twitter
    For Quick Alerts
    ALLOW NOTIFICATIONS  
    For Daily Alerts

    ಫಿಲ್ಮ್ ಚೇಂಬರ್‌ನಲ್ಲಿ ಮಲ್ಟಿಪ್ಲೆಕ್ಸ್ ವಿರುದ್ಧ ಕಿಡಿಕಾರಿದ ಜೋಗಿ ಪ್ರೇಮ್: ಯಾಕೀ ಕೋಪ?​

    |

    ಕರ್ನಾಟಕದಲ್ಲೇ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗುತ್ತಿದೆ ಅನ್ನುವುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಮಾತು. ಸಿಂಗಲ್ ಸ್ಕ್ರೀನ್ ಇರಲಿ. ಮಲ್ಟಿಪ್ಲೆಕ್ಸ್ ಇರಲಿ ಪರಭಾಷೆ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುತ್ತವೆ ಎನ್ನುವುದು ದೂರು ಕೇಳಿಬರುತ್ತಿದೆ. ಸ್ಯಾಂಡಲ್‌ವುಡ್ ಮಂದಿ ಇಂತಹ ತಾರತಮ್ಯದ ವಿರುದ್ಧ ಸಿಡಿದೇಳುತ್ತಲೇ ಇದ್ದಾರೆ. ಈಗ ಸಿನಿಮಾ ಬಿಡುಗಡೆಗೆ ಎರಡು ವಾರವಿದೆ ಅನ್ನುವಾಗಲೇ ಜೋಗಿ ಪ್ರೇಮ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.

    ಇಲ್ಲಿವರೆಗೂ ಕನ್ನಡ ಸಿನಿಮಾಗಳಿಗೆ ಥಿಯೇಟರ್‌ ಸಮಸ್ಯೆ ಆಗಿದೆ. ನಮ್ಮ ಸಿನಿಮಾಗೆ ಚಿತ್ರಮಂದಿರವಿಲ್ಲ. ಪರಭಾಷೆ ಚಿತ್ರಗಳಿಗಾಗಿ ನಮ್ಮ ಸಿನಿಮಾವನ್ನು ಥಿಯೇಟರ್‌ ಎತ್ತಂಗಡಿ ಮಾಡಿದರು. ಸಿನಿಮಾ ಪೈರಸಿ ಆಗುತ್ತಿದೆ. ಇಂತಹದ್ದೇ ಒಂದಿಷ್ಟು ವಿಷಯಗಳನ್ನು ಇಟ್ಟುಕೊಂಡು ಫಿಲ್ಮ್ ಚೇಂಬರ್ ಮೆಟ್ಟಿಲೇರುತ್ತಿದ್ದರು. ಆದ್ರೀಗ ನಿರ್ದೇಶಕ ಜೋಗಿ ಪ್ರೇಮ್ ಹೊಸ ಸಮಸ್ಯೆ ಇಟ್ಕೊಂಡು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.

    ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸೌಂಡ್ ಕೊಡಲ್ಲ

    ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸೌಂಡ್ ಕೊಡಲ್ಲ

    ಅಷ್ಟಕ್ಕೂ ಜೋಗಿ ಪ್ರೇಮ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿರುವುದಕ್ಕೆ ಕಾರಣ ಇದೆನೇ. ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚು ಸೌಂಡ್​ ಕೊಡುವುದಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ಇಂದು (ಫೆ 07) ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರು. ಅಧ್ಯಕ್ಷ ಜೈ ರಾಜ್‌ಗೆ ದೂರು ನೋಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಜೋಗಿ ಪ್ರೇಮ್ ಸಮಸ್ಯೆ ಏನು?

    ಜೋಗಿ ಪ್ರೇಮ್ ಸಮಸ್ಯೆ ಏನು?

    ಜೋಗಿ ಪ್ರೇಮ್ ಆರೋಪವೇನು ಅಂದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ತೆಲುಗು ತಮಿಳು ಇಂಗ್ಲೀಷ್ ಸಿನಿಮಾಗಳಿಗೆ 7 ಸೌಂಡ್ ಪಾಯಿಂಟ್ ಇರುತ್ತೆ. ಆದರೆ ಕನ್ನಡ ಸಿನಿಮಾಗೆ ಕೇವಲ 4 ಸೌಂಡ್ ಪಾಯಿಂಟ್ ಮಾತ್ರ ಇಡ್ತಾರೆ. ಹೀಗೆ ಸೌಂಡ್‌ನಲ್ಲಿ ವ್ಯತಾಸ ಮಾಡಿದೆ ಸಿನಿಮಾ ನೋಡಲು ಮಜಾ ಬರುವುದಿಲ್ಲ. ವಿಲನ್ ಸಮಯದಲ್ಲೂ ಹೀಗೆ ಆಗಿತ್ತು." ಎನ್ನುವುದು ನಿರ್ದೇಶಕ ಜೋಗಿ ಪ್ರೇಮ್ ಆರೋಪ. ಇದೇ ಫೆಬ್ರವರಿ 24ಕ್ಕೆ ರಿಲೀಸ್ ಆಗುತ್ತಿರುವ 'ಏಕ್ ಲವ್ ಯಾ' ಸಿನಿಮಾಗೂ ಇದೇ ಸಮಸ್ಯೆ ಆಗುತ್ತಿದೆ ಎಂದು ಪ್ರೇಮ್ ಆರೋಪಿಸಿದ್ದಾರೆ.

    ಸೌಂಡ್‌ಗೆ ಕೋಟಿ ಖರ್ಚು

    ಸೌಂಡ್‌ಗೆ ಕೋಟಿ ಖರ್ಚು

    ಜೋಗಿ ಪ್ರೇಮ್ ನಿರ್ದೇಶಕನದ ಸಿನಿಮಾ 'ಏಕ್‌ ಲವ್ ಯಾ' ಬಿಡುಗಡೆಗೆ ರೆಡಿಯಿದೆ. ಬಹಳ ದಿನಗಳ ಬಳಿಕ ಲವ್ ಸ್ಟೋರಿಗೆ ಕೈ ಹಾಕಿರುವ ಪ್ರೇಮ್ ಸಿನಿಮಾ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಹಾಡುಗಳು ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗಾಗಿ ಜೋಗಿ ಪ್ರೇಮ್ ಬರೋಬ್ಬರಿ ಒಂದೂವರೆ ಕೋಟಿಯಷ್ಟು ಹಣವನ್ನು ಖರ್ಚು ಮಾಡಿದ್ದಾರಂತೆ. ಇಷ್ಟೆಲ್ಲಾ ಖರ್ಚು ಮಾಡಿದ್ರೂ ಮಲ್ಟಿಪ್ಲೆಕ್ಸ್‌ನಲ್ಲಿ ಸೌಂಡ್ ಕೊಡುವುದಿಲ್ಲ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

    ಸಿನಿಮಾ ಅಪ್‌ಲೋಡ್ ಮಾಡಲು ಕಾಯಬೇಕು

    ಸಿನಿಮಾ ಅಪ್‌ಲೋಡ್ ಮಾಡಲು ಕಾಯಬೇಕು

    ಕನ್ನಡ ಸಿನಿಮಾ ಬಿಡುಗಡೆಗೂ ಮುನ್ನ UFO ಹಾಗೂ ಕ್ಯೂಬ್‌ಗಳಲ್ಲಿ ಸಿನಿಮಾವನ್ನು ಅಪ್‌ಲೋಡ ಮಾಡಬೇಕು. ಇವುಗಳ ಕಚೇರಿ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಸಿನಿಮಾ ಮಂದಿಗೆ ಮುಂಬೈ ಇಲ್ಲವೇ ಚೆನ್ನೈಗೆ ಹೋಗಬೇಕು. ಅಲ್ಲಿಗೆ ಹೋದರೆ ದಿನಗಟ್ಟಲೇ ಕಾಯಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ UFO ಹಾಗೂ ಕ್ಯೂಬ್‌ ಯಾಕಿಲ್ಲ? ಇಲ್ಲೂ ಕಚೇರಿಗಳನ್ನು ತೆರೆಯಬೇಕು ಎಂದು ಜೋಗಿ ಪ್ರೇಮ್ ಒತ್ತಾಯ ಮಾಡಿದ್ದಾರೆ. ಜೋಗಿ ಪ್ರೇಮ್​ ನಿರ್ದೇಶನದ 'ಏಕ್​ ಲವ್​ ಯಾ' ಸಿನಿಮಾ ಫೆಬ್ರವರಿ 24ಕ್ಕೆ ಬಿಡುಗಡೆಯಾಗಲಿದೆ. ರಾಣಾ ಹಾಗೂ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    English summary
    Jogi Prem demands Karnataka Film Chamber to solve multiplex 7 point sound issue for Ek Love Ya. He complained multiplex will give other language movies 7 sound effect but Kannada movie they give only 4 surround sound system.
    Monday, February 7, 2022, 20:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X