Don't Miss!
- News
ಪೊಲೀಸರಿಗೆ ಬಂದೂಕು ತೋರಿಸಿದ್ದ ಶಾರುಖ್ ಪಠಾಣ್ಗೆ ಭರ್ಜರಿ ಸ್ವಾಗತ
- Automobiles
ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ
- Sports
ಅತಿ ಹೆಚ್ಚು ರನ್ಗಳಿಸಿದರೂ ರಾಹುಲ್ ಎಡವಿದ್ದೆಲ್ಲಿ?: ಮನೀಶ್ ಇನ್ನಿಂಗ್ಸ್ ಉಲ್ಲೇಖಿಸಿದ ದೊಡ್ಡ ಗಣೇಶ್
- Finance
ಜೂನ್ 2022ರಿಂದ ಪ್ರಮುಖ 5 ವೈಯಕ್ತಿಕ ಹಣಕಾಸು ಬದಲಾವಣೆ ತಿಳಿಯಿರಿ
- Lifestyle
ಜೂನ್ 2022: ಮದುವೆ, ಪ್ರಯಾಣ, ಗೃಹಪ್ರವೇಶ, ಹೊಸ ವ್ಯವಹಾರಕ್ಕೆ ಶುಭ ದಿನಾಂಕಗಳು
- Education
ಎಸ್ಎಸ್ಎಲ್ಸಿ ನಂತರದ ಕಾಲೇಜು ಆಯ್ಕೆ ಮಾಡುವ ಮುನ್ನ ಈ ಅಂಶಗಳು ನೆನಪಿರಲಿ
- Technology
ಇಂದು ಇನ್ಫಿನಿಕ್ಸ್ ನೋಟ್ 12 ಟರ್ಬೋ ಫೋನಿನ ಫಸ್ಟ್ ಸೇಲ್!..ಕೊಡುಗೆ ಏನು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವರ್ಷದ ಮೊದಲ ದಿನ ರಾಯರ ಮಠದಲ್ಲಿ ಕಳೆದ ನಟ ಜಗ್ಗೇಶ್
ಹೊಸ ವರ್ಷದ ಪ್ರಯುಕ್ತ ಬಹುಪಾಲು ಹೆಚ್ಚು ಜನರು ಮೋಜು ಮಸ್ತಿಯ ಕಡೆ ಗಮನ ಕೊಡ್ತಾರೆ. ಪ್ರವಾಸಗಳಿಗೆ ಹೋಗಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ, ಹಿರಿಯ ನಟ ಜಗ್ಗೇಶ್ ಹೊಸ ವರ್ಷವನ್ನು ಮಂತ್ರಾಲಯದ ರಾಯರ ಮಠದಲ್ಲಿ ಸ್ವಾಗತಿಸಿದ್ದಾರೆ.
ಸಹಜವಾಗಿ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಸಂದರ್ಭಗಳಲ್ಲಿ ಜಗ್ಗೇಶ್ ಅವರು ಮಂತ್ರಾಲಯಕ್ಕೆ ಭೇಟಿ ಕೊಡ್ತಾರೆ. ಸಂಪ್ರದಾಯದಂತೆ ಈ ವರ್ಷವೂ ರಾಯರ ಮಠಕ್ಕೆ ಹೋಗಿ ವರ್ಷದ ಮೊದಲ ದಿನ ಕಳೆದಿದ್ದಾರೆ.
ಅಧಿಕೃತವಾಗಿ
ಸೆಟ್ಟೇರಿದೆ
ಜಗ್ಗೇಶ್-ಗುರುಪ್ರಸಾದ್
ಜೋಡಿಯ
'ರಂಗನಾಯಕ'
ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ''ವರ್ಷದ ಮೊದಲದಿನ ರಾಯರ ಮಠದಲ್ಲಿ ಕಳೆದ ಕ್ಷಣ... ಗುರುಭ್ಯೋನಮಃ..ಶುಭಮಸ್ತು..'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಮಂತ್ರಾಯಲಯಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಆಂಧ್ರ ಪ್ರದೇಶದ ಹೋಟೆಲ್‌ವೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಜೊತೆ ಕೆಲ ಸಮಯ ಮಾತನಾಡಿರುವ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಸ ವರ್ಷದ ಆಚರಣೆ ಬಗ್ಗೆಯೂ ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದ ಹೊಸ ವರ್ಷದ ಮೇಲೆ ಇರುವ ಆಸಕ್ತಿ ನಮ್ಮದೇ ಆದ ಯುಗಾದಿ ಹಬ್ಬದಂದು ಆಚರಿಸುವ ಹೊಸ ವರ್ಷಕ್ಕೆ ಇಲ್ಲ ಎಂದು ಹಾಕಲಾಗಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು.
ಜಗ್ಗೇಶ್
ಅವರ
ಆಫೀಸ್ನಲ್ಲಿದೆ
ದಿಗ್ಗಜ
ನಟರೊಬ್ಬರ
ಫೋಟೋ
''ಪತಂಗ ಬೆಂಕಿಯ ಬಗ್ಗೆ ಅರಿವಿಲ್ಲದೆ ಅದನ್ನ ಪ್ರೀತಿಸಿ ಚುಂಬಿಸಲು ಹೋಗಿ ಅಂತ್ಯವಾಗುತ್ತದೆ. ಆ ಪತಂಗವನ್ನ ಬೆಂಕಿಯ ಬಳಿ ಹೋಗದಂತೆ ತಡೆದರೆ ಅದಕ್ಕೆ ಕೇಳುವ ಅರಿವಿದೆಯೇ? ಆಧುನಿಕ ಜಗತ್ತಿನ ಆಕರ್ಷಣೆ ಸೆಳೆತದಿಂದ ಅನುಭವ, ಬದುಕಿನಭಯ ಭಕ್ತಿ, ಗುರುಹಿರಿಯರ ಬಂಗಾರದಂತ ಮಾತು,ಬದಲಾವಣೆ ತರಬಹುದು! ಹೆಚ್ಚು ಹೇಳಿದರೆ ನಮ್ಮ ದುಡ್ಡು ನಮ್ಮಿಷ್ಟ ಎನ್ನುವರು'' ಎಂದಿದ್ದರು.