Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಹಿ ಘಟನೆ ಮರೆತು ದರ್ಶನ್ ಪರ ನಿಂತ ಜಗ್ಗೇಶ್: ಆ ಘಟನೆ ಬಗ್ಗೆ ಹೇಳಿದ್ದೇನು?
ನಟ ದರ್ಶನ್ ಈಗ ಸುದ್ದಿಯ ಕೇಂದ್ರ. ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾದ ಪ್ರಚಾರ ಮಾಡಲು ಹೋಗಿದ್ದಾಗ ದರ್ಶನ್ ಮೇಲೆ ಯಾರೋ ಚಪ್ಪಲಿ ಎಸೆದಿದ್ದಾರೆ.
ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಈ ಘಟನೆಯನ್ನು ಖಂಡಿಸಿದ್ದಾರೆ.
ದರ್ಶನ್
ಮೇಲೆ
ಚಪ್ಪಲಿ
ಎಸೆತ:
ಡಿ-ಬಾಸ್
ಬೆಂಬಲಕ್ಕೆ
ನಿಂತ
ನಟರ್ಯಾರು?
ಏನು
ಹೇಳಿದರು?
ದರ್ಶನ್‌ರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಟರಾದ ವಿನೋದ್ ಪ್ರಭಾಕರ್, ಧನ್ವೀರ್ ಗೌಡ, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಸತೀಶ್ ನೀನಾಸಂ ಕೆಲವು ನಟಿಯರು ಸಹ ಟ್ವೀಟ್ ಮಾಡಿದ್ದಾರೆ. ಚಿತ್ರರಂಗದ ಹಿರಿಯ ನಟರಾಗಿರುವ ಶಿವರಾಜ್ ಕುಮಾರ್ ಸಹ ಟ್ವೀಟ್ ಮಾಡಿದ್ದಾರೆ. ಆದರೆ ವಿಶೇಷ ಎನಿಸಿದ್ದು ನಟ, ರಾಜಕಾರಣಿ ಜಗ್ಗೇಶ್ ಟ್ವೀಟ್.
ನಟ ಜಗ್ಗೇಶ್ ಸಹ ತಮ್ಮ ನಟ ಸಹೋದ್ಯೋಗಿಗೆ ಆಗಿರುವ ಅಪಮಾನವನ್ನು ಖಂಡಿಸಿ ಟ್ವೀಟ್ ಮಾಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಹಾಗೂ ತಾವು ಕಲಾವಿದನಿಗೆ ಬೆಂಬಲವಾಗಿ ನಿಂತುಕೊಳ್ಳುವುದಾಗಿ ಹೇಳಿದ್ದಾರೆ. ತಮ್ಮೊಂದಿಗೆ ನಡೆದ ಕಹಿ ಘಟನೆಯನ್ನು ಮರೆತು ಜಗ್ಗೇಶ್, ದರ್ಶನ್‌ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇದೆ ದರ್ಶನ್‌ರ ಕೆಲವು ಅಭಿಮಾನಿಗಳು ಜಗ್ಗೇಶ್ ನಟಿಸುತ್ತಿದ್ದ 'ತೋತಾಪುರಿ' ಸಿನಿಮಾದ ಶೂಟಿಂಗ್ ಸೆಟ್ ಗೆ ತೆರಳಿ ಜಗ್ಗೇಶ್ ಅನ್ನು ಸುತ್ತುವರೆದು ಹೀನಾ-ಮಾನ ಬೈದಿದ್ದರು. ನಟ ಜಗ್ಗೇಶ್, ಅದ್ಯಾರೊಟ್ಟಿಗೊ ಮಾತನಾಡುವಾಗ ದರ್ಶನ್‌ರ ಅಭಿಮಾನಿಗಳ ಬಗ್ಗೆ ಮಾತಿನ ಭರದಲ್ಲಿ ಏನೋ ಹೇಳಿದ್ದಾರೆ ಎಂದು ಹಿರಿಯ ನಟ ಜಗ್ಗೇಶ್ ಅನ್ನು ಸುತ್ತುವರೆದು ಸಮಸ್ಯೆಕೊಟ್ಟಿದ್ದರು ದರ್ಶನ್ ಅಭಿಮಾನಿಗಳು. ತಾವು ಜಗ್ಗೇಶ್ ಮೇಲೆ ಮುತ್ತಿಗೆ ಹಾಕಿ, ಅವಾಚ್ಯವಾಗಿ ಮಾತನಾಡಿರುವುದರ ವಿಡಿಯೋ ಮಾಡಿ ಹಂಚಿಕೊಂಡಿದ್ದರು.
ಆ ಬಳಿಕ ನಟ ದರ್ಶನ್ ಟಿವಿ ಸಂದರ್ಶನವೊಂದರಲ್ಲಿ ನಿರೂಪಕ ವಿವಾದದ ಬಗ್ಗೆ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸುತ್ತಾ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದರು. ದರ್ಶನ್ ಅಭಿಮಾನಿಗಳು ತಮ್ಮ ಮೇಲೆ ದಾಳಿ ಮಾಡಿದ್ದರ ಬಗ್ಗೆ ತೀವ್ರ ಅಸಮಾಧಾನವನ್ನು ನಟ ಜಗ್ಗೇಶ್ ಹೊರಹಾಕಿದ್ದರು.
ಆದರೆ ಆ ಕಹಿ ಘಟನೆಯನ್ನು ಮರೆತಿರುವ ನಟ ಜಗ್ಗೇಶ್, ನಟ ದರ್ಶನ್‌ಗೆ ಹೊಸಪೇಟೆಯಲ್ಲಿ ಅವಮಾನವಾದಾಗ ಅದನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ''ದರ್ಶನ್ ರ ಮೇಲೆ ನಿನ್ನೆ ನಡೆದ ಘಟನೆ ತಪ್ಪು ಹಾಗು ಖಂಡನೀಯ.. ದಯವಿಟ್ಟು ಕಲವಿದರನ್ನ ಹೀಗೆ ಅಪಮಾನ ಮಾಡದಿರಿ. ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷ ಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು..ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ. ಧನ್ಯವಾದ'' ಎಂದಿದ್ದಾರೆ ಜಗ್ಗೇಶ್.
ಜಗ್ಗೇಶ್‌ರ ಈ ಟ್ವೀಟ್ ಬಗ್ಗೆ ಹಲವು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ''ದರ್ಶನ ಸರ್ ಫ್ಯಾನ್ಸ್ ನಿಮ್ಮನ್ನ ಒಬ್ಬ ಹಿರಿಯ ಕಲಾವಿದರೂ ಅಂತ ನೋಡದೆ ನಿಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯನ್ನು ಮರೆತು ಕನ್ನಡದ ನಟನಿಗೆ ಅವಮಾನ ಆಗಿದೆ ಅಂದಾಗ ಅದನ್ನ ಖಂಡಿಸಿದ್ದಿರಿ ಸರ್ ಅದು ನಿಮ್ಮ ದೊಡ್ಡಗುಣ'' ಎಂದು ಅಭಿಮಾನಿಯೊಬ್ಬ ಜಗ್ಗೇಶ್‌ಗೆ ಟ್ವೀಟ್ ಮಾಡಿದ್ದಾರೆ.