For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಗೆ ಬಂದ ರಕ್ಷಿತ್ ಶೆಟ್ಟಿಗೆ ಸಲಹೆ ನೀಡಿದ ಜಗ್ಗೇಶ್

  |
  ರಕ್ಷಿತ್ ಶೆಟ್ಟಿ ಟಿಟ್ಟರ್ ಎಂಟ್ರಿ ಕೊಟ್ಟಿದ್ದಕ್ಕೆ ಜಗ್ಗೇಶ್‍ರಿಂದ ಸ್ವಾಗತ | FILMIBEAT KANNADA

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತೆ ಟ್ವಿಟ್ಟರ್ ಲೋಕಕ್ಕೆ ವಾಪಸ್ ಬಂದಿದ್ದಾರೆ. ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬಂದ ರಕ್ಷಿತ್ ಗೆ ಜಗ್ಗೇಶ್ ಒಂದು ಸಲಹೆ ನೀಡಿದ್ದಾರೆ.

  ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ?

  'ಚಂಡಮಾರುತ ಬರುವ ಮುನ್ನ ಮೌನವಾಗುತ್ತದೆಯೇ..?' ಎಂದು ರಕ್ಷಿತ್ ಮೊದಲ ಟ್ವೀಟ್ ಮಾಡಿದ್ದರು. ಇದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಜಗ್ಗೇಶ್ ರಕ್ಷಿತ್ ಗೆ ಸ್ವಾಗತ ಮಾಡಿದ್ದಾರೆ.

  ''ತಾಳಿದವ ಬಾಳುತ್ತಾನೆ, ಮೌನ ಹರಿತವಾದ ಆಯುಧ, ನಗು ಎಲ್ಲಾ ಗುಣಕ್ಕು ಶ್ರೇಷ್ಟ ಉತ್ತರ. ತನ್ನಂಬಿಕೆ ಇದ್ದವ ಜಗಗೆಲ್ಲುವ. ಅಪಮಾನ ಗೆಲುವಿಗೆ ರಹದಾರಿ. ಮಾತಿಗಿಂತ ಕೃತಿ ಶ್ರೇಷ್ಟ. ಆರ್ಭಟಿಸುವವ ಆಂತರ್ಯದಲ್ಲಿ ಭಯಸ್ತ. ಗೆಲ್ಲುವ ಛಲದವ ಸದ್ದು ಮಾಡದವ. ಈ ಎಲ್ಲಾ ಗುಣ ನಿನ್ನಲ್ಲಿದೆ. ಮುಂದಿನ ಗೆಲುವು ನಿನ್ನದೆ. ಹುಟ್ಟುಹಬ್ಬದ ಶುಭಾಷಯಗಳು'' ಎಂದು ರಕ್ಷಿತ್ ಶೆಟ್ಟಿಗೆ ನಟ ಜಗ್ಗೇಶ್ ಶುಭ ಹಾರೈಸಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವುದು, ಟ್ರೋಲ್ ಮಾಡುವುದು ಎಲ್ಲ ಇದ್ದೇ ಇರುತ್ತದೆ. ಅದೇ ಕಾರಣಕ್ಕಾಗಿ ರಕ್ಷಿತ್ ಟ್ವಿಟ್ಟರ್ ನಿಂದ ಆಚೆ ಹೋಗಿದ್ದರು. ಆದರೆ, ಈಗ ಮತ್ತೆ ಅವರು ಮರಳಿ ಬಂದಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಜಗ್ಗೇಶ್ ತಮ್ಮ ಮಾತುಗಳ ಮೂಲಕ ವಿವರಿಸಿದ್ದಾರೆ.

  ಟ್ವಿಟ್ಟರ್ ಗೆ ವಾಪಸ್ ಬಂದ ಮೊದಲ ದಿನವೇ ಟ್ರೋಲ್ ಆದ ರಕ್ಷಿತ್ ಶೆಟ್ಟಿ

  ಏನೇ ಆದರೂ ಮೌನವಾಗಿ ಉತ್ತರ ನೀಡಿ, ನಿಮ್ಮ ಕೆಲಸದಲ್ಲಿ ಮಾಡಿ ತೋರಿಸಿ, ಮುಂದಿನ ಗೆಲುವು ನಿನ್ನದೆ ಎಂದು ರಕ್ಷಿತ್ ಪ್ರತಿಭೆಯನ್ನು ಜಗ್ಗೇಶ್ ಹೊಗಳಿದ್ದಾರೆ.

  English summary
  Kannada actor Jaggesh welcomes Simple Star Rakshith shetty on his come back to twitter. Rakshith returned to social media on the occasion of his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X