For Quick Alerts
  ALLOW NOTIFICATIONS  
  For Daily Alerts

  James Box Office Collection Day 1 : 'ಜೇಮ್ಸ್' ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು?

  |

  ಪುನಿತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಹಿಂದೆಂದೂ ಯಾವ ಕನ್ನಡ ಸಿನಿಮಾ ಸಹ ಕಂಡಿರದ ರೀತಿಯ ಓಪನಿಂಗ್ ಅನ್ನು ಈ ಸಿನಿಮಾ ಪಡೆದುಕೊಂಡಿದೆ.

  ಬೆಂಗಳೂರು ಒಂದರಲ್ಲಿಯೇ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಟಿಕೆಟ್‌ ಸಿನಿಮಾ ಬಿಡುಗಡೆಗೆ ಮೂರ್ನಾಲ್ಕು ದಿನ ಮುಂಚೆಯೇ ಸೇಲ್ ಆಗಿಬಿಟ್ಟಿತ್ತು. ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಕಡೆಗಳಲ್ಲಿ ಸಿನಿಮಾವು ಭಾರಿ ಅದ್ಧೂರಿ ಓನಿಂಗ್ ಪಡೆದುಕೊಂಡಿದೆ.

  Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!

  ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಸಿನಿಮಾ ಗಳಿಕೆಯಲ್ಲಿ ಕನ್ನಡ ಎಲ್ಲ ಸಿನಿಮಾಗಳ ರೆಕಾರ್ಡ್‌ ಅನ್ನು ಮುರಿದು ಹೊಸ ರೆಕಾರ್ಡ್ ಕಟ್ಟಲಿದೆ ಎಂಬ ಅಂದಾಜನ್ನು ಸಿನಿ ಪಂಡಿತರು ಈ ಮೊದಲೇ ಮಾಡಿದ್ದರು. ಇದೀಗ 'ಜೇಮ್ಸ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಈ ಮಾತನ್ನು ಸತ್ಯ ಮಾಡುತ್ತಿದೆ.

  'ಜೇಮ್ಸ್' ಸಿನಿಮಾದ ಮೊದಲ ದಿನದ ಎಲ್ಲಾ ಶೋಗಳು ಶೇ 90 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗಿವೆ. ಕರ್ನಾಟಕ ಮಾತ್ರವಲ್ಲ ಪರ ರಾಜ್ಯಗಳಲ್ಲಿ, ವಿದೇಶಗಳಲ್ಲೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ ಆಗಿ ಅದ್ಭುತ ಓಪನಿಂಗ್ ಅನ್ನು ಪಡೆದುಕೊಂಡಿದೆ.

  Shivarajkumar Cried: ತಮ್ಮನ 'ಜೇಮ್ಸ್' ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣShivarajkumar Cried: ತಮ್ಮನ 'ಜೇಮ್ಸ್' ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

  ಮೊದಲ ದಿನದ ಕಲೆಕ್ಷನ್ ಎಷ್ಟು?

  ಮೊದಲ ದಿನದ ಕಲೆಕ್ಷನ್ ಎಷ್ಟು?

  'ಜೇಮ್ಸ್' ಸಿನಿಮಾವು ಮೊದಲ ದಿನವೇ 32.70 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಪುನೀತ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ಸಿನಿಮಾವು ಕರ್ನಾಟಕದಲ್ಲಿ ಮಾತ್ರವೇ 32.70 ಕೋಟಿ ಹಣ ಗಳಿಸಿದೆ. ಪರ ರಾಜ್ಯ, ವಿದೇಶಗಳಲ್ಲಿಯೂ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ ಅಭಿಮಾನಿಗಳು, ಒಂದೊಮ್ಮೆ ಪರ ರಾಜ್ಯ, ವಿದೇಶದ ಕಲೆಕ್ಷನ್ ಅನ್ನೂ ಸೇರಿಸಿದರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ 45 ಕೋಟಿ ಸಮೀಪಕ್ಕೆ ಬರುತ್ತದೆ.

  ನೂರು ಕೋಟಿ ಕ್ಲಬ್ ಸೇರಲಿದೆ ಸಿನಿಮಾ

  ನೂರು ಕೋಟಿ ಕ್ಲಬ್ ಸೇರಲಿದೆ ಸಿನಿಮಾ

  ಮೊದಲ ದಿನವೇ ಕರ್ನಾಟಕ ಒಂದರಲ್ಲೇ 32.70 ಕೋಟಿ ಗಳಿಸಿರುವ 'ಜೇಮ್ಸ್' ಸಿನಿಮಾ ಈ ವಾರಾಂತ್ಯಕ್ಕೆ ಇನ್ನೂ ಹೆಚ್ಚು ಮೊತ್ತವನ್ನು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಮೂರು ದಿನಗಳಿಗೆ ಸಿನಿಮಾದ ಕಲೆಕ್ಷನ್ 70 ಕೋಟಿ ರುಪಾಯಿಯನ್ನು ದಾಟುವ ಸಕಲ ಸಾಧ್ಯತೆ ಇದೆ. ಮುಂದಿನ ಶುಕ್ರವಾರ 'RRR' ಸಿನಿಮಾ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದಿಂದಾಗಿ 'ಜೇಮ್ಸ್' ಕಲೆಕ್ಷನ್‌ಗೆ ಹಿನ್ನೆಡೆ ಆಗುವ ಸಾಧ್ಯತೆ ಇದೆ. ಆದರೆ ಆ ವರೆಗೆ 'ಜೇಮ್ಸ್'ಗೆ ಪ್ರತಿಸ್ಪರ್ಧೆ ನೀಡುವ ಮತ್ತೊಂದು ಸಿನಿಮಾ ಇಲ್ಲವಾದ್ದರಿಂದ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆವ ಎಲ್ಲ ಸಾಧ್ಯತೆಯೂ ಇದೆ. ನೂರು ಕೋಟಿ ಕ್ಲಬ್ ಸೇರಲಿದೆ 'ಜೇಮ್ಸ್' ಸಿನಿಮಾ.

  ಐತಿಹಾಸಿಕ ಓಪನಿಂಗ್ ಕಂಡ ಕನ್ನಡದ ಸಿನಿಮಾ

  ಐತಿಹಾಸಿಕ ಓಪನಿಂಗ್ ಕಂಡ ಕನ್ನಡದ ಸಿನಿಮಾ

  'ಜೇಮ್ಸ್' ಸಿನಿಮಾ ನಿನ್ನೆ ಇಡೀಯ ರಾಜ್ಯದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕಳೆದ ಕೆಲ ವರ್ಷಗಳಲ್ಲಿ ಇನ್ಯಾವ ಕನ್ನಡ ಸಿನಿಮಾಕ್ಕೂ ಈ ಮಾದರಿಯ ಅತಿದೊಡ್ಡ ಓಪನಿಂಗ್ ಸಿಕ್ಕ ಇತಿಹಾಸ ಇಲ್ಲ. 'ಜೇಮ್ಸ್' ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಬ್ಬದಂತೆ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್‌ಕುಮಾರ್ ಕಟೌಟ್‌ಗಳು ರಾರಾಜಿಸಿವೆ. ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗಿದೆ. ಅನ್ನಸಂತರ್ಪಣೆ, ಮೆರವಣಿಗೆಗಳೆಲ್ಲ ಅದ್ಧೂರಿಯಾಗಿ ನಡೆದಿವೆ. ಒಟ್ಟಾರೆ ಸಿನಿಮಾ ಒಂದರ ಬಿಡುಗಡೆಗೆ ಈ ಮಾದರಿಯ ಹಬ್ಬದಾಚರಣೆ ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರಲಿಲ್ಲ.

  ಸೈನಿಕನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್

  ಸೈನಿಕನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್

  'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಸೈನಿಕನ ಹಾಗೂ ಖಾಸಗಿ ಭದ್ರತೆ ನೀಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಮಾದಕ ವಸ್ತುಗಳ ವಿರುದ್ಧ ಸಂದೇಶವನ್ನು ಹೊಂದಿರುವ ಜೊತೆಗೆ ಗೆಳೆತನದ ಮಹತ್ವವನ್ನೂ ಸಾರುತ್ತಿದೆ. ಸಿನಿಮಾವನ್ನು ಚೇತನ್ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಶ್ರೀಕಾಂತ್, ಶರತ್ ಕುಮಾರ್, ಆದಿತ್ಯ ಮೆನನ್ ಮುಖ್ಯ ವಿಲನ್‌ಗಳಗಿ ನಟಿಸಿದ್ದಾರೆ. ಪೋಷಕ ನಟರ ದೊಡ್ಡ ಪೋಷಕ ವರ್ಗ ಇದ್ದು, ರಂಗಾಯಣ ರಘು, ಅನುಪ್ರಭಾಕರ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ತಿಲನ್, ಶೈನ್ ಶೆಟ್ಟಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಾಯಕಿ ಪ್ರಿಯಾ ಆನಂದ್.

  English summary
  James day 1 box office collection report: Puneeth Rajkumar's Movie Collects Rs 32.7 crs in Karnataka. Movie will soon reach 100 crore club.
  Friday, March 18, 2022, 11:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X