For Quick Alerts
  ALLOW NOTIFICATIONS  
  For Daily Alerts

  ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರು ಕನ್ನಡದ ಸಂಜಾತನಲ್ಲವೇ; ರಜನಿಕಾಂತ್ ಗೆ ಜಗ್ಗೇಶ್ ವಿಶ್

  |

  ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 70ನೇ ವಸಂತಕ್ಕೆ ಕಾಲಿಟ್ಟಿರುವ ಸೂಪರ್ ಸ್ಟಾರ್ ಕೋಟ್ಯಾಂತರ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಮತ್ತು ರಾಜಕೀಯ ರಂಗದ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸೌತ್ ಯಿಂದ ನಾರ್ಥ್ ವರೆಗಿನ ಅಭಿಮಾನಿಗಳು ಶುಭಕೋರಿ ಪ್ರೀತಿಯ ಸಂದೇಶ ರವಾನಿಸುತ್ತಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿ ಸಹ ರಜನಿಕಾಂತ್ ಗೆ ವಿಶ್ ಮಾಡಿದ್ದಾರೆ. ಸೂಪರ್ ಸ್ಟಾರ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ನಿಂದಲೂ ಶುಭಾಶಯಗಳು ರವಾನೆಯುತ್ತಿವೆ. ಹೌದು, ನಟ ಜಗ್ಗೇಶ್, ರಜನಿಕಾಂತ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ.

  ಬೆಂಗಳೂರಿನಲ್ಲಿ ಸೂಪರ್ ಸ್ಟಾರ್; ಸಹೋದರನನ್ನು ಭೇಟಿಯಾಗಿ ಆಶೀರ್ವಾದ ಪಡೆದ ರಜನಿಕಾಂತ್

  ಸೂಪರ್ ಸ್ಟಾರ್ ಜೊತೆ ಕುಳಿತಿರುವ ಅಪರೂಪದ ಫೋಟೋ ಶೇರ್ ಮಾಡುವ ಮೂಲಕ ರಜನಿಕಾಂತ್ ಗೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

  'ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರು ನಮ್ಮ ಕನ್ನಡ ನೆಲದ ಸಂಜಾತನಲ್ಲವೆ. 1987ರಿಂದ ಇವರ ಸಾಂಗತ್ಯ ಆತ್ಮೀಯತೆ ಪಡೆದವ ನಾನು ಎಂಬ ಹೆಮ್ಮೆಯಿದೆ. ಆತ್ಮೀಯ ಹೃದಯಕ್ಕೆ ಹುಟ್ಟುಹಬ್ಬದ ಶುಭಾಶಯ' ಎಂದು ಟ್ವೀಟ್ ಮಾಡಿದ್ದಾರೆ.

  ಹುಟ್ಟುಹಬ್ಬದ ಪ್ರಯುಕ್ತ ಸೂಪರ್ ಸ್ಟಾರ್ ಚೆನ್ನೈ ಮನೆಯ ಮುಂದೆ ಅಭಿಮಾನಿಗಳು ಬಂದು ಜಮಾಯಿಸಿದ್ದಾರೆ. ಅಂದಹಾಗೆ ರಜನಿಕಾಂತ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಖಚಿತಪಡಿಸಿದ್ದು, ಇದೇ ತಿಂಗಳು 31ರಂದು ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

  Sanjanaಗೆ ಹ್ಯಾಪಿ ನ್ಯೂಸ್ ಕೊಟ್ಟ ಹೈ ಕೋರ್ಟ್ | Filmibeat Kannada

  ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ಪಕ್ಷ ಸ್ಪರ್ಧಿಸಲಿದೆ. ಇತ್ತೀಚಿಗಷ್ಟೆ ರಜನಿಕಾಂತ್ ಬೆಂಗಳೂರಿಗೆ ಆಗಮಿಸಿದ್ದರು. ರಾಜಕೀಯ ಪಕ್ಷ ಘೋಷಣೆ ಹಿನ್ನಲೆ ಸೂಪರ್ ಸ್ಟಾರ್ ಕುಟುಂಬದವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ರಜನಿಕಾಂತ್ ಬೆಂಗಳೂರು ಭೇಟಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  English summary
  Kannada Actor Jaggesh Wishes Rajinikanth on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X