For Quick Alerts
  ALLOW NOTIFICATIONS  
  For Daily Alerts

  'ಕರಿಯ' ಖ್ಯಾತಿಯ ಪ್ರೇಮ್ ಹೊಸ ಚಿತ್ರ ಬೈರೇಗೌಡ

  By Rajendra
  |

  'ಪ್ರೇಮ್ ಅಡ್ಡ' ಚಿತ್ರದ ಬಳಿಕ ನಟ ಕಮ್ ನಿರ್ದೇಶಕ ಪ್ರೇಮ್ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಅವರ ಧರ್ಮಪತ್ನಿ ರಕ್ಷಿತಾ ಪ್ರೇಮ್. ಪ್ರೇಮ್ ಪಿಕ್ಚರ್ಸ್ ಲಾಂಛನದಲ್ಲಿ ಬರುತ್ತಿರುವ ಈ ಚಿತ್ರಕ್ಕೆ 'ಬೈರೇಗೌಡ' ಎಂದು ಹೆಸರಿಡಲಾಗಿದೆ.

  ನಾಯಕಿ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಡಗರದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಅಚರಿಸಿಕೊಂಡು ಹಬ್ಬದ ದಿನವೇ ಪೂಜೆಯ ಜೊತೆಗೆ ಚಿತ್ರ ನಿರ್ಮಾಣದ ಸಂಕಲ್ಪವನ್ನು ಮಾಡಿದ್ದಾರೆ.

  ಬಹುಶಃ ಪ್ರೇಮ್ ಮೇಲೆ ನಂಬಿಕೆ ಇಲ್ಲವೋ ಅಥವಾ ಅತ್ತ ನಟನೆ ಇತ್ತ ನಿರ್ದೇಶನ ಎರಡು ನಿಭಾಯಿಸುವುದು ಕಷ್ಟ ಎಂತಲೋ ಏನೋ ಈ ಬಾರಿಯೂ ಆಕ್ಷನ್ ಕಟ್ ಜವಾಬ್ದಾರಿಯನ್ನು 'ಪ್ರೇಮ್ ಅಡ್ಡ' ನಿರ್ದೇಶಿಸಿದ್ದ ಮಹೇಶ್ ಬಾಬು ಅವರಿಗೆ ನೀಡಲಾಗಿದೆ.

  ಮುಂದಿನ ತಿಂಗಳು ಹಾಡುಗಳ ರಾಗ ಸಂಯೋಜನೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಕ್ಟೋಬರ್ ತಿಂಗಳಿನಲ್ಲಿ 'ಗೌಡರಾಗಿ' ನಿರ್ದೇಶಕ ಹಾಗೂ ನಟ ಪ್ರೇಮ್ ಕ್ಯಾಮರಾ ಮುಂದೆ ಬರಲಿದ್ದಾರೆ.

  ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಲಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ, ಆನಂದ್, ಶ್ರೀನಿವಾಸ್ ಪಿ ಬಾಬು ಹಾಗೂ ಬಾಬು ಅವರ ತಂಡ ರಚನೆ ಆಗಿದೆ. ಇದೊಂದು ಪಕ್ಕಾ ಮಾಸ್ ಚಿತ್ರ ಅಲ್ಲದೆ ಇಂಪಾದ ಹಾಡುಗಳ ಮಿಶ್ರಣ ಆಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. (ಒನ್ಇಂಡಿಯಾ ಕನ್ನಡ)

  English summary
  Jogayya Prem's next film titled as Byre Gowda. After 'Prem Adda' he acting in a lead role. The film is being produced by Rakshita Prem under the Prem Pictures banner. The film directed by Mahesh Babu and Arjun Janya will compose music for it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X