Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರವೀಂದ್ರ ಕಲಾಕ್ಷೇತ್ರದಲ್ಲಿ ಜಯಂತಿ ಅವರ ಅಂತಿಮ ದರ್ಶನಕ್ಕೆ ಅವಕಾಶ
ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಯಂತಿ ಇಂದು ಬೆಳಗ್ಗೆ ಕೊನೆಯುಸಿರೆಳಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.
Recommended Video
ಇತ್ತೀಚಿಗಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೇತರಿಸಿಕೊಳ್ಳುತ್ತಿದ್ದ ಜಯಂತಿ ನಿಧನ ಚಿತ್ರರಂಗಕ್ಕೆ ಆಘಾತತಂದಿದೆ. ಅನೇಕ ಗಣ್ಯರು ಜಯಂತಿ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಜಯಂತಿ ಅವರ ಅಂತಿಮ ದರ್ಶನ ಪಡೆಯಬೇಕು ಎನ್ನುವುದು ಅನೇಕ ಅಭಿಮಾನಿಗಳ ಬಯಕೆ.
ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಿಕೊಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಜಯಂತಿ ಅವರ ಪಾರ್ಥಿವ ಶರೀರ ರವೀಂದ್ರ ಕಲಾಕ್ಷೇತ್ರಕ್ಕೆ ರವಾನೆಯಾಗಲಿದ್ದು ಅಂತಿಮ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ನಟಿ ತಾರಾ, "ಈಗಾಗಲೇ ಸಿಎಂ ಅವರಿಗೆ ಮನವಿ ಮಾಡಿದ್ದೀವಿ. ರವಿ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕೊಟ್ಟಿದ್ದಾರೆ" ಎಂದು ಹೇಳಿದ್ದಾರೆ.
ಅಂತಿಮ ವಿಧಿವಿಧಾನದ ಬಗ್ಗೆ ಇನ್ನು ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಕೆಲವೇ ಸಮಯದಲ್ಲಿ ನಿರ್ಧಾರದ ಬಗ್ಗೆ ಹೇಳುವುದಾಗಿ ನಟಿ ತಾರಾ ಹೇಳಿದ್ದಾರೆ.
ಇನ್ನು ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಕೂಡ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನಟಿ ತಾರಾ ಮತ್ತು ಗಿರಿಜಾ ಲೋಕೇಶ್ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲವೇ ಸಮಯದಲ್ಲಿ ಅಂತಿಮ ವಿಧಿ ವಿಧಾನಗಳ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.