»   » ಜನ್ ಧನ್ ಹೆಸರಿನ ಚಿತ್ರಕ್ಕೆ ಎಸ್ ನಾರಾಯಣ್ ಕ್ಲಾಪ್

ಜನ್ ಧನ್ ಹೆಸರಿನ ಚಿತ್ರಕ್ಕೆ ಎಸ್ ನಾರಾಯಣ್ ಕ್ಲಾಪ್

Posted By:
Subscribe to Filmibeat Kannada

ಶ್ರೀ ಸಿದ್ಧಿವಿನಾಯಕ ಲಾಂಛನದಲ್ಲಿ ಟಿ.ನಾಗಚಂದ್ರರವರು ತಮ್ಮ ಸ್ನೇಹಿತರ ಜೊತೆಗೂಡಿ ನಿರ್ಮಿಸುತ್ತಿರುವ "ಜನ್ ಧನ್" ಚಿತ್ರದ ಮುಹೂರ್ತವು ಕುರುಬರಹಳ್ಳಿಯಲ್ಲಿರುವ ಬಾಲಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.

ಚಿತ್ರದ ಪ್ರಥಮ ದೃಶ್ಯಕ್ಕೆ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ರವರು ಕ್ಲಾಪ್ ಮಾಡಿದಾಗ ಎಂ.ನಾಗರಾಜ್‍ರವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರಕ್ಕೆ ಅಣಿ ಮಾಡಿಕೊಟ್ಟರು.

Jan Dhan Kannada film Launched

"ಜನ್ ‍ಧನ್" ಚಿತ್ರವು ರಾಷ್ಟ್ರೀಯ ಹೆದ್ದಾರಿ (ಎನ್.ಎಚ್. 4) ರಲ್ಲಿ ನಡೆಯುವ ಒಂದು ದಿನದ ಕಥೆಯಾಗಿದ್ದು, ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗಿ ಸಂಜೆಯೊಂದಿಗೆ ಕೊನೆಗೊಳ್ಳುತ್ತದೆ.

ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಸುನಿಲ್ ಶಶಿ, ರಚನಾ ದಶರಥ್, ಅರುಣ್ ಎಲ್, ಲಕ್ಷ್ಮಣ್ ಮಾಸ್ಟರ್, ವಿನಾಯಕ್, ಸುಮನ್, ಕೆವಿನ್, ಜಯಲಕ್ಷ್ಮಿ ಮುಂತಾದವರಿದ್ದಾರೆ.

Jan Dhan Kannada film Launched

ಉಮೇಶ್ ಕಂಪ್ಲಾಪುರ್ ಅವರು ಛಾಯಾಗ್ರಾಹಕರಾಗಿದ್ದು, ಟಾಪ್‍ ಸ್ಟಾರ್ ರೇಣು ಅವರು ಸಂಗೀತ ನಿರ್ದೇಶಕರಾಗಿದ್ದಾರೆ. ಕಥೆ - ಚಿತ್ರಕಥೆ ಮತ್ತು ಸಂಭಾಷಣೆ ನಿರ್ದೇಶಕರಾದ ಟಿ.ನಾಗಚಂದ್ರ ಅವರದಾಗಿದೆ.
English summary
Jan Dhan Kannada film Launched recently directed by T Nagachandra. Film starring Arun L, Sunil Shashi and others.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada