For Quick Alerts
  ALLOW NOTIFICATIONS  
  For Daily Alerts

  ತಮ್ಮ ಮೇಲಿನ ಆರೋಪದ ಬಗ್ಗೆ ನಟ ರಾಜಶೇಖರ್ ಪತ್ನಿ ಜೀವಿತಾ ಸ್ಪಷ್ಟನೆ

  By Bharath Kumar
  |

  ತೆಲುಗಿನ ಖ್ಯಾತ ನಟ ರಾಜಶೇಖರ್ ಹಾಗೂ ಅವರ ಪತ್ನಿ ಜೀವಿತಾ ರಾಜಶೇಖರ್ ಅವರ ಬಗ್ಗೆ ಮಹಿಳಾ ಕಾರ್ಯಕರ್ತೆ ಸಂಧ್ಯಾ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಜೀವಿತಾ ರಾಜಶೇಖರ್, ''ಸಂಧ್ಯಾ ಅವರ ಆರೋಪದಲ್ಲಿ ಸತ್ಯವಿಲ್ಲ, ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ'' ಎಂದು ತಿರುಗೇಟು ನೀಡಿದ್ದಾರೆ.

  ತೆಲುಗು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಸಂಧ್ಯಾ ಅವರು ನಟ ರಾಜಶೇಖರ್ ಮತ್ತು ಜೀವಿತಾ ಯುವತಿಯರಿಗೆ ತೊಂದರೆ ನೀಡಿದ್ದಾರೆ. ಜೀವಿತಾ ಅವರು ತಮ್ಮ ಗಂಡನಿಗೆ ಹುಡುಗಿಯರನ್ನ ಸಪ್ಲೈ ಮಾಡ್ತಾರೆ ಎಂಬ ಸ್ಫೋಟಕ ಆರೋಪ ಮಾಡಿದ್ದರು.

  ತೆಲುಗು ಸ್ಟಾರ್ ನಟನ ಪತ್ನಿ ವಿರುದ್ಧ ಇಂತಹ ಆರೋಪ.! ಇದು ನಿಜನಾ.?ತೆಲುಗು ಸ್ಟಾರ್ ನಟನ ಪತ್ನಿ ವಿರುದ್ಧ ಇಂತಹ ಆರೋಪ.! ಇದು ನಿಜನಾ.?

  ಈ ಆರೋಪದ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಜೀವಿತಾ ರಾಜಶೇಖರ್ ''ಮಹಿಳೆಯರನ್ನ ರಕ್ಷಿಸಲು ಇರುವಂತಹ ಕಾರ್ಯಕರ್ತೆಯೊಬ್ಬರು ಮತ್ತೊಬ್ಬ ಮಹಿಳೆಯಾದ ನನ್ನ ಮೇಲೆ ಇಂತಹ ಆರೋಪ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ. ನನ್ನ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸಬೇಕು. ಇದು ಯಾವುದೇ ಆಧಾರವಿಲ್ಲದ ಆರೋಪ. ಈ ಬಗ್ಗೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ'' ಎಂದಿದ್ದಾರೆ.

  ಇನ್ನು ಮಾಧ್ಯಮದವರ ಜೊತೆ ಮಾತನಾಡುತ್ತಾ ''ನನ್ನನ್ನು ಮನೆ ಮಗಳಂತೆ ಆಂಧ್ರ ಪ್ರದೇಶದ ಜನ ನೋಡುತ್ತಿದ್ದಾರೆ. 25 ವರ್ಷದಿಂದ 60 ವರ್ಷದವರೆಗೂ ಎಲ್ಲರೂ ನನ್ನನ್ನು ಇಷ್ಟ ಪಡ್ತಾರೆ. ಅವರ ಮನೆಗೆ ಹೋದಾಗ ಅಷ್ಟೇ ಚೆನ್ನಾಗಿ ನನ್ನನ್ನು ನೋಡಿಕೊಳ್ಳುತ್ತಾರೆ. ಸೆಲೆಬ್ರಿಟಿ ಅಂದಾಕ್ಷಣ ಅವರ ಬಗ್ಗೆ ಏನೇ ಹೇಳಿದ್ರು ಅದು ಸುದ್ದಿಯಾಗಿಬಿಡುತ್ತೆ. ಸುದ್ದಿ ವಾಹಿನಿಗಳು ಕೂಡ ಅವರ ಹೇಳಿಕೆಗೆ ಭಿನ್ನ-ವಿಭಿನ್ನವಾದ ಹೆಡ್ ಲೈನ್ ಇಟ್ಟು ಕಾರ್ಯಕ್ರಮ ಮಾಡಿವೆ. ಇದು ಉತ್ತಮ ಬೆಳವಣಿಗೆ ಅಲ್ಲ'' ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿ

  ಇನ್ನು ಶ್ರೀರೆಡ್ಡಿ ಬಗ್ಗೆ ಮಾತನಾಡಿದ ಜೀವಿತಾ ''ಅವರ ಬಗ್ಗೆ ನನಗೇನೂ ಮಾತನಾಡಲು ಇಲ್ಲ. ಆದ್ರೆ, ಅವಕಾಶ ಬೇಕು ಅಂದ್ರೆ ಕಾಂಪ್ರುಮೈಸ್ ಆಗ್ಬೇಕು ಎನ್ನುವುದು ತಪ್ಪು, ಅದು ನಾನು ಎಲ್ಲಿಯೂ ನೋಡಿಲ್ಲ. ನಾನು ಕೂಡ ನಟಿ, ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದೇನೆ'' ಎಂದರು.

  English summary
  Jeevitha Rajasekhar responded on Pow Sandhya and They condemn the Sandhya allegations made on Them. Jeevitha Rajasekhar said that.. allegations made on us are baseless. We will take it seriously.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X