»   » ಸಿನಿಮಾ ನಿರ್ದೇಶನದತ್ತ ಜಯಂತ್ ಕಾಯ್ಕಿಣಿ ಚಿತ್ತ...

ಸಿನಿಮಾ ನಿರ್ದೇಶನದತ್ತ ಜಯಂತ್ ಕಾಯ್ಕಿಣಿ ಚಿತ್ತ...

Written By:
Subscribe to Filmibeat Kannada

ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಜಯಂತ್ ಕಾಯ್ಕಿಣಿ ಹೆಸರು ಕೇಳಿದ ತಕ್ಷಣ ಅವರ ಮುದ್ದಾದ ಹಾಡುಗಳು ನೆನಪಾಗುತ್ತದೆ. ಇಷ್ಟು ದಿನ ತಮ್ಮ ಸಾಹಿತ್ಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ ಜಯಂತ್ ಕಾಯ್ಕಿಣಿ ಅವರು ಈಗ ನಿರ್ದೇಶನ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಜಯಂತ್ ಕಾಯ್ಕಿಣಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಕನಸನ್ನು ವ್ಯಕ್ತಪಡಿಸಿದ್ದಾರೆ. ''ನಿರ್ದೇಶನ ಮಾಡುವುದು ನನ್ನ ದೊಡ್ಡ ಕನಸು, ಹೀಗಾಗಿ ನನ್ನ ಕಥೆಗಳು ಸಿನಿಮಾದ ರೀತಿ ಇರುತ್ತದೆ. ನನ್ನೊಳಗೆ ಒಬ್ಬ ನಿರ್ದೇಶಕ ಇದ್ದಾನೆ.'' ಅಂತ ಹೇಳಿಕೊಂಡಿದ್ದಾರೆ.

Jayanth Kaikini expressed his desire to direct the film

ನಿರ್ದೇಶನ ಮಾಡುವ ಬಗ್ಗೆ ಮಾತನಾಡಿರುವ ಕಾಯ್ಕಿಣಿ ಅವರು ಯಾವಗ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬುದನ್ನು ಇನ್ನು ನಿರ್ಧಾರ ಮಾಡಿಲ್ಲವಂತೆ. ಅಂದಹಾಗೆ, 'ಚಿಗುರಿದ ಕನಸು' ಚಿತ್ರದಿಂದ ಶುರುವಾದ ಜಯಂತ್ ಕಾಯ್ಕಿಣಿ ಅವರ ಹಾಡುಗಳ ಜಾತ್ರೆ ಮೊನ್ನೆ ಮೊನ್ನೆ ಬಂದ 'ಮುಗುಳುನಗೆ' ಚಿತ್ರದವರೆಗೆ ಸಾಗುತ್ತಾ ಬಂದಿದೆ.

English summary
Jayanth Kaikini expressed his desire to direct the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada