For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣು ಕಾರಿನಲ್ಲಿದ್ದ 'ಬಣ್ಣ ಬಣ್ಣದ ಕವರ್'ಗಳ ರಹಸ್ಯ ಇಲ್ಲಿದೆ

  By ಜನಾರ್ಧನ ರಾವ್ ಸಾಳಂಕೆ
  |

  ಡಾ.ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಸುಮಾರು 8 ವರ್ಷಗಳು ಕಳೆಯುತ್ತಿದೆ. ಆದರೂ ಪ್ರತಿದಿನವು ಒಂದಲ್ಲ ಒಂದು ಕಾರಣಕ್ಕೆ ನಾವೆಲ್ಲಾ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿರುತ್ತೇವೆ. ಕಾರಣ ಅವರು ಸಾವಿರಾರು ಜನರ ಬಾಳಿನ ಬೆಳಕಾಗಿದ್ದವರು.

  ವಿಷ್ಣು ಅವರು ಚಿತ್ರರಂಗದಲ್ಲಿ ಬೆಳದಂತೆ ಅವರ ಜವಾಬ್ದಾರಿ ಮತ್ತು ಚಿಂತನೆಗಳು ಸಹ ಮಾಗಿ ಪರಿಪಕ್ವವಾದವು. ಎಲ್ಲರಲ್ಲೂ ನಾನೂ ಸಹ ಒಬ್ಬ, ನಾನು ಸಹ ನಿಮ್ಮಂತೆಯೇ, ಎಲ್ಲಾ ನಿಂದೆ, ಎಲ್ಲಾ ನೀನೇ ಎಂದು ಆಧ್ಯಾತ್ಮಿಕದತ್ತ ಹೆಜ್ಜೆ ಹಾಕಿದವರು.

  ಇಂತಹ ಡಾ.ವಿಷ್ಣು ಅವರು ಎಲ್ಲಿಯಾದರೂ ಹೊರಗೆ ಹೋಗಬೇಕಾದರೇ, ತಮ್ಮ ಕಾರಿನಲ್ಲಿ ಹಲವು 'ಬಣ್ಣ ಬಣ್ಣದ ಕವರ್'ಗಳನ್ನಿಟ್ಟುಕೊಂಡು ಹೋಗುತ್ತಿದ್ದರಂತೆ. ಇರದಲ್ಲಿ ಏನಿತ್ತು? ಯಾಕೆ ಎಂಬುದನ್ನ ಪತ್ರಕರ್ತರಾದ ಜನಾರ್ಧನ ರಾವ್ ಸಾಳಂಕೆ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ....

  ವಿಷ್ಣು ಅವರಿಗೊಂದು ಅಭ್ಯಾಸವಿತ್ತು

  ವಿಷ್ಣು ಅವರಿಗೊಂದು ಅಭ್ಯಾಸವಿತ್ತು

  ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ಉದ್ಘಾಟನೆ, ದೇವರ ದರ್ಶನ, ಕ್ರಿಕೆಟ್ ಆಡುವ ಸ್ಥಳ ಹೀಗೆ ಒಂದಲ್ಲ ಒಂದು ಒಂದು ಕಡೆ ವಿಷ್ಣು ಅವರು ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊರಟುಬಿಡುತ್ತಿದ್ದರು. ಎಲ್ಲಿ ಹೋದರು ಅವರು ತಮ್ಮ ಕಾರಿನಲ್ಲಿ ಕೆಲವು ವಸ್ತುಗಳನ್ನು ಇಡುತ್ತಿದ್ದರು.

  ಡಾ.ವಿಷ್ಣುವರ್ಧನ್ ರವರನ್ನ 'ಹೃದಯವಂತ' ಅನ್ನೋದು ಈ ಕಾರಣಕ್ಕೆ.!

  ಬಣ್ಣ ಬಣ್ಣದ ಕವರ್ ಗಳು ಇರುತ್ತಿದ್ದವು

  ಬಣ್ಣ ಬಣ್ಣದ ಕವರ್ ಗಳು ಇರುತ್ತಿದ್ದವು

  ತಾವು ಹೋಗುತ್ತಿದ್ದ ಕಾರಿನಲ್ಲಿ ಬಣ್ಣ ಬಣ್ಣದ ಕವರ್ ಗಳು, ಹಣ್ಣು ಹಂಪಲುಗಳು, ಶಾಲುಗಳು ಇತ್ಯಾದಿಗಳನ್ನು ಸಹ ಇಡುತ್ತಿದ್ದರು. ಆದರೆ ಬಹಳಷ್ಟು ಜನರಿಗೆ ಈ ಕವರ್ ನಲ್ಲಿ ಏನಿದೆ ಎಂದು ಗೊತ್ತಾಗುತ್ತಿರಲಿಲ್ಲ.

  ಡಾ.ವಿಷ್ಣುವರ್ಧನ್ ನೀಡಿದ್ದ ಬಿಸ್ಕತ್ ಪ್ಯಾಕೆಟ್ ಕಥೆ

  ಸಹಾಯ ಬೇಡಿದವರಿಗೆ ಆ ಕವರ್ ನೀಡುತ್ತಿದ್ದರು

  ಸಹಾಯ ಬೇಡಿದವರಿಗೆ ಆ ಕವರ್ ನೀಡುತ್ತಿದ್ದರು

  ಯಾರಾದರೂ ಬಡವರು, ಹೆಣ್ಣು ಮಕ್ಕಳು, ವೃದ್ದರು ಬಂದು ತಮಗೆ ಸಂಸಾರದಲ್ಲಿ ತುಂಬಾ ತೊಂದರೆ ಆಗಿದೆ, ಮಕ್ಕಳ ಶಾಲೆಯ ಶುಲ್ಕ ಭರಿಸಲು ಸಾಧ್ಯವಿಲ್ಲ, ನಮ್ಮ ಮಕ್ಕಳು ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ತಮ್ಮ ಅಳಲನ್ನು ಹೇಳಿಕೊಂಡರೆ ತಕ್ಷಣ ವಿಷ್ಣು ಹಿಂದು ಮುಂದು ನೋಡದೆ ತಮ್ಮ ಆಪ್ತ ಸಹಾಯಕ ರಾಧಾ ಕೃಷ್ಣ (ರಾಧು)ರನ್ನು ಕರೆದು ಕಾರಿನಿಂದ ಕೆಂಪು ಅಥವ ಹಳದಿ ಅಥವಾ ಹಸಿರು, ಹೀಗೆ ಯಾವುದಾದರೂ ಒಂದು ಬಣ್ಣದ ಕವರ್ ತರಲು ಹೇಳುತ್ತಿದ್ದರು. ಕವರ್ ವಿಷ್ಣು ಕೈ ತಲುಪಿದ ಮೇಲೆ ತಮ್ಮಲ್ಲಿ ಸಹಾಯ ಬೇಡಿ ಬಂದವರಿಗೆ ನಮಸ್ಕರಿಸಿ "ಇದನ್ನು ತೆಗೆದುಕೊಳ್ಳಿ, ಬೇಡ ಎನ್ನಬೇಡಿ. ಇದು ನಿಮ್ಮ ಸಹಾಯಕ್ಕೆ ಬರುತ್ತದೆ". ಎಂದು ಹೇಳುತ್ತಿದ್ದರು.

  ಆ ಕವರ್ ನಲ್ಲಿರುತ್ತಿತ್ತು ಹಣ

  ಆ ಕವರ್ ನಲ್ಲಿರುತ್ತಿತ್ತು ಹಣ

  ವಯಸ್ಸಿನಲ್ಲಿ ತಮಗಿಂತಲೂ ಹಿರಿಯರಾದರೆ ಅವರ ಕಾಲಿಗೆರಗಿ ನಮಸ್ಕರಿಸಿ ಹಣ್ಣು ಮತ್ತು ಶಾಲನ್ನು ನೀಡುತ್ತಿದ್ದರು. ಬೇಡಿ ಬಂದ ವ್ಯಕ್ತಿಯ ಕಷ್ಟದ ಅನುಸಾರ ಕವರ್ ನಲ್ಲಿ ಹಣ ಇರುತ್ತಿತ್ತು (ಕೆಲವು ಸಾವಿರದಿಂದ ಲಕ್ಷದವರೆಗೆ). ಎಷ್ಟೋ ಬಾರಿ ವಿಷ್ಣು ಕಾರಿನಲ್ಲಿ ಚಲಿಸುವಾಗ ವೃದ್ದರು ಅಡ್ಡ ಬಂದರೆ ಕೊಡಲೇ ಕಾರನ್ನು ನಿಲ್ಲಿಸಿ, ಕಾರಿನಲ್ಲಿದ್ದ ಹಣ್ಣು, ಶಾಲು ಮತ್ತು ಕವರ್ ಸಹ ನೀಡಿದ್ದಾರೆ.

  ಸಹಾಯ ಮಾಡಿದ ನಂತರ ಏನು ಹೇಳುತ್ತಿದ್ದರು

  ಸಹಾಯ ಮಾಡಿದ ನಂತರ ಏನು ಹೇಳುತ್ತಿದ್ದರು

  ಇಂತಹವನ್ನು ನಾವು ಕೇವಲ ಸಿನಿಮಾದಲ್ಲಿ ನೋಡಿ ಆನಂದಿಸುತ್ತೇವೆ. ಆದರೆ ವಿಷ್ಣು ಅವರು ತಾವು ಬದುಕಿದ್ದಾಗಲೇ ಇದಕ್ಕೆ ಸಾಕ್ಷಿಯಾಗಿದ್ದವರು. ಸಹಾಯ ಮಾಡಿದ ನಂತರ ಹೇಳುತ್ತಿದ್ದ ಒಂದೇ ಒಂದು ಮಾತು ಅಂದರೆ "ಇದನ್ನು ನಾನು ಕೊಟ್ಟೆ ಎಂದು ಯಾರಿಗೂ ಹೇಳಬೇಡಿ". ಇದು ವಿಷ್ಣು ಅವರ ಬಂಗಾರದ ಗುಣ. ಇದು ಮನುಷ್ಯತ್ತ್ವ, ಇದು ಮಾನವೀಯತೆ, ಇದು ಮನುಜ ಕರ್ತವ್ಯ ಅಲ್ಲವೇ.

  ಕಣ್ಣಾರೆ ಕಂಡಿರುವ ಉದಾಹರಣೆ ಇದೆ

  ಕಣ್ಣಾರೆ ಕಂಡಿರುವ ಉದಾಹರಣೆ ಇದೆ

  ನಾವು ಬದುಕಿರುವಾಗ ಅದು ಬೇಕು, ಇದು ಬೇಕು ಎಂಬ ಹಪ್ಪಹಪಿಯಲ್ಲಿ ಸಮಯ ಕಳೆಯುತ್ತೇವೆ. ನಾವು ಸತ್ತ ಮೇಲೆ ನಮ್ಮೊಂದಿಗೆ ಯಾರು ಸಹ ಬರಲು ಸಾಧ್ಯವಿಲ್ಲ. ಎಲ್ಲಿದ್ದರೂ ನಾವು ಮಾಡಿದ ಕೆಲಸ ಉಳಿದುಕೊಳ್ಳುತ್ತದೆ. ನಾವು ಮಾಡುವ ಒಳ್ಳೆಯ ಕೆಲಸವನ್ನು ಜನ ಮಾತನಾಡಿಕೊಳ್ಳುತ್ತಾರೆ. ವಿಷ್ಣು ಅವರು ಮಾಡುತ್ತಿದ್ದ ಸಮಾಜಮುಖಿ ಕೆಲಸಗಳನ್ನು ನಾನು ಬಹಳಷ್ಟು ಬಾರಿ ಕಂಡಿದ್ದೇನೆ. ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರನ್ನು ನಾನು ಸಂದರ್ಶನ ಮಾಡು ಸಮಯದಲ್ಲಿ ಇದೇ ವಿಷಯವನ್ನು ಹೇಳಿದ್ದರು. ಏನಾದರೂ ಆಗು ಮೊದಲು ಮಾನವನಾಗು ಎಂಬುದರಲ್ಲಿ ಡಾ.ವಿಷ್ಣುವರ್ಧನ್ ಅವರು ವಿಶ್ವಾಸ ವಿಟ್ಟಿದ್ದರು. ಇಂತಹ ಚೇತನವನ್ನು ಪಡೆದ ನಾವೇ ಧನ್ಯರು.

  ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ

  ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ

  ಅಂದ್ಹಾಗೆ, ವಿಷ್ಣು ಅವರ ಈ ನೆನಪುಗಳನ್ನ ಹಂಚಿಕೊಂಡಿದ್ದು ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ. ಇವರು "ಕರುಣಾಮಯಿ ಡಾ.ವಿಷ್ಣುವರ್ಧನ್" ಸೇರಿದಂತೆ ಡಾ.ವಿಷ್ಣುವರ್ಧನ್ ರವರ ಕುರಿತಾಗಿ 6 ಪುಸ್ತಕಗಳನ್ನು ಬರೆದಿದ್ದಾರೆ.

  English summary
  Janardhana Rao Salanke, Media Journalist and a hardcore fan of Dr.Vishnuvardhan, remembers beautiful memories of dr vishnuvardhan. ಪತ್ರಕರ್ತ ಜನಾರ್ಧನ ರಾವ್ ಸಾಳಂಕೆ ಅವರು ಡಾ.ವಿಷ್ಣುವರ್ಧನ್ ಅವರ ಕೆಲವು ಅದ್ಭುತ ನೆನಪುಗಳನ್ನ ಹಂಚಿಕೊಂಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X