twitter
    For Quick Alerts
    ALLOW NOTIFICATIONS  
    For Daily Alerts

    ನವರಸ ನಾಯಕ ಜಗ್ಗೇಶ್ ಅಭಿಮಾನಿಗಳಿಂದ ವಿಶೇಷ ಮನವಿ

    |

    ನವೆಂಬರ್ 17ಕ್ಕೆ ನವರಸ ನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ ಎಂಬ ವಿಶೇಷ ಕಾರಣಕ್ಕೆ ಅಭಿಮಾನಿಗಳಿಂದ ಭರ್ಜರಿ ಪ್ಲಾನ್ ಮಾಡಿದ್ದಾರೆ. ಜಗ್ಗೇಶ್ ಅವರ ಈ ವಿಶೇಷ ಸಂದರ್ಭವನ್ನು ಸ್ಮರಿಸುವ ಕಾರಣದಿಂದ ಟ್ವಿಟ್ಟರ್‌ನಲ್ಲಿ #40YearsOfLegecy ಹ್ಯಾಷ್‌ಟ್ಯಾಗ್‌ ಟ್ರೆಂಡ್ ಮಾಡಲು ನಿರ್ಧರಿಸಿದ್ದಾರೆ.

    ಈ ಕುರಿತು ಮನವಿ ಮಾಡಿರುವ ಜಗ್ಗೇಶ್ ಫ್ಯಾನ್ಸ್ ''ಕನ್ನಡ ಕಲಾಭಿಮಾನಿಗಳಿಗೆ ಇದೇ 17ರಂದು, ನಮ್ಮ ಪ್ರೀತಿಯ ನವರಸ ನಾಯಕ ಜಗ್ಗಣ್ಣನವರ ಕಲಾಸೇವೆಗೆ, 40 ವರ್ಷ ತುಂಬಲಿರುವ ಕಾರಣ, ಅವರಿಗೆ ಗೌರವ ಸೂಚಿಸಲು #40YearsOfLegecy ಟ್ವಿಟರ್ ಟ್ರೆಂಡ್ ನಲ್ಲಿ ಭಾಗವಹಿಸಿ, ಟ್ರೆಂಡನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ'' ಎಂದು ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳ ಈ ಕೆಲಸಕ್ಕೆ ನಟ ಜಗ್ಗೇಶ್ ಸಹ ಕೈ ಜೋಡಿಸಿದ್ದು ಧನ್ಯವಾದ ಅರ್ಪಿಸಿದ್ದಾರೆ.

    'ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ' ಎಂದ ಅಭಿಮಾನಿಗೆ ಜಗ್ಗೇಶ್ ನೀಡಿದ ಉತ್ತರ'ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ' ಎಂದ ಅಭಿಮಾನಿಗೆ ಜಗ್ಗೇಶ್ ನೀಡಿದ ಉತ್ತರ

    ಅಂದ್ಹಾಗೆ, ಕಳೆದ ವರ್ಷ ನವೆಂಬರ್ 17 ರಂದು ಜಗ್ಗೇಶ್ ಅವರು ಈ ಕುರಿತು ಪೋಸ್ಟ್ ಹಾಕಿಕೊಂಡಿದ್ದರು. 38 ವರ್ಷ ಆಯ್ತು ಎಂದು ನೆನಪು ಮೆಲುಕು ಹಾಕಿದ್ದರು. ಆದ್ರೀಗ, ಅಭಿಮಾನಿಗಳು 40 ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

     Jaggesh will Completes 40 Years on November 7th at Film industry

    ಅಣ್ಣಾವ್ರು ಸ್ಫೂರ್ತಿಯಿಂದ ನಟನಾಗಬೇಕು ಎಂಬ ಕನಸು ಕಂಡಿದ್ದ ಜಗ್ಗೇಶ್ ಮೊದ ಮೊದಲು ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. 'ಇಬ್ಬನಿ ಕರಗಿತು', 'ರಣಧೀರ', 'ಸಾಂಗ್ಲಿಯಾನಾ', 'ರಣರಂಗ' ಮುಂತಾದ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡರು.

    Recommended Video

    'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada

    ನಂತರ 1992 ರಲ್ಲಿ ತೆರೆಕಂಡ 'ಭಂಡ ನನ್ನ ಗಂಡ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಅಲ್ಲಿಂದ ಗಾಂಧಿನಗರದಲ್ಲಿ ಜಗ್ಗೇಶ್ ಹವಾ ಜೋರಾಯಿತು. 39 ವರ್ಷಗಳ ತಮ್ಮ ಸಿನಿ ಜರ್ನಿಯಲ್ಲಿ 'ತರ್ಲೆ ನನ್ಮಗ', 'ಸರ್ವರ್ ಸೋಮಣ್ಣ' ಸೇರಿದಂತೆ ಹಲವು ವಿಶೇಷ ಸಿನಿಮಾ ನೀಡಿದ್ದಾರೆ. ನಟ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ರಾಜಕಾರಣಿಯಾಗಿ ಜಗ್ಗೇಶ್ ಜನಪ್ರಿಯತೆ ಪಡೆದಿದ್ದಾರೆ.

    English summary
    Jaggesh 40th Year: Fans are requesting to trend #40YearsOfLegecy hashtag on november 17th.
    Sunday, November 8, 2020, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X