Just In
Don't Miss!
- Lifestyle
ಮನೆಗೆ ಬಂದ ಅತಿಥಿಗಳಿಗೆ ಟೀ-ಕಾಫಿ ಕೊಡೋದು ಬಿಡಿ, ಈ ದ್ರಾಕ್ಷಿ ಸೋಡಾ ನೀಡಿ
- Automobiles
ದಿನೇ ದಿನೇ ಜನಪ್ರಿಯವಾಗುತ್ತಿರುವ ಆಂಡ್ರಾಯ್ಡ್ ಆಟೋದ ಬಗೆಗಿನ ವಿವರಗಳಿವು
- News
ಇವೆಲ್ಲ ರಾಜಕೀಯ ಷಡ್ಯಂತ್ರ, ತೇಜೋವಧೆಗೆ ಮಾಧ್ಯಮಗಳ ಬಳಕೆ: ಡಾ.ಕೆ.ಸುಧಾಕರ್
- Finance
ಹೊಸ ಕಾರುಗಳ ಮುಂಭಾಗದ ಸೀಟುಗಳಿಗೆ ಏರ್ಬ್ಯಾಗ್ ಕಡ್ಡಾಯಗೊಳಿಸದ ಕೇಂದ್ರ ಸರ್ಕಾರ
- Education
RDPR Recruitment 2021: ಅನಾಲಿಸ್ಟ್ ಮತ್ತು ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಮೋಹನ್ ಬಾಗನ್ ವಿರುದ್ಧ ಅದೃಷ್ಟ ಪರೀಕ್ಷಿಸಲಿರುವ ನಾರ್ಥ್ ಈಸ್ಟ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಯಶ್ರೀ ಖಿನ್ನತೆಗೆ ಕುಟುಂಬದೊಂದಿಗೆ ಕಲಹವೂ ಆಗಿತ್ತೆ ಕಾರಣ?
ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೃದ್ಧಾಶ್ರಮದಲ್ಲಿ ಜಯಶ್ರೀ ನೇಣಿಗೆ ಶರಣಾಗಿದ್ದಾರೆ.
ಈ ಹಿಂದೆಯೂ ಎರಡು ಬಾರಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದರು. ಜಯಶ್ರೀ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿತ್ತು. ಖಿನ್ನತೆಗೆ ಚಿಕಿತ್ಸೆಯನ್ನೂ ಸಹ ಜಯಶ್ರೀ ಪಡೆಯುತ್ತಿದ್ದರು ಎನ್ನಲಾಗುತ್ತಿದೆ.
ಇದರ ಜೊತೆಗೆ ಜಯಶ್ರೀ ತಮ್ಮದೇ ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಆಸ್ತಿ ವಿವಾದ ಒಂದರಿಂದ ಬಹುವಾಗಿ ಮಾನಸಿಕವಾಗಿ ನೊಂದಿದ್ದ ಜಯಶ್ರೀ, ಪೊಲೀಸ್ ಠಾಣೆ ಮೆಟ್ಟಿಲನ್ನು ಸಹ ಏರಿದ್ದರು.

ಆಸ್ತಿ ವಿಚಾರವಾಗಿ ಜಗಳವಾಗಿತ್ತು
2019 ರ ಸೆಪ್ಟೆಂಬರ್ ತಿಂಗಳಲ್ಲಿ ಜಯಶ್ರೀ ರಾಮಯ್ಯ ಕುಟುಂಬದಲ್ಲಿ ಕಹಲಗಳಾಗಿದ್ದವು. ಜಯಶ್ರೀ ಅವರೇ ಮಾಧ್ಯಮಗಳಿಗೆ ಹೇಳಿದ್ದಂತೆ, ಜಯಶ್ರೀ ಅವರ ತಾಯಿಯ ತಮ್ಮ ಆಸ್ತಿಗಾಗಿ ಜಯಶ್ರೀ ಅವರನ್ನು ಹಾಗೂ ಅವರ ತಾಯಿಯನ್ನು ನಡುರಾತ್ರಿ ಮನೆಯಿಂದ ಹೊರಗೆ ದಬ್ಬಿದ್ದರಂತೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು
ಮಳೆಯಲ್ಲಿ ಅಮ್ಮ-ಮಗಳು ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗದೆ ಕೊನೆಗೆ ಅಜ್ಜಿಯ ಮನೆಗೆ ಹೋಗಿದ್ದಾರೆ. ನಂತರ ಮಾರನೇ ದಿನ ಅಂದರೆ ಸೆಪ್ಟೆಂಬರ್ 11 ರಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ದಾಖಲಿಸಿದ್ದರು ಜಯಶ್ರೀ.

ನಮ್ಮ ಮಾವ ಒಬ್ಬ ಹುಚ್ಚ ಎಂದಿದ್ದ ಜಯಶ್ರೀ
ಘಟನೆ ಬಗ್ಗೆ ಸೆಪ್ಟೆಂಬರ್ 11 ರಂದು ಫಿಲ್ಮೀಬೀಟ್ ಕನ್ನಡದೊಂದಿಗೆ ಮಾತನಾಡಿದ್ದ ಜಯಶ್ರೀ, 'ನಮ್ಮ ಮಾವ ಒಬ್ಬ ಹುಚ್ಚನಾಗಿದ್ದಾನೆ. ಆಸ್ತಿಗಾಗಿ ನಮಗೆ ಹಿಂಸೆ ನೀಡುತ್ತಿದ್ದಾನೆ. ನಮ್ಮನ್ನು ಹೊಡೆಯುತ್ತಾನೆ. ನಿನ್ನೆ ಮನೆಯಿಂದ ಹೊರ ಹಾಕಿದ, ನಾವು ಈಗ ಹಳೆ ಮನೆಗೆ ಬಂದಿದ್ದೇವೆ. ನಮ್ಮ ತಾತ ಅಜ್ಜಿಯನ್ನೂ ಸರಿಯಾಗಿ ನೋಡಿಕೊಳ್ಳುವುದಿಲ್ಲ' ಎಂದು ಹೇಳಿದ್ದರು.

ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ
ಪ್ರಸ್ತುತ ಲಭ್ಯವಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಯಶ್ರೀ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಖಿನ್ನತೆಗೆ ಚಿಕಿತ್ಸೆಗೆಂದೇ ಅವರು ಕಳೆದ ಒಂದು ತಿಂಗಳಿಂದಲೂ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿದ್ದರು. ಆದರೆ ಚಿಕಿತ್ಸೆ ಅವರ ಖಿನ್ನತೆ ಮೇಲೆ ಪರಿಣಾಮ ಬೀರಲಿಲ್ಲ ಎನ್ನಲಾಗಿದೆ.