For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದ ಮೂಲಕ ಜೇಮಿ ಆಲ್ಟರ್ ಸ್ಯಾಂಡಲ್‌ವುಡ್ ಎಂಟ್ರಿ

  |

  'ರಾಜೇಂದ್ರ ಪೊನ್ನಪ್ಪ' ಚಿತ್ರದ ನಿರೀಕ್ಷೆಯಲ್ಲಿರುವ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಎಂಬಿ ಗಿರಿರಾಜ್ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಿದ್ದಾರೆ. ಕನ್ನಡ ಅಭಿಮಾನ ಸಾರುವ ಕಥಾಹಂದರ ಹೊಂದಿರುವ ಸ್ಕ್ರಿಪ್ಟ್ ಸಿದ್ದಪಡಿಸಿದ್ದು, ಈ ಚಿತ್ರಕ್ಕೆ ರವಿಚಂದ್ರನ್ ನಾಯಕರಾಗಿ ನಟಿಸುತ್ತಿದ್ದಾರೆ.

  ವಿಜಯದಶಮಿಯಂದು ಈ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲು ತಯಾರಿಸಿ ನಡೆಸಲಾಗಿದೆ. ಎನ್‌ಎಸ್ ರಾಜ್‌ಕುಮಾರ್ ಈ ಚಿತ್ರ ನಿರ್ಮಿಸುತ್ತಿದ್ದು, ನೈಜ ಘಟನೆಗಳ ಸುತ್ತ ಸಿನಿಮಾ ಮೂಡಿಬರಲಿದೆಯಂತೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಖ್ಯಾತ ನಟ ಟಾಮ್ ಆಲ್ಟರ್ ಅವರ ಮಗ ಜೇಮಿ ಆಲ್ಟರ್ ಕಾಣಿಸಿಕೊಳ್ಳಲಿದ್ದಾರೆ. ಮುಂದೆ ಓದಿ...

  ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಟ್ಟ' ಗಿರಿರಾಜ್ ಸಿನಿಮಾ

  'ಕನ್ನಡಿಗ' ಎಂಬ ಚಿತ್ರದಲ್ಲಿ ರವಿಚಂದ್ರನ್ ನಟನೆ

  'ಕನ್ನಡಿಗ' ಎಂಬ ಚಿತ್ರದಲ್ಲಿ ರವಿಚಂದ್ರನ್ ನಟನೆ

  ಗಿರಿರಾಜ್ ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ 'ಕನ್ನಡಿಗ' ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಈ ಕಥೆಯು ನಿಜವಾದ ಘಟನೆಯನ್ನು ಆಧರಿಸಿ ಮಾಡಲಾಗಿದ್ದು, ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಯ ಕಾಲಘಟ್ಟದ ಕಥೆಯ ಇಲ್ಲಿರಲಿದೆ. 1550 ರ ದಶಕದ ಫ್ಲಾಶ್‌ಬ್ಯಾಕ್ ದೃಶ್ಯಗಳು ಈ ಕಥೆಯಲ್ಲಿ ಬರಲಿದೆ.

  ಕಿಟ್ಟೆಲ್ ಪಾತ್ರದಲ್ಲಿ ಜೇಮಿ ಆಲ್ಟರ್

  ಕಿಟ್ಟೆಲ್ ಪಾತ್ರದಲ್ಲಿ ಜೇಮಿ ಆಲ್ಟರ್

  ಕನ್ನಡ-ಇಂಗ್ಲಿಷ್ ಮೊದಲ ನಿಘಂಟು ರಚಿಸಿದ ಪಾದ್ರಿ ಮತ್ತು ಇಂಡಾಲಜಿಸ್ಟ್ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಪಾತ್ರದಲ್ಲಿ ಜೇಮಿ ಆಲ್ಟರ್ ನಟಿಸಲಿದ್ದಾರೆ. ಭಾಷೆಯ ಬಗ್ಗೆ ಜ್ಞಾನವನ್ನು ಸಂಪಾದಿಸಲು ಭಾರತಕ್ಕೆ ಬಂದಿದ್ದ ಕಿಟ್ಟೆಲ್ ಮಂಗಳೂರು, ಮಡಿಕೇರಿ ಮತ್ತು ಧಾರವಾಡಿನಲ್ಲಿ ತಂಗಿದ್ದರು. ಕನ್ನಡ ಹಲವಾರು ಕವನಗಳನ್ನು ಸಹ ರಚಿಸಿದ್ದಾರೆ.

  ಯಾರು ಈ ಜೇಮಿ ಆಲ್ಟರ್

  ಯಾರು ಈ ಜೇಮಿ ಆಲ್ಟರ್

  ಖ್ಯಾತ ನಟ ಟಾಮ್ ಆಲ್ಟರ್ ಅವರ ಮಗ ಜೇಮಿ ಆಲ್ಟರ್. ಟಾಮ್ ಆಲ್ಟರ್ ಹಿಂದಿ, ಇಂಗ್ಲೀಷ್, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. 1977 ರಲ್ಲಿ ಬಿಡುಗಡೆಯಾಗಿದ್ದ ಕನ್ನಡದ 'ಕನ್ನೇಶ್ವರ ರಾಮ' ಚಿತ್ರದಲ್ಲು ಟಾಮ್ ಆಲ್ಟರ್ ಮೊದಲ ಬಾರಿಗೆ ನಟಿಸಿದ್ದರು. ಎಂ.ಎಸ್.ಸತ್ಯು ಈ ಚಿತ್ರ ನಿರ್ದೇಶಿಸಿದರು. ಈ ಚಿತ್ರದಲ್ಲಿ ಟಾಮ್ ಆಲ್ಟರ್ ಬ್ರಿಟಿಷ್ ಅಧಿಕಾರಿ ನಟಿಸಿದ್ದರು. ಇದೀಗ, ಅವರ ಮಗ ಕನ್ನಡ ಸಿನಿಮಾ ಮಾಡುತ್ತಿದ್ದು, ಅವರು ಜರ್ಮನ್ ಪಾದ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  DIRECTORS DIARY : Pavan Wadeyar ಜನ ಹೇಳಿದ್ಮೇಲೆ ಕೇಳಲೇ ಬೇಕು, ಅದಕ್ಕೆ ಈ ಸಿನಿಮಾ ಮಾಡ್ತಾ ಇದ್ದೀನಿ | Part 2
  ದಸರಾ ಹಬ್ಬಕ್ಕೆ ಆರಂಭ

  ದಸರಾ ಹಬ್ಬಕ್ಕೆ ಆರಂಭ

  ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 26 ರಂದು ಈ ಚಿತ್ರ ಅಧಿಕೃತವಾಗಿ ಸೆಟ್ಟೇರಲಿದೆ. ನವೆಂಬರ್ ತಿಂಗಳು ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದು, ಜಿಎಸ್‌ವಿ ಸೀತಾರಂ ಛಾಯಾಗ್ರಹಣ ಇರಲಿದೆ.

  English summary
  Jamie Alter will be making his Kannada film debut alongside V Ravichandran. movie will be direct MB Giriraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X