For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ಚಕ್ರವರ್ತಿಯ ಸ್ಮಾರಕದ ನಿರ್ಮಾಣದ ಬಗ್ಗೆ ಮಾತು ಕೊಟ್ಟ ಜಗ್ಗೇಶ್

  |

  ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಸ್ಮಾರಕದ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

  ''ಜಗ್ಗೇಶ್, ಕರ್ನಾಟಕದ ಜನರ ಹೃದಯ ಗೆದ್ದ ಹಾಸ್ಯ ನಟ ದಿ.ನರಸಿಂಹರಾಜು ಅವರ ಹೆಸರಲ್ಲಿ ಅವರ ನೆನಪು ಉಳಿಸಲು ತಿಪಟೂರಿನಲ್ಲಿ ಸ್ಮಾರಕ ಮಾಡಲಾಗುವುದು ಎಂದು ಒಂದು ಕಾರ್ಯಕ್ರಮದಲ್ಲಿ ಅವರ ಶ್ರೀಮತಿಯವರಿಗೆ ಆಶ್ವಾಸನೆ ನೀಡಿದ್ದ ನೆನಪು. ಅದೇನಾದರೂ ಕಾರ್ಯಗತ ಆಗ್ತಿದೆಯಾ, ಮಾನ್ಯ ಯಡಿಯೂರಪ್ಪರವರು ಮನಸ್ಸು ಮಾಡಿದ್ದಾರಾ?'' ಎಂದು ಜಗ್ಗೇಶ್ ಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ ಬಂತು.

  'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು'ಅನ್ನ ಕಿತ್ತುತಿನ್ನೋ ರಣಹದ್ದು ಬಂದರೂ ನಗುವಿನಲ್ಲಿ ನೋಡುವ ಬಂಗಾರದ ಹೃದಯ': ರಕ್ಷಿತ್ ಬಗ್ಗೆ ಜಗ್ಗೇಶ್ ಮಾತು

  ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ''ಖಂಡಿತ.. ನಾನು ಹಾಗೂ ಸನ್ಮಾನ್ಯ ಶಾಸಕ ಮಿತ್ರ ನಾಗೇಶ್ ರವರು ಆ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿರುವೆವು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶ್ರೀಮತಿ ನರಸಿಂಹರಾಜು ರವರ ಮಡದಿಗೆ ಕಳೆದ ವಾರ ಮಾಹಿತಿ ನೀಡಿರುವೆ. ನಗಿಸಿದ ದೇವರಿಗೆ ಕಂಡಿತ ನೆನಪಿನ ಸ್ಮಾರಕ ಆಗುತ್ತದೆ. ಧನ್ಯವಾದಗಳು'' ಎಂದಿದ್ದಾರೆ.

  ನರಸಿಂಹರಾಜು ಹುಟ್ಟೂರು ತಿಪಟೂರಿನಲ್ಲಿ ಅವರ ಸ್ಮಾರಕ ಆಗಬೇಕು ಎನ್ನುವ ಮನವಿಗೆ ಜಗ್ಗೇಶ್ ಸ್ಪಂದಿಸಿದ್ದು, ಅವರ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

  ನರಸಿಂಹ ರಾಜು ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ 55 ವರ್ಷಕ್ಕೆ ನರಸಿಂಹರಾಜು ವಿಧಿವಶರಾಗಿದ್ದರು.

  English summary
  Kannada actor Jaggesh tweets about Narasimharaju Monument.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X