Just In
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 2 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 11 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- News
ವರ್ಜಿನ್ ಹೈಪರ್ ಲೂಪ್ ಪ್ರಯಾಣಿಕರ ಅನುಭವದ ವಿಡಿಯೋ
- Sports
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
- Finance
ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ
- Automobiles
3 ಡೋರುಗಳ, 5 ಡೋರುಗಳ ಫೇಸ್ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಣ್ಣವ್ರ ಹುಟ್ಟುಹಬ್ಬದಂದೆ ಮಗನ ಮದುವೆ ಮಾಡಿ ಅಭಿಮಾನ ಮೆರೆದ ಜಗ್ಗೇಶ್
ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ ಡಾ.ರಾಜ್ ಕುಮಾರ್. ಕೋಟ್ಯಾಂತರ ಅಭಿಮಾನಿ ದೇವರುಗಳ ಪಾಲಿನ ಆರಾಧ್ಯ ದೈವ. ರಾಜ್ ಅಂದ್ರೆ ಸಾಕು ದೊಡ್ಡ ಜನಸಾಗರವೆ ಹರಿದು ಬರುತ್ತಿತ್ತು. ಈ ಸರಳ ಜೀವಿಯನ್ನು ಕಂಡರೆ ನಾಡಿನ ಜನತೆ ಕೈ ಎತ್ತಿ ಮುಗಿಯುತ್ತಿದ್ದರು. ಇಂತಹ ಮಹಾನ್ ಚೇತನ ಹುಟ್ಟಿದ್ದ ದಿನವಿಂದು. ನಾಡಿನಾದ್ಯಂತ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ರಾಜ್ ಕುಮಾರ್ ಅವರನ್ನು ಇಷ್ಟಪಡುವವರು ಕೋಟ್ಯಾಂತರ ಮಂದಿ ಇದ್ದಾರೆ, ಅಂತಹ ಅಭಿಮಾನಿಗಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು. ನವರಸನಾಯಕನಿಗೆ ರಾಜ್ ಅಂದ್ರೆ ಸಾಕು ಅದೇನೋ ಒಂದು ರೀತಿಯ ಶಕ್ತಿ ಮತ್ತು ಅಷ್ಟೆ ಭಕ್ತಿ. ಅಣ್ಣವ್ರನ್ನು ಹೃದಯದಲ್ಲಿ ಇಟ್ಟು ಪೂಜಿಸುತ್ತಾರೆ ಜಗ್ಗೇಶ್.
ರಾಜ್,ವಿಷ್ಣು,ಅಂಬಿ ಸ್ಮಾರಕ ಒಂದೇ ಕಡೆ ಇರಲಿ: ಶಿವರಾಜ್ ಕುಮಾರ್
ರಾಜ್ ನೆನಪು ಸದಾ ಜಗ್ಗೇಶ್ ಮನದಲ್ಲೆ ಇರಬೇಕೆಂದು ಏಪ್ರಿಲ್ 24 ರಾಜ್ ಕುಮಾರ್ ಹುಟ್ಟಿದ ದಿನವೆ ಜಗ್ಗೇಶ್ ಮೊದಲ ಮಗ ಗುರು ಜಗ್ಗೇಶ್ ಅವರ ಮದುವೆ ಮಾಡಿಸಿದ್ದಾರೆ. ಮೊದಲೆ ಜಗ್ಗೇಶ್ ಅವರಿಗೆ ರಾಜ್ ಕುಮಾರ್ ಅಂದ್ರೆ ವಿಶೇಷವಾದ ಗೌರವ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿಯೇ ಆಚರಿಸುತ್ತಾರೆ. ಇನ್ನು ಮಗನ ಮದುವೆ ಸಂಭ್ರಮ ಕೂಡ ಅವತ್ತೇ ಆದ್ದರಿಂದ ಜಗ್ಗೇಶ್ ಕುಟುಂಬಕ್ಕೆ ಡಬಲ್ ಸಂತಸದ ದಿನ.
ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು ನನ್ನ ಹಿರಿಯ ಮಗ #Gururajjaggesh ಗೆ 24/4/2014 ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ..!
— Chowkidar🙏ನವರಸನಾಯಕ ಜಗ್ಗೇಶ್ (@Jaggesh2) April 24, 2019
ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು… https://t.co/zygnhnZ9JH
ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು ನನ್ನ ಹಿರಿಯ ಮಗ
ಗುರು ಜಗ್ಗೇಶ್ ಗೆ 24/4/2014 ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ!
ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ" ಎಂದು ಹೇಳಿಕೊಂಡಿದ್ದಾರೆ.