»   » ಸಂಪೂರ್ಣ ಗುಣಮುಖರಾದ ಹಿರಿಯ ನಟಿ ಜಯಂತಿ

ಸಂಪೂರ್ಣ ಗುಣಮುಖರಾದ ಹಿರಿಯ ನಟಿ ಜಯಂತಿ

Posted By:
Subscribe to Filmibeat Kannada
ಸಂಪೂರ್ಣ ಗುಣಮುಖರಾದ ಹಿರಿಯ ನಟಿ ಜಯಂತಿ | Filmibeat Kannada

ಕನ್ನಡ ಸಿನಿಮಾರಂಗದ ಹಿರಿಯ ನಟಿ ಜಯಂತಿ ಸುಮಾರು ಹತ್ತು ದಿನಗಳಿಂದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಭಿನಯ ಶಾರದೆ ಸಂಪೂರ್ಣ ಗುಣಮುಖರಾಗಿ ಇಂದು (ಏರ್ಪಿಲ್ 6) ಮನೆಗೆ ತೆರಳುತ್ತಿದ್ದಾರೆ. ಮನೆಗೆ ಹೋಗುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಂತಿ ತನಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ಆರಂಭದಲ್ಲೇ ಭಾವುಕರಾಗಿ ಮಾತನಾಡಿದ ನಟಿ ಜಯಂತಿ "ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮೆ ಇರಲಿ ಎಂದರು. ಮಾಧ್ಯಮದವರು ಹತ್ತು ದಿನಗಳ ಕಾಲ ನನಗಾಗಿ ಆಸ್ಪತ್ರೆ ಹೊರಗೆ ಕಾದಿದ್ದೀರಿ ನಿಮಗೆ ಧನ್ಯವಾದಗಳು, ಡಾ ಸತೀಶ್ ಮತ್ತು ತಂಡದವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ".

Jayanthi has discharged from Vikram Hospital after ten days of treatment,

ಹಿರಿಯ ನಟಿ ಜಯಂತಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

"ಕನ್ನಡ ಮಾಧ್ಯಮಗಳನ್ನ ಬಿಟ್ಟು ಬೇರೆ ಬಾಷೆಯ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡಿದೆ. ಆದರೆ ಕನ್ನಡದವರು ಹಾಗೆ ಮಾಡಲಿಲ್ಲ. ನನ್ನ ಆರೋಗ್ಯ ಹೇಗಿದೆ ಎನ್ನುವುದನ್ನ ತಿಳಿದುಕೊಂಡು ಸುದ್ದಿ ಪ್ರಸಾರ ಮಾಡಿದ್ದಾರೆ. ಕನ್ನಡಿಗರ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ" ಎಂದು ಸಂತೋಷ ವ್ಯಕ್ತ ಪಡಿಸಿದರು.

ಕೆಲವು ಕಟ್ಟುನಿಟ್ಟಿನ ಆಹಾರ ಕ್ರಮವನ್ನ ಪಾಲನೆ ಮಾಡುವಂತೆ ಜಯಂತಿ ಅವರಿಗೆ ವೈದ್ಯರು ಸೂಚನೆ ನೀಡಿದ್ದಾರೆ. ಇಂದು ಡಿಸ್ಚಾರ್ಜ್ ಆಗಿರುವ ಅಭಿನಯ ಶಾರದೆ ಕೆಲವು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ನಾನು ಸಂಪೂರ್ಣವಾಗಿ ಗುಣಮುಖವಾದ ನಂತರ ಮತ್ತೆ ಮಾಧ್ಯಮದವನ್ನು ಭೇಟಿ ಆಗುತ್ತೇನೆ ಎಂದು ಖುದ್ದು ಜಯಂತಿ ಅವರೇ ತಿಳಿಸಿದ್ದಾರೆ.

ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ: ಅಭಿನಯ ಶಾರದೆ ಹೆಸರಲ್ಲಿ ಮೃತ್ಯುಂಜಯ ಹೋಮ

English summary
Kannada Veteran Actress Jayanthi has been discharged from Vikram Hospital, Bengaluru after ten days of treatment, who suffered from asthma and respiratory problems.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X