For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಹಾದಿಯಲ್ಲೆ 'ತೋತಾಪುರಿ' ಸಿನಿಮಾ

  |

  'ತೋತಾಪುರಿ' ಟೈಟಲ್ ಮೂಲಕವೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. 'ನೀರ್ ದೋಸೆ' ಚಿತ್ರದ ನಂತರ ನಿರ್ದೇಶಕ ವಿಜಯ್ ಪ್ರಸಾದ್ ಕೈಗೆತ್ತಿಕೊಂಡಿರುವ ಸಿನಿಮಾ 'ತೋತಾಪುರಿ'. ಈಗಾಗಲೆ ಭರ್ಜರಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ.

  ಇದರ ನಡುವೆ ಚಿತ್ರತಂಡ ಈಗ ಒಂದು ಬ್ರೇಕಿಂಕ್ ಸುದ್ದಿಯನ್ನು ಹೊರಹಾಕಿದೆ. 'ನೀರ್ ದೋಸೆ' ಚಿತ್ರದ ಮೂಲಕ ಒಂದಿಷ್ಟು ವಿವಾದ, ಗೊಂದಲಗಳ ಮೂಲಕ ಸದ್ದು ಸುದ್ದಿ ಮಾಡಿದ್ದ ವಿಜಯ್ ಪ್ರಸಾದ್ ಈ ಬಾರಿ ಏನು ಮಾಡ್ತಿದ್ದಾರಪ್ಪ ಎಂದು ಅಚ್ಚರಿ ಪಡಬೇಡಿ.

  ಈ ಬಾರಿ 'ತೋತಾಪುರಿ' : ಮತ್ತೆ ಒಂದಾದ 'ನೀರ್ ದೋಸೆ' ಜೋಡಿ

  'ತೋತಾಪುರಿ' ಸಿನಿಮಾ ತಂಡ ಹೊರಹಾಕಿರುವ ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಈ ಸಿನಿಮಾ ಎರಡೂ ಭಾಗಗಳಲ್ಲಿ ತಾಯಾರಾಗುತ್ತಿದೆಯಂತೆ. ಮೊದಲ ಭಾಗದ ಕೊನೆಯಲ್ಲಿ ಎರಡನೆ ಭಾಗದಲ್ಲಿ ಏನಾಗಲಿದೆ ಎನ್ನುವ ಸುಳಿವು ನೀಡಲಿದ್ದಾರಂತೆ. ಮುಂದೆ ಓದಿ..

  'ತೋತಾಪುರಿ' ಡಬಲ್ ಧಮಾಕಾ

  'ತೋತಾಪುರಿ' ಡಬಲ್ ಧಮಾಕಾ

  'ತೋತಾಪುರಿ' ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆಯಂತೆ. ಚಿತ್ರದ ಎರಡು ಭಾಗಗಳ ಅವಧಿ ಕೇವಲ ಒಂದೂವರೆ ಗಂಟೆ ಮಾತ್ರ ಆಗಿರಲಿದೆಯಂತೆ. ಹಾಗಾಗಿ ಸಂಪೂರ್ಣ ಚಿತ್ರವನ್ನು ಒಮ್ಮೆಗೆ ತೋರಿಸುವುದಕ್ಕಿಂತ, ಎರಡೂ ಭಾಗದಲ್ಲಿ ಬಿತ್ತರಿಸಿದ್ರೆ ಚೆನ್ನಾಗಿರುತ್ತೆ ಎನ್ನುವ ಉದ್ದೇಶದಿಂದ, ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆಯಂತೆ ಚಿತ್ರತಂಡ.

  ಟ್ವಿಟ್ಟರ್ ಗೆ ಬಂದ ರಕ್ಷಿತ್ ಶೆಟ್ಟಿಗೆ ಸಲಹೆ ನೀಡಿದ ಜಗ್ಗೇಶ್

  ವಿಚಿತ್ರವಾಗಿದೆ ಟ್ಯಾಗ್ ಲೈನ್

  ವಿಚಿತ್ರವಾಗಿದೆ ಟ್ಯಾಗ್ ಲೈನ್

  ವಿಶೇಷ ಅಂದ್ರೆ ಎರಡೂ ಭಾಗಗಳಿಲ್ಲೂ ಚಿತ್ರದ ಹೆಸರು 'ತೋತಾಪುರಿ' ಅಂತಾನೆ ಇರಲಿದೆಯಂತೆ. ಆದ್ರೆ ಚಿತ್ರದ ಟ್ಯಾಗ್ ಲೈನ್ ಮಾತ್ರ ಬೇರೆ ಬೇರೆ ಆಗಿರಲಿದೆಯಂತೆ. ಮೊದಲ ಭಾಗದಲ್ಲಿ ತೋತಾಪುರಿ 'ತೊಟ್ಟು ಕೀಳ್ಬೇಕು' ಅಂತ ಇದ್ರೆ, ಎರಡನೆ ಭಾಗದಲ್ಲಿ 'ತೊಟ್ಟು ಕಿತ್ತಾಯ್ತು' ಎಂದು ಟ್ಯಾಗ್ ಲೈನ್ ಇಡಲಾಗಿದೆಯಂತೆ.ಈ ಟ್ಯಾಗ್ ಲೈನ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

  ದಸರಾ ಹಬ್ಬಕ್ಕೆ ಬರ್ತಿದೆ ತೋತಾಪುರಿ

  ದಸರಾ ಹಬ್ಬಕ್ಕೆ ಬರ್ತಿದೆ ತೋತಾಪುರಿ

  ಭಾರಿ ಕುತೂಹಲ ಮೂಡಿಸಿರುವ 'ತೋತಾಪುರಿ' ದಸರಾ ಹಬ್ಬಕ್ಕೆ ಅಥವಾ ಕ್ರಿಸ್ ಮಸ್ ಗೆ ಚಿತ್ರದ ಮೊದಲ ಪಾರ್ಟ್ ತೆರೆಗೆ ತರುವ ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಮೊದಲ ಭಾಗಕ್ಕೆ ಸಿಗುವ ಪ್ರತಿಕ್ರಿಯೆಯ ಆಧಾರದ ಮೇಲೆ ಎರಡನೇ ಪಾರ್ಟ್ ಬಿಡುಗಡೆ ದಿನಾಂಕ ನಿಗದಿ ಮಾಡಲಿದ್ದಾರಂತೆ.

  90ದಿನಗಳ ಚಿತ್ರೀಕರಣ ಮುಕ್ತಾಯ

  90ದಿನಗಳ ಚಿತ್ರೀಕರಣ ಮುಕ್ತಾಯ

  ಈಗಾಗಲೆ ಚಿತ್ರ 90 ದಿನಗಳ ಚಿತ್ರೀಕರಣ ಮುಗಿಸಿದೆಯಂತೆ. ಇನ್ನು ಕೇವಲ 60 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆಯಂತೆ. ಸದ್ಯ ಕೇರಳ ಮತ್ತು ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಮೊದಲ ಭಾಗದ ಚಿತ್ರೀಕರಣ ಮುಗಿಸಲಿದ್ದಾರಂತೆ.

  ಬಹುಭಾಷಾ ಸಿನಿಮಾ ರಿಜೆಕ್ಟ್ ಮಾಡಿದ್ದ ಜಗ್ಗೇಶ್: ಕಾರಣವೇನು?

  ಜುಲೈನಿಂದ ಎರಡನೆ ಭಾಗದ ಚಿತ್ರೀಕರಣ

  ಜುಲೈನಿಂದ ಎರಡನೆ ಭಾಗದ ಚಿತ್ರೀಕರಣ

  ಎರಡನೆ ಭಾಗದ ಚಿತ್ರೀಕರಣ ಜುಲೈ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆಯಂತೆ. ಇನ್ನು ಚಿತ್ರದ ಎರಡು ಭಾಗದಲ್ಲಿ ತಲಾ ಎರಡೆರಡು ಹಾಡುಗಳು ಮಾತ್ರ ಇರಲಿದೆಯಂತೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಪ್ರಮುಕ ಪಾತ್ರದಲ್ಲಿ ಜಗ್ಗೇಶ್

  ಪ್ರಮುಕ ಪಾತ್ರದಲ್ಲಿ ಜಗ್ಗೇಶ್

  ನೀರ್ ದೋಸೆ ಚಿತ್ರದ ಕಮಾಲ್ ಮಾಡಿದ್ದ ಜಗ್ಗೇಶ್ ಮತ್ತೆ ವಿಜಯ್ ಪ್ರಸಾದ್ ಜೊತೆ ತೋತಾಪುರಿ ಚಿತ್ರದಲ್ಲೂ ಒಂದಾಗಿದ್ದಾರೆ. ಚಿತ್ರದ ಪ್ರಮುಕ ಪಾತ್ರದಲ್ಲಿ ಜಗ್ಗೇಶ್ ಮಿಂಚಲಿದ್ದಾರೆ. ಇನ್ನು ಸುಮನ್ ರಂಗನಾಥ್ ಕೂಡ ಚಿತ್ರದಲ್ಲಿದ್ದಾರೆ. ನಟಿ ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ್ ತೋತಾಪುರಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಕೆ.ಎ ಸುರೇಶ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಭಾರಿ ಕುತೂಹಲ ಮೂಡಿಸಿರುವ ತೋತಾಪುರಿ ಹೇಗಿರಲಿದೆ ಎನ್ನುವುದಕ್ಕೆ ದಸರಾ ಹಬ್ಬದ ಸಮಯದಲ್ಲೆ ಗೊತ್ತಾಗಲಿದೆ.

  English summary
  Kannada actor jaggesh starrer Totapuri kannada film will release in two parts. This movie is directed by Vijaya prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X