For Quick Alerts
  ALLOW NOTIFICATIONS  
  For Daily Alerts

  ಮೇಘನಾಗೆ ಗಂಡು ಮಗುವಾಯಿತೆಂದು ತಿಳಿದು ತುಂಬ ಖುಷಿಯಾಯಿತು- ನಟ ಜಗ್ಗೇಶ್

  |

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ರೂಪದಲ್ಲಿ ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಸಂತಸ ಕುಟುಂಬದಲ್ಲಿ ಮನೆ ಮಾಡಿದೆ. ಚಿರಂಜೀವಿ ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬದಲ್ಲಿ 4 ತಿಂಗಳ ಬಳಿಕ ಸಂಭ್ರಮ ತುಂಬಿದೆ.

  ಜೂ.ಚಿರನನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸರ್ಜಾ ಕುಟುಂಬದಲ್ಲಿ ಈ ನಗು ಹೀಗೆ ಇರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಮೇಘನಾ ರಾಜ್ ಗೆ ಗಂಡು ಮಗುವಾದ ಬಗ್ಗೆ ನಟ ಜಗ್ಗೇಶ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನವರಸನಾಯಕ ಜಗ್ಗೇಶ್ ಮೇಘನಾಗೆ ಗಂಡು ಮಗುವಾಯಿತು ಎಂದು ತಿಳಿದು ತುಂಬಾ ಖುಷಿಯಾಯಿತು ಎಂದಿದ್ದಾರೆ. ಮುಂದೆ ಓದಿ...

  ಮೊಮ್ಮಗನನ್ನು ನೋಡಲು ಚೆನ್ನೈನಿಂದ ಹೊರಟ ನಟ ಅರ್ಜುನ್ ಸರ್ಜಾ

  ಚಿರು ನೆನೆದು ಅರ್ಜುನ್ ತುಂಬಾ ಸಂಕಟ ಪಟ್ಟರು- ಜಗ್ಗೇಶ್

  ಚಿರು ನೆನೆದು ಅರ್ಜುನ್ ತುಂಬಾ ಸಂಕಟ ಪಟ್ಟರು- ಜಗ್ಗೇಶ್

  ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ನಟ. ಇದೀಗ ಮೇಘನಾಗೆ ಮಗುವಾಗಿರುವ ಬಗ್ಗೆ ಸಂತಸವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮೇಘನಾ ಬಗ್ಗೆ ಅರ್ಜುನ್ ಸರ್ಜಾ ಜೊತೆ ಫೋನ್ ನಲ್ಲಿ ಮಾತನಾಡಿರುವುದಾಗಿ ಹೇಳಿದ್ದಾರೆ. ಚಿರು ನೆನೆದು ಅರ್ಜುನ್ ಸರ್ಜಾ ತುಂಬಾ ಸಂಕಟಪಟ್ಟರು ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

  ಮೇಘನಾ ಬಗ್ಗೆ ಜಗ್ಗೇಶ್ ಟ್ವೀಟ್

  ಮೇಘನಾ ಬಗ್ಗೆ ಜಗ್ಗೇಶ್ ಟ್ವೀಟ್

  ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ಮೇಘನಾಗೆ ಗಂಡು ಮಗು ಆಯಿತು ಎಂದು ತಿಳಿದು ತುಂಬ ಖುಷಿಯಾಯಿತು. ನಿನ್ನೆ ಅರ್ಜುನ ಸರ್ಜಾ ನಾನು ದೂರವಾಣಿಯಲ್ಲಿ ಮೇಘನಾ ಬಗ್ಗೆ ಮಾತಾಡುತ್ತಿದ್ದೆವು, ಪಾಪ ಚಿರು ನೆನೆದು ಬಹಳ ಸಂಕಟ ಪಟ್ಟರು ಅರ್ಜುನ. ದೇವರು ಕರುಣಾಮಯ ಮತ್ತೆ ಚಿರು ಹುಟ್ಟಿಬಂದ ಅನ್ನಿಸಿತು. ಮಗುವಿಗೆ ರಾಯರು ಆಯುರ್ಆರೋಗ್ಯ ಕರುಣಿಸಿ ಶ್ರೇಷ್ಠ ಸಾಧಕನಾಗಲಿ ಎಂದು ಪ್ರಾರ್ಥನೆ. Godbless ಮೇಘನಾ." ಎಂದು ಶುಭ ಹಾರೈಸಿದ್ದಾರೆ.

  ಮೊಮ್ಮಗನನ್ನು ನೋಡಿದ ಚಿರು ತಾಯಿ ಹೇಳಿದ್ದು ಹೀಗೆ

  ವೈರಲ್ ಆಗಿದೆ ಜೂ.ಚಿರು ಫೋಟೋ

  ವೈರಲ್ ಆಗಿದೆ ಜೂ.ಚಿರು ಫೋಟೋ

  ಮೇಘನಾಗೆ ಎಲ್ಲಾ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಮೇಘನಾ ರಾಜ್ ಸದ್ಯ ಅಕ್ಷ ಆಸ್ಪತ್ರೆಯಲ್ಲಿದ್ದಾರೆ. ಮೇಘನಾ ಕುಟುಂಬ ಮತ್ತು ಸರ್ಜಾ ಕುಟುಂಬ ಸಹ ಮೇಘನಾ ಜೊತೆ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ ಮಗುವಿನ ಫೋಟೋ ಮತ್ತು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುದ್ದಾದ ಮಗುವನ್ನು ನೋಡಿ ಎಲ್ಲರೂ ಸಂತಸ ಪಡುತ್ತಿದ್ದಾರೆ.

  ಬೆಂಗಳೂರಿಗೆ ಬರ್ತಿರುವ ಅರ್ಜುನ್ ಸರ್ಜಾ

  ಬೆಂಗಳೂರಿಗೆ ಬರ್ತಿರುವ ಅರ್ಜುನ್ ಸರ್ಜಾ

  ಇಂದು ಅರ್ಜುನ್ ಸರ್ಜಾ ಕುಟುಂಬ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಹೀಗೆ ಚೆನ್ನೈನಿಂದ ಓಡಿ ಬಂದಿದ್ದೆ. ಈಗ ಅವನ ಮಗು ನೋಡಲು ಬರ್ತಿರುವುದಾಗಿ ಹೇಳಿದ್ದಾರೆ. ಜೂ.ಚಿರು ಆಗಮನದ ಬಗ್ಗೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Actor Jaggesh Talks about Meghana Raj And Chiranjeevi sarja's baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X