For Quick Alerts
  ALLOW NOTIFICATIONS  
  For Daily Alerts

  ವಿವಾದದ ನಡುವೆಯೂ 'ಕಿಕಿ ಚಾಲೆಂಜ್'ನಲ್ಲಿ ಜೈ ಜಗದೀಶ್ ಪುತ್ರಿಯರು

  By Pavithra
  |

  'ಕಿಕಿ ಚಾಲೆಂಜ್' ಸದ್ಯ ಸಖತ್ ವೈರಲ್ ಆಗಿರುವ ಸುದ್ದಿ. ಕಿಕಿ ಚಾಲೆಂಜ್ ಸ್ವೀಕರಿಸುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿರುವ ಹಿನ್ನಲೆಯಲ್ಲಿ ಕಿಕಿ ಚಾಲೆಂಜ್ ಅನ್ನು ಯಾರು ಕೂಡ ನೃತ್ಯ ಮಾಡಬಾರದು ಎಂದು ಪೊಲೀಸರು ತಾಕೀತು ಮಾಡಿದ್ದಾರೆ.

  ಇತ್ತೀಚಿಗಷ್ಟೆ ಬಿಗ್ ಬಾಸ್ ನ ನಿವೇದಿತಾ ಗೌಡ ಕಿಕಿ ಚಾಲೆಂಜ್ ಸ್ವೀಕರಿಸಿ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ನಿವೇದಿತಾ ಅವರ ಈ ನಡೆ ನೋಡಿ ಅಭಿಮಾನಿಗಳು ಮತ್ತು ಸಾಕಷ್ಟು ಹೋರಾಟಗಾರರು ಕಿಡಿ ಕಾರಿದ್ದರು. ಅದಷ್ಟೇ ಅಲ್ಲದೆ ನಿವೇದಿತಾ ವಿರುದ್ಧ ದೂರು ಕೂಡ ದಾಖಲಾಗಿದೆ.

  ಇಷ್ಟೆಲ್ಲಾ ಆಗುತ್ತಿರುವುದನ್ನು ತಿಳಿದಿದ್ದರು ನಟ ಜೈ ಜಗದೀಶ್ ಅವರ ಪುತ್ರಿಯರಾದ ವೈಸಿರಿ ಮತ್ತು ವೈನಿಧಿ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ಅಕ್ಕ-ತಂಗಿ ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿಕೊಂಡು ಕಿಕಿ ಹಾಡಿಗೆ ಕಾರ್ ನಿಂದ ಇಳಿದು ನೃತ್ಯ ಮಾಡಿದ್ದಾರೆ.

  ವೈನಿಧಿ ಮತ್ತು ವೈಸಿರಿ ಅವರ ವಿಡಿಯೋವನ್ನು ಸಾಕಷ್ಟು ಜನರು ವೀಕ್ಷಣೆ ಮಾಡಿದ್ದು ಕಮೆಂಟ್ ಗಳ ಮೂಲಕ ಇಷ್ಟು ಅಪಯಕಾರಿ ಎಂದು ತಿಳಿದಿದ್ದರು ಯಾಕೆ ಇದನ್ನೆಲ್ಲಾ ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

  ಸಾಕಷ್ಟು ಕಡೆಗಳಲ್ಲಿ ಇದರಿಂದ ಅಪಾಯ ಆಗುತ್ತೆ ಎನ್ನುವುದನ್ನು ತಿಳಿದಿದ್ದರೂ ಕೂಡ ಕಲಾವಿದರು ಯಾವ ಕಾರಣಕ್ಕೆ ಈ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ.

  English summary
  Kannada actor Jai Jagdish's daughters accepted Kiki Challenge. actress vainidhi and vaisiri has danced to the ki ki song, although Kiki Challenge is dangerous,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X