»   » ಎಂಟನೇ ಅದ್ಭುತ: 'ಕರಾಳ ರಾತ್ರಿ'ಗಾಗಿ ದಯಾಳ್ ಜೊತೆ ಒಂದಾದ ಜಯಶ್ರೀನಿವಾಸನ್!

ಎಂಟನೇ ಅದ್ಭುತ: 'ಕರಾಳ ರಾತ್ರಿ'ಗಾಗಿ ದಯಾಳ್ ಜೊತೆ ಒಂದಾದ ಜಯಶ್ರೀನಿವಾಸನ್!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ನೋಡಿದವರಿಗೆ, ಗಾರ್ಡನ್ ಏರಿಯಾ ಮತ್ತು ಲಿವಿಂಗ್ ಏರಿಯಾ ಗುಂಪುಗಾರಿಕೆ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಗಾರ್ಡನ್ ಏರಿಯಾ ಗುಂಪಿನಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗುರುತಿಸಿಕೊಂಡಿದ್ರೆ, ಲಿವಿಂಗ್ ಏರಿಯಾ ಗುಂಪಿನಲ್ಲಿ ದಯಾಳ್ ಪದ್ಮನಾಭನ್ ಗುರುತಿಸಿಕೊಂಡಿದ್ದರು. ಇಬ್ಬರ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ಆತ್ಮೀಯ ಒಡನಾಟ ಇರಲಿಲ್ಲ.

ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಮಧ್ಯೆ ಅಷ್ಟಕಷ್ಟೆ ಎಂದು ಭಾವಿಸಿದ್ದವರು ಸ್ವಲ್ಪ ಈ ಹೊಸ ಫೋಟೋ ನೋಡ್ಕೊಂಡ್ ಬನ್ನಿ.

'ಬಿಗ್ ಬಾಸ್' ಮನೆಯಲ್ಲಿ ಆಗಿದ್ದೆಲ್ಲವನ್ನು ಬಿಟ್ಟು ದಯಾಳ್ ಹಾಗೂ ಜಯಶ್ರೀನಿವಾಸನ್ ಈಗ ಸ್ನೇಹಿತರಾಗಿದ್ದಾರೆ. ದಯಾಳ್ ನಿರ್ದೇಶನದ 'ಕರಾಳ ರಾತ್ರಿ' ಚಿತ್ರಕ್ಕಾಗಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಬಣ್ಣ ಹಚ್ಚಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ....

'ಕರಾಳ ರಾತ್ರಿ'ಯಲ್ಲಿ ಜಯಶ್ರೀನಿವಾಸನ್

ದಯಾಳ್ ನಿರ್ದೇಶನದ 'ಕರಾಳ ರಾತ್ರಿ' ಚಿತ್ರದಲ್ಲಿ ಜಯಶ್ರೀನಿವಾಸನ್ ಮಿಂಚಲಿದ್ದಾರೆ. ದುರಾಸೆ ಇರುವ ಲೇವಾದೇವಿಗಾರನ ಪಾತ್ರದಲ್ಲಿ ಜಯಶ್ರೀನಿವಾಸನ್ ಅಭಿನಯಿಸುತ್ತಿದ್ದಾರೆ.

ಜೆಕೆ ಮತ್ತು ಅನುಪಮಾ ಅವರ 'ಕರಾಳ ರಾತ್ರಿ'ಗೆ ದಯಾಳ್ ಸಾಕ್ಷಿ!

ರೆಟ್ರೋ ಲುಕ್ ನಲ್ಲಿ ಜೆಕೆ

ಇನ್ನೂ 'ಕರಾಳ ರಾತ್ರಿ' ಚಿತ್ರಕ್ಕೆ ಜಯರಾಂ ಕಾರ್ತಿಕ್ ಹೀರೋ. ಪಕ್ಕಾ ರೆಟ್ರೋ ಸ್ಟೈಲ್ ನಲ್ಲಿ ಜಯರಾಂ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

ಆ ಕರಾಳ ರಾತ್ರಿಗಾಗಿ ಬದಲಾದ ಜೆಕೆ-ಅನುಪಮ

ಹಳ್ಳಿ ಹುಡುಗಿಯಾಗಿ ಅನುಪಮಾ ಗೌಡ

'ಅಕ್ಕ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ಅನುಪಮಾ ಗೌಡ 'ಕರಾಳ ರಾತ್ರಿ' ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

ನಾಟಕ ಈಗ ಸಿನಿಮಾ

ಸಾಹಿತಿ ಮೋಹನ್ ಹಬ್ಬು ಅವರ 'ಕರಾಳ ರಾತ್ರಿ' ನಾಟಕವನ್ನ ದಯಾಳ್ ಸಿನಿಮಾ ಮಾಡ್ತಿದ್ದಾರೆ. 'ಕರಾಳ ರಾತ್ರಿ' ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿ ಇದೆ.

English summary
Numerologist Jayasreenivasan to play special role in Dayal Padmanabhan directorial 'Karala Ratri'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada