twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಪತ್ರೆಗೆ ಆಗಮಿಸಿದ 'ಜೀವ ಸಾರ್ಥಕತೆ' ತಂಡ; ಅಂಗಾಂಗ ದಾನಕ್ಕೆ ವಿಜಯ್ ಪರೀಕ್ಷೆ

    |

    ಬೆಂಗಳೂರಿನ ಅಪೊಲೋ ಆಸ್ಪತ್ರೆಯ ಐಸಿಯುನಲ್ಲಿರುವ ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನ ಮಾಡಲು ಕುಟುಂಬ ನಿರ್ಧರಿಸಿದೆ. ವಿಜಯ್ ಅವರ ಬ್ರೈನ್ ಡೆಡ್ ಆಗಿದ್ದು ಬದುವ ಸಾಧ್ಯತೆ ತೀರ ಕಡಿಮೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

    ಅಂಗಾಂಗ ದಾನ ಮಾಡುತ್ತಿರುವ ಹಿನ್ನಲೆ ಆಸ್ಪತ್ರೆಗೆ ಜೀವ ಸಾರ್ಥಕತೆ ತಂಡ ಭೇಟಿ ನೀಡಿದೆ. ಆರೋಗ್ಯ ಇಲಾಖೆ ಅಡಿಯಲ್ಲಿ ‌ಬರುವ ಜೀವ ಸಾರ್ಥಕತೆ ತಂಡ ಎರಡನೇ ಬಾರಿ ಬ್ರೈನ್ ಡೆಡ್ ಡಿಕ್ಲರೇಷನ್ ಮಾಡುತ್ತಿದೆ. 7 ಗಂಟೆ ಬಳಿಕ ಬ್ರೈನ್ ಡೆಡ್ ಡಿಕ್ಲರೇಷನ್ ಮಾಡಲಾಗುತ್ತೆ.

    ಹೇಗೆ ನಡೆಯುತ್ತೆ ಪ್ರಕ್ರಿಯೆ?

    ಇವತ್ತು ಮಧ್ಯಾಹ್ನ ‌12 ಗಂಟೆಗೆ ಒಮ್ಮೆ ಅಪ್ನಿಯಾ ಟೆಸ್ಟ್ ಮಾಡಲಾಗಿದೆ. ಸಂಜೆ 7 ಗಂಟೆ ಬಳಿಕ 2ನೇ ಅಪ್ನಿಯಾ ಟೆಸ್ಟ್ ‌ಮಾಡಲಾಗತ್ತೆ. ಒಂದು ಅಪ್ನಿಯಾ ಟೆಸ್ಟ್‌ಗೂ ಎರಡನೇ ಟೆಸ್ಟ್‌ಗೂ 6 ಗಂಟೆಗಳ ಅಂತರ ಇರುತ್ತದೆ ಅಪ್ನಿಯಾ ಟೆಸ್ಟ್‌ನಲ್ಲಿ ಮೆದುಳು ಕೆಲಸ ಮಾಡ್ತಿದೆಯಾ ಇಲ್ವಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತೆ.

    Jeevasarthakathe Team visit to Hospital for Sanchari Vijays Organ donates

    ಕಣ್ಣಿನ ಮೇಲೆ ಹತ್ತಿ ಇಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು, ಹೀಗೆ 10 ಟೆಸ್ಟ್‌ಗಳನ್ನು ಮಾಡಲಾಗುತ್ತೆ ಈ ಟೆಸ್ಟ್ ಗಳಲ್ಲಿ ಮೆದುಳು ಸ್ಪಂದಿಸದೆ ಇದ್ದರೆ ಬ್ರೈನ್ ಡೆಡ್ ಘೋಷಣೆ ಮಾಡಲಾಗತ್ತೆ. ಬಳಿಕ ವೈದ್ಯರಿಂದ Form 10 ಗೆ ಸಹಿ‌ಪಡೆಯಲಿರುವ ಜೀವ ಸಾರ್ಥಕತೆ ತಂಡ ಇದಾದ ನಂತರ ಅಂಗಾಂಗ ದಾನಕ್ಕೆ ಒಪ್ಪಿಗೆ ಪತ್ರಕ್ಕೆ ಕುಟುಂಬದವರ ಸಹಿ ಪಡೆಯಲಾಗತ್ತೆ.

    ನಂತರ ಆಪರೇಷನ್ ಥಿಯೇಟರ್‌ನಲ್ಲಿ ಅಂಗಾಂಗ ‌ತೆಗೆಯುವ ಪ್ರಕ್ರಿಯೆ ನಡೆಯಲಿದೆ ಬ್ರೈನ್ ಡೆಡ್ ಆದ ವ್ಯಕ್ತಿ ಇಂದ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು, ಪ್ಯಾಂಕ್ರಿಯಾಸ್ ತೆಗೆಯಬಹುದು.

    Recommended Video

    ಅಂಗಾಂಗ ದಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ! | Oneindia Kannada

    ಜೀವ ಸಾರ್ಥಕತೆಯ ಮತ್ತೊಂದು ತಂಡ ಅಂಗಾಂಗ ಪಡೆಯಲು ಬಯಸುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಯಾರಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿರುತ್ತದೆ. ಅಂಗಾಂಗ ‌ತೆಗೆದ ಬಳಿಕ ಅದರಲ್ಲಿನ ಬ್ಲಡ್ ಸೆಲ್‌ಗಳನ್ನು ತೆಗೆದು ಲಿಕ್ವಿಡ್ ಹಾಕಿ ಐಸ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗತ್ತೆ. ಕಿಡ್ನಿಯನ್ನು ಜಯನಗರ TTK ಬ್ಲಡ್ ಬ್ಯಾಂಕ್‌ಗೆ ಕಳಿಸಿಕೊಡಲಾಗುತ್ತೆ. ಅಲ್ಲಿ DNA ಮ್ಯಾಚ್ ಆಗುವ ರೋಗಿಗಳನ್ನು ಪತ್ತೆ ಮಾಡಿ ನಂತರ ಕಿಡ್ನಿ ಕಸಿಗೆ ಕಳಿಸಿಕೊಡಲಾಗುತ್ತೆ. ಇಂದು ರಾತ್ರಿ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿವೆ ಎಂದು ಮಾಹಿತಿ ಲಭ್ಯವಾಗಿದೆ.

    English summary
    Jeevasarthakathe Team visit to Hospital for Sanchari Vijay's Organ donates.
    Monday, June 14, 2021, 19:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X