For Quick Alerts
  ALLOW NOTIFICATIONS  
  For Daily Alerts

  ನ್ಯೂ ಜೆರ್ಸಿಯಲ್ಲಿ 'ಜಾಗ್ವಾರ್' ಜಯಭೇರಿ

  By Bharathkumar
  |

  ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರ ಅಮೇರಿಕಾದಲ್ಲಿ ಪ್ರದರ್ಶನ ಕಂಡಿದೆ. ಕರ್ನಾಟಕ ಹಾಗೂ ಆಂದ್ರ ರಾಜ್ಯಗಳಲ್ಲಿ ಸೂಪರ್ ಸಕ್ಸಸ್ ಬಾರಿಸಿದ್ದ ಜಾಗ್ವಾರ್, ಯುಎಸ್ ನಲ್ಲೂ ಭರ್ಜರಿ ರೆಸ್ ಪಾನ್ಸ್ ಗಿಟ್ಟಿಸಿಕೊಂಡಿದೆ.

  ಇತ್ತೀಚಿಗೆ ನ್ಯೂ ಜೆರ್ಸಿ ಎಡಿಸನ್ ನ ಬಿಗ್ ಸಿನಿಮಾಸ್ ಚಿತ್ರಮಂದಿರದಲ್ಲಿ ನಿಖಿಲ್ ಅಭಿನಯದ 'ಜಾಗ್ವಾರ್' ಚಿತ್ರ ಪ್ರದರ್ಶನವಾಗಿದ್ದು, ಪ್ರೇಕ್ಷಕರಿಗೆ ಶಬ್ಬಾಶ್ ಎನಿಸಿಕೊಂಡಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಚಿತ್ರ ಪ್ರೇಮಿಗಳು 'ಜಾಗ್ವಾರ್' ಚಿತ್ರವನ್ನ ನೋಡಿ ಖುಷಿ ಪಟ್ಟಿದ್ದಾರೆ.[ಅಮೇರಿಕಾದಲ್ಲಿ ರಿಲೀಸ್ ಆಗಲಿದೆ ನಿಖಿಲ್ ಕುಮಾರ್ 'ಜಾಗ್ವಾರ್']

  ಅಂದ್ಹಾಗೆ, ನ್ಯೂ ಜೆರ್ಸಿಯಲ್ಲಿ ' ಜಾಗ್ವಾರ್ ಚಿತ್ರದ ಪ್ರೀಮಿಯರ್ ಶೋವನ್ನ ಆಯೋಜಿಸಿದ್ದು, ಕಟ್ಟೆ ಬಾಯ್ಸ್' ತಂಡದವರು. ಈ ವಿಶೇಷ ಪ್ರದರ್ಶನದಲ್ಲಿ ಚಿತ್ರದ ನಾಯಕ ನಟ ನಿಖಿಲ್ ಕುಮಾರ್, ಚಿತ್ರದ ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮುಂದೆ ಓದಿ....

  ನ್ಯೂ ಜೆರ್ಸಿಯಲ್ಲಿ 'ಜಾಗ್ವಾರ್' ಜಯ

  ನ್ಯೂ ಜೆರ್ಸಿಯಲ್ಲಿ 'ಜಾಗ್ವಾರ್' ಜಯ

  ನಿರೀಕ್ಷೆಯಂತೆ ಅಮೇರಿಕಾದಲ್ಲಿ ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಅದ್ಬುತ ಗೆಲುವು ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ನಿಖಿಲ್ ಅಭಿನಯಕ್ಕೆ ಫುಲ್ ಮಾರ್ಕ್ಸ್‌ ಕೊಟ್ಟಿದ್ದು, ಜಾಗ್ವಾರ್ ಚಿತ್ರವನ್ನ ಕೊಂಡಾಡಿದ್ದಾರೆ.

  ಪ್ರೇಕ್ಷಕರ ಜೊತೆ ನಿಖಿಲ್

  ಪ್ರೇಕ್ಷಕರ ಜೊತೆ ನಿಖಿಲ್

  ಸುಮಾರು 200ಕ್ಕೂ ಹೆಚ್ಚು ಕನ್ನಡಿಗರು 'ಜಾಗ್ವಾರ್' ಚಿತ್ರದ ಪ್ರೀಮಿಯರ್ ಶೋನಲ್ಲಿ ಪಾಲ್ಗೊಂಡಿದ್ದರು. ನಿಖಿಲ್ ಕುಮಾರ್ ಮತ್ತು ಕುಮಾರಸ್ವಾಮಿ ಅವರು ಪ್ರೇಕ್ಷಕರ ಜೊತೆ ಕೂತು ಚಿತ್ರ ವೀಕ್ಷಿಸಿದ್ದು ವಿಶೇಷವಾಗಿತ್ತು. ಇನ್ನೂ ಮಂಡ್ಯ ಸಂಸದ ಪುಟ್ಟರಾಜು, ಶಾಸಕ ಸಾ ರಾ ಮಹೇಶ್, ಅಮರನಾಥ ಗೌಡರು ಕೂಡ 'ಜಾಗ್ವಾರ್' ಸಿನಿಮಾವನ್ನ ನ್ಯೂ ಜೆರ್ಸಿಯಲ್ಲಿ ನೋಡಿದರು.[ಎಕ್ಸ್ ಕ್ಲೂಸಿವ್: 'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಸಂದರ್ಶನ]

  ಕುಮಾರಸ್ವಾಮಿ ಸಂವಾದ

  ಕುಮಾರಸ್ವಾಮಿ ಸಂವಾದ

  ಪ್ರೇಕ್ಷಕರ ಜೊತೆಯಲ್ಲಿ ಸಿನಿಮಾ ನೋಡಿದ ಕುಮಾರಸ್ವಾಮಿಯವರು ತದ ನಂತರ ಅವರೊಂದಿಗೆ ಸಂವಾದ ನಡೆಸಿದರು. ಮಗನ ಚಿತ್ರಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು. ಬಳಿಕ ಮಾತನಾಡಿದ ಅವರು ಕನ್ನಡದ ಚಿತ್ರದ ಪ್ರಸ್ತುತ ಸ್ಥಿತಿ ಗತಿ, ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗದ ಮೇಲೆ ಆಗುತ್ತಿರುವ ಪರಿಣಾಮಗಳು ಹಾಗೂ ಅದಕ್ಕೆ ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.['ಕನ್ನಡ ಚಿತ್ರರಂಗದ ಅವಸ್ಥೆ' ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ]

  ಕೇಕ್ ಕತ್ತರಿಸಿ ಸಂಭ್ರಮ

  ಕೇಕ್ ಕತ್ತರಿಸಿ ಸಂಭ್ರಮ

  ಇನ್ನೂ 'ಜಾಗ್ವಾರ್' ಚಿತ್ರವನ್ನ ನ್ಯೂ ಜೆರ್ಸಿಯಲ್ಲಿ ಪ್ರದರ್ಶಿಸಿದ್ದಕ್ಕೆ ಹಾಗೂ ನಿಖಿಲ್ ಕುಮಾರ್, ಕುಮಾರಸ್ವಾಮಿ ಅವರು ಆಗಮಿಸಿದ್ದಕ್ಕೆ ಅಲ್ಲಿನ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

  ಪ್ರೀಮಿಯರ್ ಅಯೋಜಿಸಿದ್ದ 'ಕಟ್ಟೆ ಬಾಯ್ಸ್'

  ಪ್ರೀಮಿಯರ್ ಅಯೋಜಿಸಿದ್ದ 'ಕಟ್ಟೆ ಬಾಯ್ಸ್'

  ನ್ಯೂ ಜೆರ್ಸಿಯಲ್ಲಿ 'ಜಾಗ್ವಾರ್' ಚಿತ್ರದ ಪ್ರೀಮಿಯರ್ ಶೋ ಅಯೋಜನೆ ಮಾಡಿದ್ದು ಕಟ್ಟೆ ಬಾಯ್ಸ್. ಈ ಶೋನಿಂದ ಬಂದ ಹಣವನ್ನ ಬಡ ವಿದ್ಯಾರ್ಥಿಗೆ, ವೀರ ಯೋಧರ ಕುಟುಂಬಕ್ಕೆ, ರೈತರಿಗೆ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದೆಯಂತೆ.

  ಕಟ್ಟೆ ಬಾಯ್ಸ್ ಯಾರು,?

  ಕಟ್ಟೆ ಬಾಯ್ಸ್ ಯಾರು,?

  ನ್ಯೂ ಜೆರ್ಸಿ ಡೇಟನ್ ನ ಸಮ್ಮರ್ ಫೀಲ್ಡ್ ನಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಸೇರಿ ಕ್ರಿಕೆಟ್ ಅಥವಾ ವಾಲಿಬಾಲ್ ಆಡುವ ಕನ್ನಡದ ಹುಡುಗರು. ಕೇವಲ ಆಟವಷ್ಟೇ ಅಲ್ಲ, ಆಟದ ಜೊತೆ ಸಮಾಜ ಕೆಲಸಗಳನ್ನ ಮಾಡುವ ಸಮಾನ ಮನಸ್ಕರ ತಂಡ. ಅಮೇರಿಕಾದಲ್ಲಿ ನೆಲೆ ಇಲ್ಲದೆ ನೊಂದವರಿಗೆ, ಬಡ ವಿದ್ಯಾರ್ಥಿಗಳಿಗೆ, ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು ಸೇರಿದಂತೆ, ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕಾರ್ಯವನ್ನ ಮಾಡುತ್ತಿದ್ದಾರೆ.

  English summary
  Nikhil Kumar's debut film 'Jaguar' released new jersey in America. the movie produced by former Chief Minister H D Kumaraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X