»   » 'ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ?

'ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ?

Posted By:
Subscribe to Filmibeat Kannada
ಶಂಕರ್ ನಾಗ್ ಹುಟ್ಟುಹಬ್ಬದ ವಿಶೇಷ : ಟ್ವಿಟ್ಟರ್ ಮೂಲಕ ವಿಶ್ ಮಾಡಿದ ನಟ ಜಗ್ಗೇಶ್ | Filmibeat Kannada

ಕರಾಟೆ ಕಿಂಗ್ ಶಂಕರ್ ನಾಗ್ ಅವರು ಇಂದು (ನವೆಂಬರ್ 9) ಬದುಕಿದ್ದರೇ 63ನೇ ಹುಟ್ಟುಹಬ್ಬ. ಅವರು ನಮ್ಮ ಜೊತೆ ಇಲ್ಲವಾದರೂ, ಅವರ ಅಭಿಮಾನಿಗಳು, ಅವರ ಒಡನಾಡಿಗಳು, ಅವರ ಚಿತ್ರೋಧ್ಯಮದ ಸ್ನೇಹಿತರು ಎಲ್ಲರೂ ಈ ದಿನ ಅವರನ್ನ ನೆನೆಸಿಕೊಳ್ಳುತ್ತಾರೆ.

ಇಂತವರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ನವರಸ ನಾಯಕ ಜಗ್ಗೇಶ್ ಅವರು ಶಂಕ್ರಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೇ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ಸಲ ನೋಡಿದ ಅನುಭವವನ್ನ ಕೂಡ ಹಂಚಿಕೊಂಡಿದ್ದಾರೆ.

ಹಾಗಿದ್ರೆ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಮೊದಲ ನೋಡಿದ್ದು ಎಲ್ಲಿ? ಆಗ ಜಗ್ಗೇಶ್ ಏನು ಮಾಡುತ್ತಿದ್ದರು ಎಂದು ತಿಳಿಯಲು ಮುಂದೆ ಓದಿ.....

1983ರಲ್ಲಿ ಮೊದಲ ಸಲ ನೋಡಿದ್ದರಂತೆ

1983ರಲ್ಲಿ ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ನೋಡಿದ್ದರಂತೆ. ಕೆ.ವಿ ಜಯರಾಂ ನಿರ್ದೇಶನದ 'ಇಬ್ಬನಿ ಕರಗಿತು' ಚಿತ್ರದ ಚಿತ್ರೀಕರಣ ಸೋಫಿಯಾ ಸ್ಕೂಲ್ ನಲ್ಲಿ ನಡೆಯುತ್ತಿತ್ತಂತೆ. ಅದು ಭಾನುವಾರ ಎಂದು ಕೂಡ ಜಗ್ಗೇಶ್ ನೆನಪಿನಲ್ಲಿಟ್ಟುಕೊಂಡಿದ್ದಾರೆ.

ಆಶ್ಚರ್ಯದಿಂದ ನೋಡಿದ್ದ ಜಗ್ಗೇಶ್

ಆಗ ಅನಂತ್ ನಾಗ್ ಮತ್ತು ಶಂಕರ್ ನಾಗ್ ಇಬ್ಬರು ಫಿಯೇಟ್ ಕಾರ್ ನಲ್ಲಿ ಬಂದಿದ್ದರು. ಈ ಸಹೋದರರನ್ನ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.

ಜಗ್ಗೇಶ್ ಅಭಿನಯದ ಮೊದಲ ಚಿತ್ರ

ಅಂದ್ಹಾಗೆ, 'ಇಬ್ಬನಿ ಕರಗಿತು' ಅನಂತ್ ನಾಗ್ ನಾಯಕನಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಜಗ್ಗೇಶ್ ಅವರು ಮೊದಲು ಬಣ್ಣ ಹಚ್ಚಿದ ಸಿನಿಮಾ ಕೂಡ ಇದೇ. ಈ ಚಿತ್ರದಲ್ಲಿ ಜಗ್ಗೇಶ್ ಅವರು ಒಂದು ಸಣ್ಣ ಪಾತ್ರವನ್ನ ನಿರ್ವಹಿಸಿದ್ದರಂತೆ. ಇದು ಇದಾದ ನಂತರ 'ಶ್ವೇತಾ ಗುಲಾಬಿ' ಚಿತ್ರದ ಮೂಲಕ ಅಧಿಕೃತವಾಗಿ ಜಗ್ಗೇಶ್ ಚಿತ್ರರಂಗ ಪ್ರವೇಶ ಮಾಡಿದರಂತೆ.

ಜಗ್ಗೇಶ್ ಅವರು ಮಾಡಿರುವ ಟ್ವೀಟ್

''ಇವರನ್ನ ನಾನು ಮೊದಲು ನೋಡಿದ್ದು ಕೆ.ವಿ.ಜಯರಾಂ ರವರ "ಇಬ್ಬನಿ ಕರಗಿತು" ಸೆಟ್ನಲ್ಲಿ.! ಜೂಲಿ ಲಕ್ಷ್ಮಿಯನ್ನ ಚುಡಾಯಿಸುವ ಸನ್ನಿವೇಶದ ಚಿತ್ರಿಕರಣ..ಸೋಫಿಯಾ ಸ್ಕೂಲ್ ನಲ್ಲಿ. 1983 ಅಂದು ಭಾನುವಾರ. ಅನಂತ್ ಶಂಕರ್ ಇಬ್ಬರು ಫೀಯೇಟ್ ಕಾರಲ್ಲಿ ಬಂದಿದ್ದರು. ಅಣ್ಣತಮ್ಮರ ಆಶ್ಚರ್ಯದಿಂದ ನೋಡಿದೆ.! ಇಂದು ಶಂಕರ್ ನೆನಪುಮಾತ್ರ.! ಹು.ಹ.ಶುಭಾಷಯಗಳು ಕಲಾಬಂಧುಗೆ'' - ಜಗ್ಗೇಶ್, ನಟ

English summary
Kannada Actor Jaggesh has taken his twitter account to wish to Shankar nag birthday. ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬಕ್ಕೆ ಜಗ್ಗೇಶ್ ಶುಭಕೋರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada