For Quick Alerts
  ALLOW NOTIFICATIONS  
  For Daily Alerts

  'ಆತ ಸಿಂಹದ ಮರಿ, ಏನು ಮಾಡಿದರು ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ' ಎಂದು ಜಗ್ಗೇಶ್ ಹೇಳಿದ್ದು ಯಾರಿಗೆ?

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಇತ್ತೀಚಿಗೆ ಸದ್ದು ಸುದ್ದಿಯಲ್ಲಿರುವ ನಟ. ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ಜಗ್ಗೇಶ್ ವಿರುದ್ಧ ಅನೇಕರು ಮುಗಿಬಿದ್ದಿದ್ದರು. ಸಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಟ್ವೀಟ್ ಗಳನ್ನು ಮಾಡುವ ಮೂಲಕ ಜಗ್ಗೇಶ್ ವಿರುದ್ಧ ಟೀಕಾಸ್ತ್ರ ನಡೆಸಿದ ಅನೇಕರಿಗೆ ಉತ್ತರ ನೀಡುತ್ತಿದ್ದಾರೆ.

  ಈ ನಡುವೆ ಜಗ್ಗೇಶ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರನ್ನು ಹಾಡಿ ಹೊಗಳಿದ್ದಾರೆ. ಆತ ಸಿಂಹದ ಮರಿ ಏನು ಮಾಡಿದರು ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟಕ್ಕು ಜಗ್ಗೇಶ್ ಹೇಳಿದ್ದು ಯಾರ ಬಗ್ಗೆ ಅಂತೀರಾ? ಮತ್ಯಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ.

  ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದರೆ ನವರಸನಾಯಕ ಜಗ್ಗೇಶ್ ಗೆೆ ತುಂಬಾ ಪ್ರೀತಿ ಎನ್ನುವುದು ಅನೇಕರಿಗೆ ಗೊತ್ತಿರುವ ವಿಚಾರ. ಇದೀಗ ಪುನೀತ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಸದ್ಯ ಚಿತ್ರದಿಂದ ಪವರ್ ಫುಲ್ ಹಾಡು ರಿಲೀಸ್ ಆಗುತ್ತಿದೆ.

  ಈಗಾಗಲೇ ಪವರ್ ಆಫ್ ಯೂತ್ ಹಾಡಿನ ಪ್ರೋಮೋ ರಿಲೀಸ್ ಮಾಡಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಬಗ್ಗೆ ಅಭಿಮಾನಿಯೊಬ್ಬ ಪ್ರೋಮೋ ನೋಡಿದ್ದೀರಾ? ಎಂದು ಜಗ್ಗೇಶ್ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಗ್ಗೇಶ್,

  ಆತ ನನ್ನ ಯಜಮಾನರ ಮಗ ಎಂದ ಜಗ್ಗೇಶ್ | Filmibeat Kannada

  'ಆತ ಸಿಂಹದಮರಿ ಏನು ಮಾಡಿದರು ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ. ಶಬ್ದ ಮಾಡದೆ ಹೆಜ್ಜೆ ಹಾಕುವ ನಾಡದೇವಿ ಹೊರುವ ಅರ್ಜುನನಂತ ಆನೆ. ನನ್ನ ಯಜಮಾನನ ಮುದ್ದಿನ ಮಗ. ಜೊತೆಗೆ ನನ್ನ ಹೆಮ್ಮೆಯ ಹುಡುಗ ನಿರ್ದೇಶಕ ಸಂತೋಷ ಆನಂದರಾಮನ combo. ಅವ ಮುಟ್ಟಿದ್ದೆಲ್ಲಾ ಚಿನ್ನ' ಎಂದು ಟ್ವೀಟ್ ಮಾಡಿದ್ದಾರೆ.

  ಅಂದಹಾಗೆ ಯುವರತ್ನ ಸಿನಿಮಾದ ಬಹುನಿರೀಕ್ಷೆಯ ಹಾಡು ಡಿಸೆಂಬರ್ 2ರಂದು ರಿಲೀಸ್ ಆಗುತ್ತಿದೆ. ಈ ಹಾಡಿನಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಹೆಜ್ಜೆಹಾಕುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಹಾಡನ್ನು ಬರೆದಿದ್ದು, ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಿದ್ದಾರೆ.

  English summary
  Kannada Actor Jaggesh talks about Puneeth Rajkumar starrer Yuvaratna movie song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X