»   » ಆಕ್ಸಿಡೆಂಟ್ ಪ್ರಕರಣಕ್ಕೆ ಟ್ವಿಸ್ಟ್: ಪ್ರಜ್ವಲ್ ಸಹೋದರನಿಗೆ ನೋಟಿಸ್.!

ಆಕ್ಸಿಡೆಂಟ್ ಪ್ರಕರಣಕ್ಕೆ ಟ್ವಿಸ್ಟ್: ಪ್ರಜ್ವಲ್ ಸಹೋದರನಿಗೆ ನೋಟಿಸ್.!

Posted By:
Subscribe to Filmibeat Kannada

ಸೆಪ್ಟೆಂಬರ್ 27ರ ರಾತ್ರಿ ಸೌಂತ್ ಎಂಡ್ ವೃತ್ತದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಅವರ ಜೊತೆ ಇಬ್ಬರು ಸ್ಟಾರ್ ನಟರು ಇದ್ದರು ಎಂದು ಹೇಳಲಾಗುತ್ತಿತ್ತು.

ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆದ್ರೆ, ಇದೀಗ, ಪ್ರಜ್ವಲ್ ಬದಲು ಪ್ರಜ್ವಲ್ ಸಹೋದರ ಪ್ರಣಾಮ್ ದೇವರಾಜ್ ಅವರಿಗೆ ನೋಟಿಸ್ ನೀಡಿದ್ದಾರೆ.

ಅಷ್ಟಕ್ಕೂ, ಪ್ರಣಾಮ್ ದೇವರಾಜ್ ಅವರಿಗೆ ನೋಟಿಸ್ ಕೊಟ್ಟಿದ್ದು ಯಾಕೆ? ಪ್ರಣಾಮ್ ಮತ್ತು ಈ ಪ್ರಕರಣಕ್ಕೆ ಏನು ಸಂಬಂಧ? ಮುಂದೆ ಓದಿ......

ಪ್ರಜ್ವಲ್ ನಂತರ ಪ್ರಣಾಮ್ ಹೆಸರು?

ಕಳೆದ ಮೂರು ದಿನಗಳಿಂದ ಅಪಘಾತ ಮತ್ತು ಡಗ್ಸ್ ಪ್ರಕರಣದಲ್ಲಿ ನಟ ಪ್ರಜ್ವಲ್ ದೇವರಾಜ್ ಹೆಸರು ತಳುಕು ಹಾಕಿಕೊಂಡಿತ್ತು. ಆದ್ರೀಗ, ಪ್ರಜ್ವಲ್ ನಂತರ ಪ್ರಜ್ವಲ್ ದೇವರಾಜ್ ಸಹೋದರ ಪ್ರಣಾಮ್ ಅವರ ಹೆಸರು ಕೇಳಿ ಬರುತ್ತಿದೆ.

ಪ್ರಜ್ವಲ್-ದಿಗಂತ್ ಬೆಂಬಲಕ್ಕೆ ನಿಂತ ಲವ್ಲಿಸ್ಟಾರ್ ಪ್ರೇಮ್

ಪ್ರಣಾಮ್ ಗೆ ನೋಟಿಸ್.!

ವಿಷ್ಣು ಅವರ ಕಾರು ಅಪಘಾತವಾದ ಸ್ಥಳದಲ್ಲಿ ಪ್ರಣಾಮ್ ದೇವರಾಜ್ ಇದ್ದರು ಎಂಬ ಅನುಮಾನದ ಮೇಲೆ ದೇವರಾಜ್ ಅವರ ಕಿರಿಯ ಪುತ್ರನಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರಂತೆ.

ಪ್ರಜ್ವಲ್ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ದಿನಕರ್

ಪ್ರಣಾಮ್ ಉತ್ತರ ಕೊಟ್ಟು ಬಂದಿದ್ದಾರಂತೆ

ಇನ್ನು ಜಯನಗರ ಪೊಲೀಸರ ನೋಟಿಸ್ ಗೆ ಪ್ರಣಾಮ್ ದೇವರಾಜ್ ಉತ್ತರ ಕೊಟ್ಟು ಬಂದಿದ್ದಾರೆ ಎಂದು ಹಿರಿಯ ನಟ ದೇವರಾಜ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಪಘಾತವಾದ ಸ್ಥಳದಲ್ಲಿ ನೀವು ಯಾಕೆ ಇದ್ದೀರಿ ಎಂದು ವಿವರಣೆ ಕೊಡಿ ಎಂದು ನೋಟಿಸ್ ನೀಡಿದ್ದರು. ಸ್ನೇಹಿತನಿಗೆ ಅಪಘಾತವಾಗಿರುವ ಹಿನ್ನೆಲೆ ಹೋಗಿದ್ದೆ ಎಂದು ಪ್ರಣಾಮ್ ಪೊಲೀಸರಿಗೆ ತಿಳಿಸಿದ್ದಾರಂತೆ.

ಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆ

ದಿಗಂತ್ ಗೂ ನೋಟಿಸ್ ಬಂದಿದೆ.!

ಇನ್ನು ನಟ ದಿಗಂತ್ ಅವರಿಗೂ ಜಯನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರಂತೆ. ಆದ್ರೆ, ದಿಗಂತ್ ಕೈಗೆ ಯಾವ ನೋಟಿಸ್ ಸಿಕ್ಕಿಲ್ಲ ಎಂದು ಅಲ್ಲೆಗಳೆದಿದ್ದಾರೆ ಎಂದು ಮಾಧ್ಯಮಳಲ್ಲಿ ವರದಿಯಾಗಿದೆ.

8 ಜನರಿಗೆ ನೋಟಿಸ್

ಉದ್ಯಮಿ ಮೊಮ್ಮಗ ವಿಷ್ಣು ಅವರ ಕಾರಿನಲ್ಲಿ ಸ್ಟಾರ್ ನಟರು ಇದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಜನರಿಗೆ ನೋಟಿಸ್ ನೀಡಿದ್ದಾರಂತೆ. ಆದ್ರೆ, ವಿಷ್ಣು ಜೊತೆ ಯಾವ ನಟರು ಇದ್ದರು ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ.

English summary
The media reported that Jayanagar police has issued notice to actor Diganth and Pranam Devaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada