»   » ಜಗತ್ತಿನ ಯಾವುದೇ ಸಿನಿಮಾದಲ್ಲಿ ಇರದ ಈ ಅಂಶ 'ವೆನಿಲ್ಲಾ'ದಲ್ಲಿದೆ

ಜಗತ್ತಿನ ಯಾವುದೇ ಸಿನಿಮಾದಲ್ಲಿ ಇರದ ಈ ಅಂಶ 'ವೆನಿಲ್ಲಾ'ದಲ್ಲಿದೆ

Posted By:
Subscribe to Filmibeat Kannada

ಪ್ರತಿ ಸಿನಿಮಾದಲ್ಲಿಯೂ ಒಂದು ಹೊಸತನ ಇರಬೇಕು. ಆಗಲೇ ಆ ಸಿನಿಮಾಗೆ ಒಂದು ಬೆಲೆ ಇರುತ್ತದೆ. ಸದ್ಯ 'ವೆನಿಲ್ಲಾ' ಸಿನಿಮಾದಲ್ಲಿ ಆ ರೀತಿಯ ಒಂದು ಅಂಶ ಇದೆ. ವಿಶೇಷ ಅಂದರೆ ಇದುವರೆಗೆ ಜಗತ್ತಿನ ಯಾವುದೇ ಸಿನಿಮಾದ ಕಥೆ ಕೂಡ ಈ ಒಂದು ವಿಷಯದ ಮೇಲೆ ಹೆಣೆದಿಲ್ಲ.

'Capnophobia' ಎಂಬ ಒಂದು ಕಾಯಿಲೆ 'ವೆನಿಲ್ಲಾ' ಸಿನಿಮಾದ ಒಂದು ಭಾಗ ಆಗಿದೆ. ಈ ಚಿತ್ರದ ಕಥಾನಾಯಕಿಗೆ ಈ ಕಾಯಿಲೆ ಇರುತ್ತದೆ. 'Capnophobia' ಇರುವವರು ಹೊಗೆಯನ್ನು ನೋಡಿದರೆ ಭಯ ಪಡುತ್ತಾರೆ. ಇದೊಂದು ವಿಚಿತ್ರ ಕಾಯಿಲೆ ಆಗಿದ್ದು, ವಾಹನದ ಹೊಗೆ ಅರ್ಪೂರದ ಹೊಗೆ ಹೀಗೆ ಯಾವುದೇ ಹೊಗೆ ಕಂಡರು ಕಾಯಿಲೆ ಇರುವವರು ಭಯ ಪಡುತ್ತಾರೆ.

'ವೆನಿಲ್ಲಾ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದಲ್ಲಿ ಕಥೆಯೇ ಪ್ರಧಾನವಾಗಿದ್ದು, ಹೊಸ ರೀತಿಯ ನಿರೂಪಣೆಯನ್ನು ನಿರ್ದೇಶಕ ಜಯತೀರ್ಥ ಪ್ರಯತ್ನ ಮಾಡಿದ್ದಾರೆ. ಈ ಕಥೆಯಲ್ಲಿ ಸಮಾಜದ ಕಳಕಳಿ ಸಹ ಇದ್ದು, ಸಿನಿಮಾದಲ್ಲಿ ಧ್ವನಿಸುವ ವಿಚಾರ ಹೊಸತಾಗಿರಲಿದೆಯಂತೆ.

Jayatheerthas Vanilla kannada movie will releasing on june 1st

ಅವಿನಾಶ್ ಹಾಗೂ ಸ್ವಾತಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಸ್ಯ, ಪ್ರೇಮಾ, ಫೈಟ್, ಎಮೋಷನ್ಸ್, ಥ್ರಿಲ್ಲರ್ ಈ ಅಂಶಗಳ ಮಿಶ್ರಣದಿಂದ 'ವೆನಿಲ್ಲಾ' ತಯಾರಾಗಿದೆ. ಚಿತ್ರದ ಚಿತ್ರೀಕರಣವನ್ನು ಉಡುಪಿ, ಮೈಸೂರು ಮತ್ತು ಮಲೇಶಿಯಾದಲ್ಲಿ ಮಾಡಲಾಗಿದೆ. ಅಂದಹಾಗೆ, ಈ ಸಿನಿಮಾದ ಬಹುಪಾಲು ಪಾತ್ರಗಳಲ್ಲಿ ರಂಗಭೂಮಿ ಕಲಾವಿದರೇ ಅಭಿನಯಿಸಿರುವುದು ಚಿತ್ರದ ಮತ್ತೊಂದು ವಿಶೇಷ ವಾಗಿದೆ. 'ವೆನಿಲ್ಲಾ' ಸಿನಿಮಾ ಜೂನ್ 1 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

English summary
'Beautiful Manasugalu' movie fame director Jayatheertha's 'Vanilla' kannada movie will releasing on june1st.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X