For Quick Alerts
  ALLOW NOTIFICATIONS  
  For Daily Alerts

  50 ಡೇಸ್, 100 ಡೇಸ್ ಎಂಬ ಬಿಲ್ಡಪ್ ನಮಗೆ ಬೇಡ - ಜಗ್ಗೇಶ್

  |
  ತಮ್ಮ ಸಿನಿಮಾ ಪ್ರೀಮಿಯರ್ ಪದ್ಮಿನಿ 50 ಡೇಸ್ ಪೂರೈಸಿದರೂ ಜಗ್ಗೇಶ್ ಗೆ ಬೇಸರ ಯಾಕೆ? | FILMIBEAT KANNADA

  ''ನಾವು ಇಲ್ಲಿ ಒಳ್ಳೆಯ ಸಿನಿಮಾ ಮಾಡಿ, ನಾಲ್ಕು ಕಾಸು ಮಾಡಿಕೊಳ್ಳಲು ಬಂದಿದ್ದೇವೆ. ಅದು ಬಿಟ್ಟು ಯಾರ ಮೇಲೆ ಕಾಂಪಿಟೇಶನ್ ನಡೆಸಲು ಅಲ್ಲ'' ಎಂದು ನಟ ಜಗ್ಗೇಶ್ ಹೇಳಿದ್ದಾರೆ.

  ಜಗ್ಗೇಶ್ ನಟನೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾ 50 ದಿನವನ್ನು ಪೂರೈಸಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೊಷ್ಠಿ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್ ಖುಷಿಗಿಂತ ಹೆಚ್ಚು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

  ಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆ

  ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಕೆಟ್ಟ ವ್ಯವಸ್ಥೆ ಬಗ್ಗೆ ನವರಸ ನಾಯಕ ಆಕ್ರೋಶಗೊಂಡರು. ಅನೇಕ ಸಿನಿಮಾಗಳು 50 ದಿನ 100 ಎಂದು ಹೇಳುತ್ತಾರೆ ಆದರೆ, ಸಿಂಗಲ್ ಸ್ಕ್ರೀನ್ಸ್ ವ್ಯವಸ್ಥೆಯಿಂದ ನಿರ್ಮಾಪಕರಿಗೆ ಹಣ ಸಿಗುವುದಿದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಮಾಲ್ ನಿಂದ ಕನ್ನಡ ಚಿತ್ರರಂಗಕ್ಕೆ ಸಹಾಯ ಆಗುತ್ತಿದ್ದು, ಅದೇ ರೀತಿ ತಮ್ಮ 'ಪ್ರೀಮಿಯರ್ ಪದ್ಮಿನಿ' ಕೂಡ ಹಣ ಮಾಡಿದೆ ಎಂದು ಜಗ್ಗೇಶ್ ಮಾತನಾಡಿದ್ದಾರೆ. ಮುಂದೆ ಓದಿ...

  ಪ್ರಯೋಗಾತ್ಮಕ ಸಿನಿಮಾಗಳು ಬೇಡವೇ

  ಪ್ರಯೋಗಾತ್ಮಕ ಸಿನಿಮಾಗಳು ಬೇಡವೇ

  ''ಒಬ್ಬ ಕಮರ್ಷಿಯಲ್ ನಟನನ್ನು ಪ್ರಯೋಗಾತ್ಮಕವಾಗಿ ನಿರ್ದೇಶಕರು ತೋರಿಸಿದ್ದಾರೆ. ಒಬ್ಬ ಕಲಾವಿದ ಒಂದೇ ಶೈಲಿಯ ಪಾತ್ರಗಳಿಗೆ ಬ್ರಾಂಡ್ ಆಗಿದ್ದಾಗ ಅವನು ಬೆಳೆಯುವುದಿಲ್ಲ. ಪ್ರತಿ ಕಲಾವಿದನಿಗೂ ಒಂದು ಆಸೆ ಇರುತ್ತದೆ. ಆದರೆ, ಅಂತಹ ಪಾತ್ರಗಳು ಬೇಡ ಎನ್ನುವುದು ತುಂಬ ನೋವಾಗುತ್ತದೆ. ಇನ್ನು ಮುಂದೆ ನಾನು ಕಾಮಿಡಿ ಸಿನಿಮಾಗಳನೇ ಮಾಡುತ್ತೇನೆ.''

  ಸಾವಿರದಿಂದ 400ಕ್ಕೆ ಇಳಿದಿವೆ ಸಿಂಗಲ್ ಸ್ಕ್ರೀನ್

  ಸಾವಿರದಿಂದ 400ಕ್ಕೆ ಇಳಿದಿವೆ ಸಿಂಗಲ್ ಸ್ಕ್ರೀನ್

  ''ನಾನು ಒಬ್ಬ ನಿರ್ಮಾಪಕ, ವಿತರಕ ಚಿತ್ರರಂಗದ ಎಲ್ಲ ವಿವರ ಗೊತ್ತು. ನಮ್ಮ ಸಿನಿಮಾ ಎಷ್ಟು ಚಿತ್ರಮಂದಿರದಲ್ಲಿ ಓಡಿದೆ ಎಂದು ಕೇಳುತ್ತಾರೆ. ಆದರೆ, ರಾಜ್ಯದಲ್ಲಿ ಮೂರು ವರ್ಗದ ಚಿತ್ರಮಂದಿರಗಳು ಇವೆ. ಈಗ ಸಾವಿರದಿಂದ 400ಕ್ಕೆ ಸಿಂಗಲ್ ಸ್ಕ್ರೀನ್ ಗಳು ಇಳಿದಿವೆ. ಮಾಲ್ ನಲ್ಲಿ 500 - 600 ಸ್ಕ್ರೀನ್ ಗಳು ಇವೆ. ಅದು ಬಿಟ್ಟರೆ ಎಲ್ಲ ಚಿತ್ರಮಂದಿರಗಳು ಬರ್ನ್ ಆಗಿವೆ.''

  ಬಹುಭಾಷಾ ಸಿನಿಮಾ ರಿಜೆಕ್ಟ್ ಮಾಡಿದ್ದ ಜಗ್ಗೇಶ್: ಕಾರಣವೇನು?

  ಮಾಲ್ ಗಳೇ ಕನ್ನಡ ಸಿನಿಮಾಗೆ ಜೀವನಾಡಿ

  ಮಾಲ್ ಗಳೇ ಕನ್ನಡ ಸಿನಿಮಾಗೆ ಜೀವನಾಡಿ

  ''ನಾನು ದುಡ್ಡು ಕೊಟ್ಟು ಫ್ಯಾನ್, ಎಸಿ ಇಲ್ಲದ, ಕಚ್ಚಡ ಟ್ಯಾಲೆಂಟ್ ಇರುವ ಚಿತ್ರಮಂದಿರದಲ್ಲಿ ಯಾಕೆ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರು ಸಿನಿಮಾ ನೋಡುವುದನ್ನು ನಿಲ್ಲಿಸಿದ್ದಾರೆ. ಆದರೆ, ಯಾವ ಚಿತ್ರಮಂದಿರದ ಮಾಲೀಕರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇಂದು ಕನ್ನಡ ಚಿತ್ರರಂಗಕ್ಕೆ ಜೀವನಾಡಿ ಆಗಿರುವುದು ಮಾಲ್ ಗಳೇ.''

  ಇಂತಹ ಸಿನಿಮಾಗಳೇ ಹೆಚ್ಚು ದುಡ್ಡು ಮಾಡುತ್ತವೆ

  ಇಂತಹ ಸಿನಿಮಾಗಳೇ ಹೆಚ್ಚು ದುಡ್ಡು ಮಾಡುತ್ತವೆ

  ''ನಮ್ಮ ಸಿನಿಮಾ ಕೂಡ ಸಿಂಗಲ್ ಸ್ಕ್ರೀನ್ ನಲ್ಲಿ ಹೋಗಿಲ್ಲ. ಗಾಂಧಿನಗರದ ಸಿಂಗಲ್ ಸ್ಕ್ರೀನ್ ಬಾಡಿಗೆ ಕೂಡ ಜಾಸ್ತಿ ಇದೆ. 50 ದಿನ ಸಿನಿಮಾ ಓಡಿದರೂ ಶೇರ್ ಸೊನ್ನೆ ಇರುತ್ತದೆ. ಆದರೆ, ಪೇಪರ್ ನಲ್ಲಿ 50 ಡೇಸ್, 100 ಡೇಸ್ ಎಂದು ಬರುತ್ತದೆ. ಹಾಗೆ ಹಾಕಿದ ಚಿತ್ರಗಳಿಗಿಂತ ಇಂತಹ ಸಿನಿಮಾಗಳು ಹೆಚ್ಚು ದುಡ್ಡು ಮಾಡುತ್ತಿದೆ.

  ನಮಗೆ ಬಿಲ್ಡಪ್ ಬೇಡ, ನಾವು ಗೆಲ್ಲಬೇಕು

  ನಮಗೆ ಬಿಲ್ಡಪ್ ಬೇಡ, ನಾವು ಗೆಲ್ಲಬೇಕು

  ''ನಮಗೆ ಇಂತಹ ಬಿಲ್ಡಪ್ ಬೇಡ. ನಾವು ಗೆಲ್ಲಬೇಕು. ನಮಗೆ ಹಾಕಿರುವ ದುಡ್ಡು ಬರಬೇಕು. ನಾವು ಯಾರಿಗೂ ಕಾಂಪಿಟೇಶನ್ ನೀಡಲು ಬಂದಿಲ್ಲ. ಒಳ್ಳೆಯ ಸಿನಿಮಾ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಬೇಕೆ ವಿನಃ ಗಲಾಟೆ ಮಾಡಲು ಬಂದಿಲ್ಲ. ಬುದ್ದಿವಂತ ತನಗೆ ಬಂದಿದನ್ನು ಡಂಗುರ ಹೊಡೆಯುವುದಿಲ್ಲ.''

  ಯಾರ ಮುಂದೆಯೂ ಬಿಕ್ಷೆ ಬೇಡುವುದಿಲ್ಲ

  ಯಾರ ಮುಂದೆಯೂ ಬಿಕ್ಷೆ ಬೇಡುವುದಿಲ್ಲ

  ''ತಮಿಳು ನಾಡು, ಆಂಧ್ರದಲ್ಲಿ ಅವರವರ ಭಾಷೆಯ ಸಿನಿಮಾ ಮಾತ್ರ ನೋಡುತ್ತಾರೆ. ಅದಕ್ಕೆ ಅವರ ಸಿನಿಮಾಗಳಿಗೆ ಸಮಸ್ಯೆ ಆಗುವುದಿಲ್ಲ. ಆದರೆ, ಇಲ್ಲಿ ಯಾಕೆ ಕನ್ನಡ ಸಿನಿಮಾ ನೋಡಬೇಕು ಎನ್ನುತ್ತಾರೆ. ನೀವು ಯಾವುದಾದರು ಸಿನಿಮಾ ನೋಡಿ. ನಾವು ನಿಮ್ಮ ಬಳಿ ನಮ್ಮ ಸಿನಿಮಾ ನೋಡಿ ಎಂದು ಬಿಕ್ಷೆ ಬೇಡುವುದಿಲ್ಲ.''

  English summary
  Kannada actor Jaggesh unhappy with single screen theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X