»   » ದರ್ಶನ್ ವ್ಯಕ್ತಿತ್ವದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

ದರ್ಶನ್ ವ್ಯಕ್ತಿತ್ವದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ದೇವರ ರೀತಿ ಪೂಜಿಸುವ ಅಭಿಮಾನಿಗಳು ಸಾಕಷ್ಟು ಮಂದಿ.! 'ಡಿ' ಬಾಸ್ ಗೆ ಜೈಕಾರ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಸಾಗರವೇ ಇದೆ.

ಹೀಗಿರುವಾಗಲೇ, 'ದಾಸ' ದರ್ಶನ್ ಬಗ್ಗೆ ನಟ ಜಗ್ಗೇಶ್ ಒಂದು ಕಾಮೆಂಟ್ ಮಾಡಿದ್ದಾರೆ. ಫ್ಯಾನ್ಸ್ ಗೂ ಜಗ್ಗೇಶ್ ಕಾಮೆಂಟ್ ಗೂ ಏನು ಸಂಬಂಧ ಅಂತ ಯೋಚನೆ ಮಾಡುತ್ತಿದ್ದರೆ, ಪೂರ್ತಿ ಮ್ಯಾಟರ್ ಓದ್ಕೊಂಡ್ ಬನ್ನಿ....

ಮೊದಲು ಜಗ್ಗೇಶ್ ಟ್ವೀಟ್ ನೋಡ್ಬಿಡಿ...

''ಭಾವನಾಜೀವಿ.. ಸದಾ ಪ್ರೀತಿಯಿಂದ ಬಾಳುವ ಗುಣದವ.. ನನ್ನಂತೆ ಏಕಾಂಗಿತನ ಇಷ್ಟ.. ನಂಬಿದರೆ ಮಾತ್ರ ಬೆರೆಯುವ.. ಇಷ್ಟವಾಗದಿದ್ದರೆ ಟಾಟಾ ಅದರೂ ಟಾಟಾ ಹೇಳುತ್ತಾನೆ.. ಸ್ವಾಭಿಮಾನಿ..'' ಎಂದು ನಟ ದರ್ಶನ್ ಬಗ್ಗೆ ಜಗ್ಗೇಶ್ ಕಾಮೆಂಟ್ ಮಾಡಿದ್ದಾರೆ.

ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ

ದರ್ಶನ್ ಬಗ್ಗೆ ನಟ ಜಗ್ಗೇಶ್ ಹೀಗೆ ಇದ್ದಕ್ಕಿದ್ದಂತೆ ಟ್ವೀಟ್ ಮಾಡುವುದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ರವರ ಅಪ್ಪಟ ಅಭಿಮಾನಿ.

ಅಂದು ಜಗ್ಗೇಶ್ ಹೇಳಿದ್ದು ಹೀಗೆ...

ಸರಿಯಾಗಿ ಒಂದು ವರ್ಷದ ಹಿಂದೆ ದರ್ಶನ್ ರವರ ಒಂದು ಫೋಟೋ ಜೊತೆಗೆ ''ನಿನ್ನ ಈ ನಗುವಿಲ್ಲಿ ನಿಮ್ಮ ತಂದೆಯನ್ನ ನೋಡಿದಂತಾಯಿತು. ನಿಮ್ಮ ಮುಂದಿನ ಚಿತ್ರಕ್ಕೆ ಒಳ್ಳೆಯದಾಗಲಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಆ ಟ್ವೀಟ್ ನ ನೆನಪಿಸಿಕೊಂಡ ದರ್ಶನ್ ಅಭಿಮಾನಿಯೊಬ್ಬ, ''ನಿಮ್ಮ ಪ್ರೀತಿ ದರ್ಶನ್ ಮೇಲೆ ಸದಾ ಇರಲಿ'' ಎಂದು ಜಗ್ಗೇಶ್ ಗೆ ಟ್ವಿಟ್ಟರ್ ಸಂದೇಶ ಕಳುಹಿಸಿದ್ದರು.

ಜಗ್ಗೇಶ್ ಟ್ವೀಟ್ ವೈರಲ್

ಅಭಿಮಾನಿಯ ಟ್ವೀಟ್ ಕಂಡ ಜಗ್ಗೇಶ್, ದರ್ಶನ್ ಮೇಲೆ ತಾವು ಇಟ್ಟಿರುವ ಅಭಿಮಾನ, ಪ್ರೀತಿಯನ್ನ ಟ್ವಿಟ್ಟರ್ ಮೂಲಕವೇ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಜಗ್ಗೇಶ್ ಮಾಡಿರುವ ಈ ಟ್ವೀಟ್ ಟ್ವಿಟ್ಟರ್ ಲೋಕದಲ್ಲಿ ವೈರಲ್ ಆಗಿದೆ.

English summary
Kannada Actor Jaggesh tweets about Challenging Star Darshan. Take a look at Jaggesh's tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada