For Quick Alerts
  ALLOW NOTIFICATIONS  
  For Daily Alerts

  ಮಾರುವೇಷದಲ್ಲಿ 'KGF' ನೋಡಿದ ಜಗ್ಗೇಶ್ : ದರ್ಶನ್ ಫ್ಯಾನ್ ಮಾತಿಗೆ ಜಗ್ಗೇಶ್ ಭಾವುಕ

  |
  KGF Kannada Movie: ಮಾರುವೇಷದಲ್ಲಿ 'KGF' ನೋಡಿದ ನಟ | FILMIBEAT KANNADA

  'ಕೆಜಿಎಫ್', 'ಕೆಜಿಎಫ್', 'ಕೆಜಿಎಫ್' ಎಲ್ಲಿ ನೋಡಿದರು ಈ ಸಿನಿಮಾದ ಬಗ್ಗೆಯೇ ಮಾತು. ಕೋಲಾರದ ಸಣ್ಣ ಹಳ್ಳಿಯಿಂದ ಹಿಡಿದು ಮುಂಬೈನ ಬೀದಿಯವರೆಗೆ ಈ ಚಿತ್ರ ಸದ್ದು ಮಾಡುತ್ತಿದೆ. ಈ ಹೆಮ್ಮೆಯ ಸಿನಿಮಾ ಕನ್ನಡ ಚಿತ್ರರಂಗದ ಘನತೆ ಹೆಚ್ಚಿಸಿದೆ.

  ಈ ಸಿನಿಮಾವನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈಗ ನಟ ಜಗ್ಗೇಶ್ ಕೂಡ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ.

  ಕೆಜಿಎಫ್ ನೋಡಿ ಸೀಟಿನಿಂದ ಜಂಪ್ ಮಾಡಿದ್ರಂತೆ ರಶ್ಮಿಕಾ.!

  ಜಗ್ಗೇಶ್ ಈ ಸಿನಿಮಾವನ್ನು ಗಾಂಧಿ ಕ್ಲಾಸ್ ನಲ್ಲಿ ಕುಳಿತು ನೋಡಿದ್ದಾರೆ. ಮಂಕಿ ಕ್ಲಾಪ್ ಹಾಕಿಕೊಂಡು ಯಾರಿಗೂ ತಿಳಿಯದ ರೀತಿ ಮಾರುವೇಷದಲ್ಲಿ ಸಿನಿಮಾ ನೋಡಿ ಬಂದಿದ್ದಾರೆ. 'ಕೆಜಿಎಫ್' ಸಿನಿಮಾ ನೋಡಿದ ತಮ್ಮ ಈ ಅನುಭವವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಮಾರುವೇಷದಲ್ಲಿ ಸಿನಿಮಾ ದರ್ಶನ

  ಮಾರುವೇಷದಲ್ಲಿ ಸಿನಿಮಾ ದರ್ಶನ

  ''ಲುಂಗಿ ಹವಾಯ್ ಚಪ್ಪಲಿ ಮಂಕಿ ಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ ಹೋಗಿ 'ಕೆಜಿಎಫ್' ನೋಡಿದೆ. 38 ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು!. ಹಾಗೆ ಹೋದದ್ದು ಸಾಮಾನ್ಯ ಜೀವನ ಏಂಜಾಯ್ ಮಾಡಲು. ಕಾರಾಪುರಿ ಟೀ ಮಧ್ಯಂತರದಲ್ಲಿ ಮಜಾ ನೀಡಿತು. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ ಕಾರಣ ಏಕಾಂತ ವಾತಾವರಣ.'' - ಜಗ್ಗೇಶ್, ನಟ

  ದರ್ಶನ್ ಅಭಿಮಾನಿಯ ಮಾತು

  'ಕೆಜಿಎಫ್' ನನ್ನ ಪಕ್ಕ ಸುಮಾರು 17ರ ಪ್ರಾಯದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ!. ಅವನ ಜೊತೆ ದ್ವನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ. ಪ್ರತಿ ಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ!. ಅವನು ಪಕ್ಕ ದರ್ಶನ ಫ್ಯಾನ್ ಅಂತೆ!. ಅವನು ಹೇಳಿದ ಮಾತು ಕಣ್ಣು ಒದ್ದೆಯಾಯಿತು!. ಕನ್ನಡ ಗೆಲ್ಲಬೇಕು ಸಾರ್. ಮಗಂದು ಬರಿ ಬೇರೆ ಭಾಷೆಗೆ ಜೈ ಅಂತಾರೆ ಈಗ ಅವರ ಪುಂಗಿಬಂದ್ ಅಂದ'' - ಜಗ್ಗೇಶ್, ನಟ

  ಜೂನಿಯರ್ ರಾಕಿಗೆ ಸಿಕ್ತು ಮತ್ತೊಂದು ದೊಡ್ಡ ಅವಕಾಶ

  ಸಾರ್ಥಕ ಸಾಧನೆ ಮಾಡಿಬಿಟ್ಟ

  ಸಾರ್ಥಕ ಸಾಧನೆ ಮಾಡಿಬಿಟ್ಟ

  2 ಅಕ್ಷರದ ನಟ 3 ಅಕ್ಷರದ ಮನಗಳ 2 ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ hats off dear.. ಯಶ್ ಕನ್ನಡ ಮನಗಳ ಖುಷಿ ಪಡಿಸಿದ ನಿರ್ದೇಶಕ ನೀಲ್ ನೀನು ಅಸಮಾನ್ಯ ಪ್ರತಿಭೆ. ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ ಮಾಡಿಬಿಟ್ಟಿರಿ. ಹೊಂಬಾಳೆ ಫಿಲ್ಮ್ಸ್ ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ.. 'ಕೆಜಿಎಫ್' ನೋಡಿ ಖುಷ್ ಆದೆ.'' - ಜಗ್ಗೇಶ್, ನಟ

  ಒಳ್ಳೆಯ ಸಿನಿಮಾದ ಪರ ನಿಂತ ಜಗ್ಗೇಶ್

  ಒಳ್ಳೆಯ ಸಿನಿಮಾದ ಪರ ನಿಂತ ಜಗ್ಗೇಶ್

  ನಟ ಜಗ್ಗೇಶ್ ಕನ್ನಡ ಸಿನಿಮಾ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡವರು. ಈಗ ಅದೇ ರೀತಿ 'ಕೆಜಿಎಫ್' ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಬಾಲಿವುಡ್ ನ 'ಜೀರೋ' ಸಿನಿಮಾವನ್ನೇ ಹಿಂದಿಕ್ಕಿ ಈ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಗಳಿಕೆ ಮಾಡಿದೆ.

  'ಕೆಜಿಎಫ್' ಬಗ್ಗೆ ರಾಮ್ ಗೋಪಾಲ್ ವರ್ಮ ಟ್ವೀಟ್

  English summary
  Kannada actor Jaggesh tweets about 'KGF' kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X