»   » ಈ ವಾರ ಮೂರು 'ಬಿಗ್ ಬಜೆಟ್' ಸಿನಿಮಾ ರಿಲೀಸ್: ನಿಮ್ಮ ಆಯ್ಕೆ ಯಾವುದು.?

ಈ ವಾರ ಮೂರು 'ಬಿಗ್ ಬಜೆಟ್' ಸಿನಿಮಾ ರಿಲೀಸ್: ನಿಮ್ಮ ಆಯ್ಕೆ ಯಾವುದು.?

Posted By: Bharathkumar
Subscribe to Filmibeat Kannada

ದಸರಾ ಹಬ್ಬದ ಸಂಭ್ರಮದಲ್ಲಿರುವ ಕನ್ನಡ ಸಿನಿ ಪ್ರಿಯರಿಗೆ, ಸ್ಯಾಂಡಲ್ ವುಡ್‌ ಮತ್ತಷ್ಟು ಮೆರಗು ನೀಡುತ್ತಿದೆ. ಈ ವರ್ಷದ 'ಬಿಗ್ ಬಜೆಟ್' ಹಾಗೂ 'ಬಹು ನಿರೀಕ್ಷಿತ' ಸಿನಿಮಾಗಳು ಎನಿಸಿಕೊಂಡಿರುವ 'ಜಾಗ್ವಾರ್', 'ದನ ಕಾಯೋನು' ಮತ್ತು 'ಇದೊಳ್ಳೆ ರಾಮಾಯಣ' ದಸರಾ ಹಬ್ಬದ ಪ್ರಯುಕ್ತ ಈ ವಾರ ತೆರೆ ಕಾಣಲಿದೆ.

'ಜಾಗ್ವಾರ್' ಚಿತ್ರ ಆಕ್ಷನ್ ಪ್ರಿಯರಿಗೆ ರಸದೌತಣವಾಗಿದ್ರೆ, 'ದನ ಕಾಯೋನು' ಮತ್ತು 'ಇದೊಳ್ಳೆ ರಾಮಾಯಣ' ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಅಪ್ಪಟ ಕಮರ್ಶಿಯಲ್ ಚಿತ್ರಗಳು.

ಒಂದಕ್ಕಿಂತ ಒಂದು ಸ್ಪೆಷಾಲಿಟಿ ಇರುವ ಈ ಮೂರು ಚಿತ್ರಗಳ ಪೈಕಿ, ನಿಮ್ಮ ಆಯ್ಕೆ ಯಾವುದು ಎಂಬುದು ನಮ್ಮ ಪ್ರಶ್ನೆ. ಮುಂದೆ ಓದಿ....

ಒಟ್ಟೊಟ್ಟಿಗೆ ತೆರೆಗೆ ಬರ್ತಿವೆ ಮೂರು 'ದೊಡ್ಡ' ಸಿನಿಮಾಗಳು.!

ಗಾಂಧಿನಗರದಲ್ಲಿ ಚಿತ್ರಮಂದಿರಗಳ ಕೊರತೆ ಇದ್ದರೂ, ದಸರಾ ಹಬ್ಬದ ಪ್ರಯುಕ್ತ ಈ ವಾರ ಮೂರು 'ದೊಡ್ಡ' ಸಿನಿಮಾಗಳೇ ತೆರೆ ಕಾಣ್ತಿವೆ. ಹೀಗಾಗಿ, ಈ ವಾರ 'ಸಿನಿ ವಾರ' ಅಂದ್ರೆ ಖಂಡಿತ ತಪ್ಪಾಗಲ್ಲ.

ಭಟ್ರ 'ದನ ಕಾಯೋನು'

ಯೋಗರಾಜ್ ಭಟ್‌ ಹಾಗೂ ದುನಿಯಾ ವಿಜಯ್‌ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ ಸಿನಿಮಾ 'ದನ ಕಾಯೋನು'. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದ 'ದನ ಕಾಯೋನು' ಸಿನಿ ರಸಿಕರ ಗಮನ ಸೆಳೆದಿದೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳಿಗೆ ಒಳ್ಳೆ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ.

ದುನಿಯಾ ವಿಜಯ್-ಪ್ರಿಯಾಮಣಿ ಜೋಡಿ

'ದನ ಕಾಯೋನು' ಚಿತ್ರದ ಮೇನ್ ಹೈಲೈಟ್ ಅಂದ್ರೆ ದುನಿಯಾ ವಿಜಯ್‌ ಮತ್ತು ಪ್ರಿಯಾಮಣಿ ಕಾಂಬಿನೇಷನ್. ಹಳ್ಳಿ ಹುಡುಗಿ ಆಗಿ ಪ್ರಿಯಾಮಣಿ ಕಾಣಿಸಿಕೊಂಡಿದ್ರೆ, 'ದನ ಕಾಯುವ'ವನ ಪಾತ್ರಧಾರಿ ವಿಜಯ್. ಇಬ್ಬರ ಜುಗಲ್ಬಂದಿ ತೆರೆಮೇಲೆ ನೋಡಲು ಇನ್ನೊಂದೇ ದಿನ ಬಾಕಿ.

ಶುಕ್ರವಾರ ತೆರೆಗೆ ಬರ್ತಿದೆ 'ದನ ಕಾಯೋನು'

ಕನಕಪುರ ಶ್ರೀನಿವಾಸ್‌ 'ದನ ಕಾಯೋನು' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್‌ ಸಿಗ್ನಲ್‌ ಪಡೆದು ಕೊಂಡಿರುವ 'ದನ ಕಾಯೋನು' ಚಿತ್ರಕ್ಕೆ 'U' ಸರ್ಟಿಫಿಕೇಟ್ ಸಿಕ್ಕಿದೆ. 'ದನ ಕಾಯೋನು' ಸಿನಿಮಾ ಅಕ್ಟೋಬರ್ 7 ರಂದು (ಶುಕ್ರವಾರ) ತೆರೆಗೆ ಬರಲಿದೆ. [ನಾಟಕ ಮುಗಿತು, ಶುಕ್ರವಾರ 'ದನ ಕಾಯೋನು' ಬರ್ತಾನೆ ಬಿಡಿ]

ಝಬರ್ ದಸ್ತ್ 'ಜಾಗ್ವಾರ್'

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ದಸರಾ ಹಬ್ಬದ ಪ್ರಯುಕ್ತ ನಾಳೆ (ಅಕ್ಟೋಬರ್ 6) ಬಿಡುಗಡೆ ಆಗಲಿದೆ.

ಕನ್ನಡ ಮತ್ತು ತೆಲುಗಿನಲ್ಲಿ 'ಜಾಗ್ವಾರ್'

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ 'ಜಾಗ್ವಾರ್' ತೆರೆ ಕಾಣಲಿದೆ. ಜಗತ್ತಿನಾದ್ಯಂತ ಸಾವಿರ ಸ್ಕ್ರೀನ್ ಗಳಲ್ಲಿ ನಿಖಿಲ್ ಸಿನಿಮಾ ಪ್ರದರ್ಶನವಾಗಲಿದೆ.

'ಜಾಗ್ವಾರ್' ತಾರಾ ಬಳಗ

ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ 'ಜಾಗ್ವಾರ್' ಚಿತ್ರಕ್ಕೆ, ಮಹಾದೇವ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ನಿಖಿಲ್ ಕುಮಾರ್ಗೆ ದೀಪ್ತಿ ಸತಿ ಜೋಡಿಯಾಗಿದ್ದು, ರಮ್ಯಾ ಕೃಷ್ಣ, ಜಗಪತಿ ಬಾಬು, ಸಾಧು ಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಥಮನ್ ಸಂಗೀತವಿದೆ.

`ರೈ' ರಾಮಾಯಣ ರಿಲೀಸ್

ಇವರೆಡೂ ಚಿತ್ರಗಳ ಜೊತೆಗೆ ಪ್ರಕಾಶ್‌ ರೈ ಅಭಿನಯದ, ನಿರ್ದೇಶನದ 'ಇದೊಳ್ಳೆ ರಾಮಾಯಣ' ಚಿತ್ರ ಕೂಡ ಶುಕ್ರವಾರ ರಿಲೀಸ್ ಆಗಲಿದೆ.

'ರಾಮಾಯಣ'ದಲ್ಲಿ ಪ್ರಿಯಾಮಣಿ

'ಇದೊಳ್ಳೆ ರಾಮಾಯಣ' ಚಿತ್ರದಲ್ಲಿ ಪ್ರಕಾಶ್‌ ರೈಗೆ ಪ್ರಿಯಾಮಣಿ ಸಾಥ್ ಕೊಟ್ಟಿದ್ದಾರೆ. 'ಶಟರ್' ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ನಿಮ್ಮ ಆಯ್ಕೆ ಯಾವುದು ?

ಈ ಮೂರು ಚಿತ್ರಗಳ ಪೈಕಿ ನೀವು ಯಾವುದನ್ನ ನೋಡಲು ಬಯಸುತ್ತೀರಾ? ನಿಮ್ಮ ಆಯ್ಕೆ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

English summary
Nikhil Kumar starrer 'Jaguar', Duniya Vijay starrer 'Dana Kayonu', Prakash Rai's 'Idolle Ramayana' releasing this week (Oct 6th and 7th). Which movie will you watch?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada