»   » ಸುಕೃತಾ ವಾಗ್ಲೆ ಬಂಗಾರದಂತ ಕನಸಿಗೆ ಕೊಳ್ಳಿ ಇಟ್ಟ 'ಜಟ್ಟ'

ಸುಕೃತಾ ವಾಗ್ಲೆ ಬಂಗಾರದಂತ ಕನಸಿಗೆ ಕೊಳ್ಳಿ ಇಟ್ಟ 'ಜಟ್ಟ'

Posted By: ಜೀವನರಸಿಕ
Subscribe to Filmibeat Kannada

ಸುಕೃತಾ ವಾಗ್ಲೆ ಅನ್ನೋ ಚೆಲುವೆ 'ಜಟ್ಟ' ಚಿತ್ರದಲ್ಲಿ ಜಬರ್ದಸ್ತ್ ಅಭಿನಯ ನೀಡಿದ್ರು. ಮೊದಲ ಸಿನಿಮಾಲ್ಲೇ ಸುಕೃತಾ ತೋರಿದ್ದ ದಿಟ್ಟತನಕ್ಕೆ ಸಿನಿಪ್ರೇಮಿಗಳು ಮಾತ್ರವಲ್ಲ ನಿರ್ದೇಶಕರು ದಂಗಾಗಿ ಹೋಗಿದ್ರು.

ಪಾತ್ರಕ್ಕಾಗಿ ಹೆಚ್ಚೂ ಕಡಿಮೆ ಬೆತ್ತಲಾಗಿದ್ದ ಸುಕ್ರುತಾ ಡೈಲಾಗ್ಗಳಲ್ಲೂ ಭರ್ಜರಿ ಡೆಡಿಕೇಷನ್ ನೀಡಿದ್ರು. ನಿರ್ದೇಶಕ ಗಿರಿರಾಜ್ ಹೇಳಿದಂತೆ ಕೇಳಿ ತನ್ನ ಪ್ರತಿಭೆಯನ್ನ ಒರೆಗೆ ಹಚ್ಚಿದ್ರು. ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ['ಜಟ್ಟ' ಚಿತ್ರ ವಿಮರ್ಶೆ]

ಆದ್ರೆ ಆಮೇಲೆ ಸುಕೃತಾರನ್ನ ತಾನು ಮಾಡಿದ್ದ ಪಾತ್ರವೇ ಕಾಡೋಕೆ ಶುರುವಾಯ್ತು. ಅದು ದಿಟ್ಟ ಮಹಿಳೆ ಜಟ್ಟನ ವಿರುದ್ಧ ತಿರುಗಿ ಬೀಳೋ ಪಾತ್ರ ಅಂದ್ರೂ ತಪ್ಪಲ್ಲ. ಅದು ಕಾಡಿದ್ದು ಹೇಗೆ ಸುಕೃತಾ ಇದೆಲ್ಲದ್ರಿಂದ ಸುಧಾರಿಸಿಕೊಂಡ್ರಾ? ಸ್ಲೈಡ್ ನಲ್ಲಿ ಇಂಟರೆಷ್ಟಿಂಗ್ ವಿಷಯಗಳಿವೆ ನೋಡಿ.

ಸುಕೃತಾ ವಾಗ್ಲೆ ಮೊದಲ 'ಲೌ'

ಸುಕೃತಾ ವಾಗ್ಲೆ ಅನ್ನೋ ನಟಿಯ ಮೊದಲ ಲೌ ಅಂದ್ರೆ ಅದು ಪುನೀತ್ ಆರ್ಯ ನಿರ್ದೇಶನದ 'ಲೌ' ಚಿತ್ರ. ಲೌ ಚಿತ್ರದಲ್ಲಿ ಸ್ವಲ್ಪ ಬೋಲ್ಡ್ ಅಂಡ್ ಬ್ಯೂಟಿಫುಲ್ಲಾಗಿ ಗಮನಸೆಳೆದ ಸುಕೃತಾಗೆ ಜಟ್ಟ ಪಾತ್ರ ಹುಡುಕಿ ಬಂತು.

ಏರ್ ಹೋಸ್ಟೆಸ್ ಸುಕೃತಾ

ಮೂಲತಃ ಸುಕೃತಾ ಗಗನ ಸಖಿಯಾಗಿ ಲಕ್ಷಗಟ್ಟಲೇ ಸಂಬಳ ಎಣಿಸ್ತಾ ಆಕಾಶದಲ್ಲಿ ಹಾರಾಡಿಕೊಂಡಿರೋ ಕನಸು ಕಂಡಿದ್ದವರು. ಡಾನ್ಸರ್ ಆಗಿದ್ದರಿಂದ ಸುಕೃತಾಗೆ ಸಿನಿಮಾ ಅವಕಾಶ ಬೇಡ ಬೇಡ ಅಂದ್ರೂ ಒದಗಿಬಂದಿತ್ತು.

ಒಂದು ಸಿನಿಮಾ ಸಾಕು

ಒಂದೇ ಸಿನಿಮಾ ಸಾಕು ಅಂತ ನಿರ್ಧಾರ ಮಾಡಿ ಈ ನವನಟಿ ಮತ್ತೆ ಆಕಾಶದಲ್ಲಿ ಹಾರಾಡಿಕೊಂಡು ಸೌದಿಯಂತಹಾ ದೇಶದಲ್ಲಿ ಆರಾಮಾಗಿ ಇರೋಣ ಅಂತ ಯೋಚಿಸಿದ್ರೆ ಜಟ್ಟ ಪಾತ್ರ ಇಷ್ಟವಾಗಿ ಎರಡನೇ ಸಿನಿಮಾಗೆ ಕಾಲಿಟ್ರು.

ಜಟ್ಟದ ಪಾತ್ರ ಬೆಚ್ಚಿ ಬೀಳಿಸ್ತು

ಜಟ್ಟ ಸಿನಿಮಾ ನೋಡಿದ ನಿರ್ದೇಶಕರು ಬೆತ್ತಲಾಗುವ ಅರೆಬೆತ್ತಲಾಗುವ ಹತ್ತು ಹಲವು ಕಥೆಗಳನ್ನ ಸುಕೃತಾ ಮುಂದೆ ತಂದ್ರು. ಎರಡನೇ ಸಿನಿಮಾದಲ್ಲೇ ಇಷ್ಟು ಬೋಲ್ಡ್ ಆಗಿರೋ ನಟಿಗೆ ಎಲ್ಲ ನಿರ್ದೇಶಕರು ಕೇಳಿದ್ದು ಇಂತಹಾ ಕತ್ತಲೆಯ ಬೆತ್ತಲೆಯ ಪಾತ್ರಗಳನ್ನೇ.

ಜಟ್ಟ ಅಂದ್ರೆ ಭಯ

ಈ ಪರಿ ಆಫರ್ ನೋಡಿ ಯಾರಾದ್ರೂ ಸಿನಿಮಾ ಮಂದಿ ನೀವು ಜಟ್ಟ ಸಿನಿಮಾ ಹೀರೋಯಿನ್ ಅಲ್ವಾ? ಅಂದ್ರೆ ಸಾಕು ಒಂದು ಕ್ಷಣ ಸುಕೃತಾಗೆ ತಲೆ ಗಿರಗಿಟ್ಲೆಯಾಗಿಬಿಡುತ್ತೆ. ಸ್ಟೇಟ್ ಅವಾರ್ಡ್ ಬಂದಮೇಲಂತೂ ಈ ತಲೆ ನೋವು ಇನ್ನೂ ಹೆಚ್ಚು.

ತಲೆ ನೋವಿಂದ ತಮಿಳಿಗೆ

ಈ ತಲೆ ನೋವಿಂದ ತಪ್ಪಿಸಿಕೊಳ್ಳೋಕೆ ಸದ್ಯ ಸುಕೃತಾ ತಮಿಳು ಚಿತ್ರರಂಗದತ್ತ ವಾಲಿದ್ದಾರೆ. ಅಲ್ಲಿ ಅಪ್ಪಿತಪ್ಪೀನೂ ನಾನು ಇಂತಹಾ ಸಿನಿಮಾದಲ್ಲಿ ನಟಿಸಿದ್ದೆ ಅಂತ ಹೇಳಿಕೊಳ್ಳೋದಿಲ್ಲವಂತೆ.

ಬಣ್ಣದ ಮಾಯೆ ಬಿಡೋದಿಲ್ಲ

ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ಹಕ್ಕಿಯಂತೆ ಹಾರಾಡಿಕೊಂಡಿರೋದು ಇದಕ್ಕಿಂತಾ ಬೆಸ್ಟ್ ಅಲ್ಲವಾ ಅಂದ್ರೆ ಸುಕೃತಾ ಹೇಳ್ತಾರೆ. ಅದೇನೋ ಹೇಳ್ತಾರಲ್ಲ ಬಣ್ಣದ ಮೋಹ ಅಂತ ಹಾಗೆ ಒಂದ್ಸಾರಿ ಹಚ್ಚಿದಮೇಲೆ ಅದು ನಮ್ಮನ್ನ ಬಿಡೋದಿಲ್ಲ. ಹಂಗಾಗಿದೆಯಂತೆ ಅವರ ಪರಿಸ್ಥಿತಿ.

English summary
Sandalwood talented actress Sukratha Wagle shares her past, future with Filmibeat Kannada. Her much acclaimed 'Jatta' movie snaps off her dreams. Here is Sukratha's views and impact of Jatta on her career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada