Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಲ್ಕಿ' ಚಿತ್ರಕ್ಕೆ ಪ್ರೇಮ್ ನಾಯಕ: ತಮಿಳಿನ ಸ್ಟಾರ್ ನಟ ಎಂಟ್ರಿ!
ಎಲ್ಲ ಅಂದುಕೊಂಡಂತೆ ಆಗಿದ್ದರೆ ಜೋಗಿ ಪ್ರೇಮ್ 'ಕಲಿ' ಎಂಬ ಸಿನಿಮಾ ಮಾಡಬೇಕಿತ್ತು. ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಆದರೆ, ಆ ಸಿನಿಮಾ ಶುರುವಾಗಿಲ್ಲ. ಅದರ ಬದಲಾಗಿ 'ದಿ ವಿಲನ್' ಸಿನಿಮಾ ಬಂತು. ಆಮೇಲೆ ಕಲಿ ಪ್ರಾಜೆಕ್ಟ್ ಮೂಲೆ ಸೇರಿದೆ.
ಈ ನಡುವೆ ಜೋಗಿ ಪ್ರೇಮ್ 'ಕಲ್ಕಿ' ಎಂಬ ಚಿತ್ರಕ್ಕೆ ನಾಯಕ ಎಂಬ ಸುದ್ದಿ ಹೊರಬಿತ್ತು. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಈ ಚಿತ್ರ ನಿರ್ದೇಶಿಸಲಿದ್ದು, ಪ್ರೇಮ್ ನಾಯಕ ಎಂದು ಹೇಳಲಾಯಿತು. ಆಮೇಲೆ ಲಾಕ್‌ಡೌನ್ ಆಗಿದ್ದು ಎಲ್ಲವೂ ಸೈಲೆಂಟ್ ಆಗಿತ್ತು. ಇದೀಗ, 'ಐ ಯಾಮ್ ಕಲ್ಕಿ' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಮುಂದೆ ಓದಿ...

'ಐ ಯಾಮ್ ಕಲ್ಕಿ'ಯಲ್ಲಿ ಪ್ರೇಮ್
'ಐ ಯಾಮ್ ಕಲ್ಕಿ' ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ. ಈ ಪ್ರಾಜೆಕ್ಟ್ ಕುರಿತಂತೆ ಈಗಾಗಲೇ ಇಬ್ಬರು ಭೇಟಿ ಮಾಡಿದ್ದು, ಪೂರ್ವ ತಯಾರಿ ನಡೆಸಿದ್ದಾರೆ. ಪ್ರೇಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಸಹ ಬಿಡುಗಡೆಯಾಗಿದೆ.
'ಕಲಿ'
ಹೋಯ್ತು
'ಕಲ್ಕಿ'
ಬಂತು:
ಶಿವಣ್ಣ..
ಸುದೀಪ್
ಅಲ್ಲ
ಪ್ರೇಮ್
ಹೀರೋ

ತಮಿಳಿನ ಸ್ಟಾರ್ ನಟ
'ಐ ಯಾಮ್ ಕಲ್ಕಿ' ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. 'ಆನೆ ಪಟಾಕಿ' ಚಿತ್ರ ಮಾಡಿದ್ದ ಸುರೇಶ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ತಮಿಳಿನ ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ಇರಲಿದ್ದಾರೆ ಎಂದು ಸುಳಿವು ಸಿಕ್ಕಿದೆ. ಆದರೆ, ಯಾರು ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.

ನವೆಂಬರ್ 1ಕ್ಕೆ ಹೆಚ್ಚಿನ ಮಾಹಿತಿ
ಸದ್ಯ ಪ್ರೇಮ್ ಅವರು ತಾವೇ ನಿರ್ದೇಶನ ಮಾಡುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಊಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಕಡೆ ಐ ಯಾಮ್ ಕಲ್ಕಿ ಸಿನಿಮಾ ನವೆಂಬರ್ ತಿಂಗಳಿನಲ್ಲಿ ಶುರುವಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ನವೆಂಬರ್ 1ಕ್ಕೆ ಹೆಚ್ಚಿನ ಮಾಹಿತಿ ಸಿಗಬಹುದು.
Big
News:
ಅಭಿನಯ
ಚಕ್ರವರ್ತಿ
ಜೊತೆ
ಹೊಸ
ಸಿನಿಮಾ
ಘೋಷಿಸಿದ
ಜೋಗಿ
ಪ್ರೇಮ್
Recommended Video

ಎಂ.ಎಸ್.ಆರ್ ಪ್ರೊಡಕ್ಷನ್ ಚಿತ್ರ
ಎಂ.ಎಸ್.ಆರ್ ಪ್ರೊಡಕ್ಷನ್‌ನಲ್ಲಿ ಮೂಡಿಬರಲಿರುವ ಇನ್ನು ಹೆಸರಿಡದ ಚಿತ್ರಕ್ಕೆ ಜೋಗಿ ಪ್ರೇಮ್ ನಾಯಕನಾಗಿದ್ದಾರೆ. ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿದೆ. ಅಕ್ಷಯ್ ಸಮರ್ಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಹೆಚ್ ವಿಜಯ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಮಾತ್ರ ಅನೌನ್ಸ್ ಮಾಡಿದ್ದು, ಹೆಚ್ಚಿನ ಮಾಹಿತಿ ಇಲ್ಲ.