವರ ಹಾಡು ಹೇಳುವುದರ ಮೂಲಕ ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದಾರೆ.

ಹೌದು, ಕರಾಟೆ ಕಿಂಗ್ ಶಂಕರ್ ನಾಗ್ ಅವರ 'ಆಟೋರಾಜ' ಚಿತ್ರದ ''ನಲಿವಾ ಗುಲಾಬಿ ಹೂವೆ'' ಹಾಡನ್ನ ಪೂರ್ತಿ ಹಾಡಿದ್ದಾರೆ. ಈ ಹಾಡನ್ನ ಸ್ವತಃ ಜಗ್ಗೇಶ್ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ರಿಯಲ್ ಲವ್ ಸ್ಟೋರಿಯ ಸಿನಿಮಾಗೆ ಹೀರೋ ಇವರೇ..!

Jaggesh sing Shankar Nag's song

''ಯಾಕೋ ಶಂಕರನಾಗ್ ತುಂಬಾ ನೆನಪಾದ್ರು! ಇತೀಚಿಗೆ ಕಲಿತ ಅವರ ಹಾಡು ನಿಮಗಾಗಿ! ನಾನು ಶಾಸ್ತ್ರೀಯ ಗಾಯಕನಲ್ಲ! ಅವರ ಮೇಲಿನ ಅಭಿಮಾನದಿಂದ ಕಲಿತೆ! ಪ್ರೀತಿಯಿಂದ ನಿಮಗಾಗಿ! ತಪ್ಪಿದ್ದರೆ ಕ್ಷಮೆ ಇರಲಿ'' ಎಂದು ಕೂಡ ಸ್ಟೇಟಸ್ ಹಾಕಿದ್ದಾರೆ.

'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ

ಜಗ್ಗೇಶ್ ಅವರ ಕಂಠದಲ್ಲಿ ಮೂಡಿ ಬಂದಿರುವ 'ನಲಿವಾ ಗುಲಾಬಿ ಹಾಡು' ಇಲ್ಲಿದೆ ನೋಡಿ.....

English summary
Kannada Actor Jaggesh sing Kannada actor Shankar Nag's song

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada