For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 15ಕ್ಕೆ 'ಜೇಮ್ಸ್' ಸರ್ಪ್ರೈಸ್: ಅಪ್ಪು ಅಭಿಮಾನಿಗಳಿಗೆ ಖುಷಿ ವಿಷ್ಯ

  |

  ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಸುದ್ದಿ ಇದೆ. ಆಗಸ್ಟ್ 15ಕ್ಕೆ ಪುನೀತ್ ಅಭಿನಯಿಸುತ್ತಿರುವ ಜೇಮ್ಸ್ ಸಿನಿಮಾ ಅಧಿಕೃತ ಪೋಸ್ಟರ್ ಬಿಡುಗಡೆಯಾಗುತ್ತಿದೆ.

  ಭಾನುವಾರ ಬೆಳಗ್ಗೆ 10 ಗಂಟೆಗೆ 'ಜೇಮ್ಸ್' ಸಿನಿಮಾ ಅಧಿಕೃತ ಪೋಸ್ಟರ್ ಅನಾವರಣಗೊಳ್ಳಲಿದ್ದು, ಅಪ್ಪು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. 'ಜೇಮ್ಸ್' ಸಿನಿಮಾ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಪೋಸ್ಟರ್ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಲಾಗುತ್ತಿದೆ.

  ಪುನೀತ್ 'ಜೇಮ್ಸ್' ಚಿತ್ರಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಖ್ಯಾತ ನಟಪುನೀತ್ 'ಜೇಮ್ಸ್' ಚಿತ್ರಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಖ್ಯಾತ ನಟ

  ಚೇತನ್ ಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಜೇಮ್ಸ್ ಸಿನಿಮಾ ಬಹುದೊಡ್ಡ ತಾರಬಳಗವನ್ನು ಹೊಂದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಪುನೀತ್ ರಾಜ್ ಕುಮಾರ್ ಕೊನೆಯ ಹಂತಕ್ಕೆ ಸಜ್ಜಾಗುತ್ತಿದ್ದಾರೆ. ಎರಡನೇ ಲಾಕ್‌ಡೌನ್‌ ಆದ್ಮೇಲೆ ಜುಲೈ ಮೊದಲ ವಾರದಲ್ಲಿ ಚಿತ್ರೀಕರಣ ಶುರು ಮಾಡಿದ್ದರು.

  ಅಂದ್ಹಾಗೆ, ಜೇಮ್ಸ್ ಸಿನಿಮಾದಲ್ಲಿ ತಮಿಳು ನಟ ಶರತ್ ಕುಮಾರ್ ನಟಿಸುತ್ತಿದ್ದು, ಈ ಸಲ ನೆಗೆಟಿವ್ ಪಾತ್ರ. ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ಪುನೀತ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರತ್ ಕುಮಾರ್ ಈಗ ಅಪ್ಪು ಎದುರು ವಿಲನ್ ಆಗಿ ಮಿಂಚಲಿದ್ದಾರೆ.

  'ಜೇಮ್ಸ್' ಚಿತ್ರಕ್ಕೆ ರಾಮ್-ಲಕ್ಷ್ಮಣ್ ಎಂಟ್ರಿ, ಶ್ರೀಮುರಳಿ ಸೆಲ್ಫಿ ವೈರಲ್'ಜೇಮ್ಸ್' ಚಿತ್ರಕ್ಕೆ ರಾಮ್-ಲಕ್ಷ್ಮಣ್ ಎಂಟ್ರಿ, ಶ್ರೀಮುರಳಿ ಸೆಲ್ಫಿ ವೈರಲ್

  ಅದೇ 'ರಾಜಕುಮಾರ' ಸಿನಿಮಾದಲ್ಲಿ ನಾಯಕಿಯಾಗಿದ್ದ ಪ್ರಿಯಾ ಆನಂದ್ ಈಗ ಜೇಮ್ಸ್ ಚಿತ್ರದ ಹೀರೋಯಿನ್. ಇನ್ನುಳಿದಂತೆ ಹಾಸ್ಯನಟ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಎಲ್ಲರೂ ಈ ಚಿತ್ರದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸಹ ನಟಿಸಿದ್ದಾರೆ.

  James Movie official poster will release on August 15th

  ಇತ್ತೀಚಿಗಷ್ಟೆ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ ರಾಮ್-ಲಕ್ಷ್ಮಣ್ ಸ್ಟಂಟ್ ನಿರ್ದೇಶಿಸಿದ್ದರು. ಭರ್ಜರಿ ಸಿನಿಮಾ ಮುಗಿಸಿ ಜೇಮ್ಸ್ ಮಾಡುತ್ತಿರುವ ಚೇತನ್ ಡೈರೆಕ್ಷನ್ ಮೇಲೆಯೂ ಅಷ್ಟೇ ನಿರೀಕ್ಷೆಯಿದ್ದು, ಅಧಿಕೃತ ಪೋಸ್ಟರ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

  'ಜೇಮ್ಸ್' ಸಿನಿಮಾ ಮುಗಿಯುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಲೂಸಿಯಾ ಪವನ್ ಕುಮಾರ್ ನಿರ್ದೇಶಿಸಲಿರುವ 'ದ್ವಿತ್ವ' ಚಿತ್ರ ಆರಂಭಿಸಲಿದ್ದಾರೆ. ಈ ಪ್ರಾಜೆಕ್ಟ್‌ಗೆ ಹೊಂಬಾಳೆ ಫಿಲಂಸ್ ಬಂಡವಾಳ ಹಾಕ್ತಿದೆ.

  English summary
  The official poster of James starring power star puneeth rajkumar will be unveiled tomorrow (august 15th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X