For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಭೇಟಿ ಮಾಡಿದ ಪ್ರೇಮ್: ಏನೋ ಸರ್ಪ್ರೈಸ್ ಇದೆ

  |

  ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿರುವ ಜೋಗಿ ಪ್ರೇಮ್ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ್ದಾರೆ. 'ಜೋಗಿ' ನಿರ್ದೇಶಕ ಪ್ರೇಮ್ ಮತ್ತು ಅಪ್ಪು ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಏನೋ ಸರ್ಪ್ರೈಸ್ ಇದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

  'ಏಕ್ ಲವ್ ಯಾ' ಚಿತ್ರದ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುವ ನಿರ್ದೇಶಕ ಪ್ರೇಮ್, ಇತ್ತೀಚಿಗಷ್ಟೆ ಧ್ರುವ ಸರ್ಜಾ ಜೊತೆ 9ನೇ ಸಿನಿಮಾ ಘೋಷಣೆ ಮಾಡಿದ್ದರು. ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಸುಪ್ರಿತ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಶೀಘ್ರದಲ್ಲೇ ಸಿನಿಮಾ ಹೆಸರು ಮತ್ತು ಕಲಾವಿದರ ಪರಿಚಯ ಮಾಡುವುದಾಗಿ ಮಾಹಿತಿ ಇದೆ.

  ಧ್ರುವ ಸರ್ಜಾಗೆ ಪ್ರೇಮ್ ಆ್ಯಕ್ಷನ್ ಕಟ್; ಹೊಸ ಸಿನಿಮಾ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪ್ರೇಮ್ ಆ್ಯಕ್ಷನ್ ಕಟ್; ಹೊಸ ಸಿನಿಮಾ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್

  'ದಿ ವಿಲನ್' ಸಿನಿಮಾ ನಂತರ ಪ್ರೇಮ್ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ 'ಎಕ್ ಲವ್ ಯಾ'. ರಕ್ಷಿತಾ ಪ್ರೇಮ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಕ್ಷಿತಾ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ. ರಾಣಾಗೆ ಇದು ಚೊಚ್ಚಲ ಸಿನಿಮಾ. ಇದಕ್ಕೂ ಮುಂಚೆ ದಿ ವಿಲನ್ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು.

  'ಏಕ್ ಲವ್ ಯಾ' ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇತ್ತೀಚಿಗಷ್ಟೆ ಚಿತ್ರದ ಕೊನೆಯ ದಿನ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡೆದ ಫೋಟೋಗಳು ವೈರಲ್ ಆಗಿದ್ದವು. ನಟಿ-ನಿರ್ಮಾಪಕಿ ರಕ್ಷಿತಾ, ನಿರ್ದೇಶಕ ಪ್ರೇಮ್, ನಾಯಕ ರಾಣಾ ಹಾಗೂ ಚಿತ್ರತಂಡ ಒಟ್ಟಾಗಿ ಫೋಟೋ ತೆಗೆಸಿಕೊಂಡು ಚಿತ್ರೀಕರಣಕ್ಕೆ ವಿದಾಯ ಹೇಳಿದ್ದರು. ಇನ್ನು 'ಏಕ್ ಲವ್ ಯಾ' ಸಿನಿಮಾದ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ಸಖತ್ ಹಿಟ್ ಬಾರಿಸಿದೆ. ಇದೀಗ, ರಿಲೀಸ್ ಸಜ್ಜಾಗಿರುವ ಚಿತ್ರತಂಡ ಟ್ರೈಲರ್ ಮತ್ತು ಅಧಿಕೃತವಾಗಿ ಹಾಡುಗಳನ್ನು ಬಿಡುಗಡೆ ಮಾಡಬೇಕಿದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಅಪ್ಪು ಕೈಯಿಂದ ಆಲ್ಬಮ್ ಅಥವಾ ಟ್ರೈಲರ್ ಲಾಂಚ್ ಮಾಡುವ ಯೋಜನೆ ಇರಬಹುದು ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.

  ಅದ್ಭುತವಾದ ಪಯಣ ಇದಾಗಿತ್ತು: ನಟಿ ರಕ್ಷಿತಾ ಭಾವುಕ ಪೋಸ್ಟ್ಅದ್ಭುತವಾದ ಪಯಣ ಇದಾಗಿತ್ತು: ನಟಿ ರಕ್ಷಿತಾ ಭಾವುಕ ಪೋಸ್ಟ್

  ಪ್ರೇಮ್ ಮತ್ತು ಪುನೀತ್ ರಾಜ್ ಕುಮಾರ್ ಭೇಟಿ ವೇಳೆ ನಟ ರಾಣಾ ಸಹ ಜೊತೆಯಲ್ಲಿದ್ದು, ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ಅಪ್ಪು ಸರ್ ನಿಮ್ಮ ಸರಳ ನಡೆ ನುಡಿ, ಸಿನಿಮಾ ಮೇಲಿನ ಶ್ರದ್ಧೆ ನಮ್ಮನ್ನ ಪ್ರೇರೇಪಿಸುತ್ತೆ. ನೀವು ನನಗೆ "ಸಾಂಗ್ಸ್ ತುಂಬಾ ಚೆನ್ನಾಗಿದೆ, ಸಖತ್ತಾಗ್ ಕಾಣ್ತಿದೀಯ, ಚೆನ್ನಾಗ್ ಡಾನ್ಸ್ ಮಾಡಿದೀಯ" ಅಂತ ಹೇಳಿದ್ದು ನಿಜಕ್ಕೂ ರೋಮಾಂಚನ ಆಯ್ತು, ಪ್ರೇಮ್ ಅಂಕಲ್ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ಮುಂದಿನ ಸಿನಿಮಾಗಳನ್ನ ಮಾಡ್ತೀನಿ'' ಎಂದು ಬರೆದುಕೊಂಡಿದ್ದಾರೆ.

  Jogi Prem Meet Puneeth Rajkumar Along With Rana

  'ಏಕ್ ಲವ್ ಯಾ' ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಕುರಿತು ಭಾವುಕರಾದ ರಕ್ಷಿತಾ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. "ಇವತ್ತು ಏಕ್ ಲವ್ ಯಾ ಸಿನಿಮಾದ ಕೊನೆಯ ದಿನದ ಚಿತ್ರೀಕರಣ. ಕೊನೆಯ ಚಿತ್ರೀಕರಣ ಮುತ್ತತ್ತಿಯಲ್ಲಿ ನಡೆಯಿತು. ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ತುಂಬಾ ಪಾಸಿಟಿವ್ ಆಗಿದೆ. ಈ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞ, ಕಲಾವಿದರು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಅದ್ಭುತವಾದ ಪಯಣವಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರು ಅದ್ಭುತವಾದ ಕೆಲಸ ಮಾಡುವ ಹುಡುಗರಿದ್ದಾರೆ. ನಾವು ಶೀಘ್ರದಲ್ಲೇ ಬಿಡುಗಡೆ ಮಾಡಲು ಕಾಯುತ್ತಿದ್ದೇವೆ. ನೀವೆಲ್ಲರೂ ಈ ಸಿನಿಮಾ ಇಷ್ಟ ಪಡುತ್ತೀರಿ ಎಂದು ಭಾವಿಸಿದ್ದೀವಿ. ಏಕ್ ಲವ್ ಯಾ ಚಿತ್ರೀಕರಣ ಮತ್ತು ರಚನೆಯನ್ನು ತುಂಬಾ ಎಂಜಾಯ್ ಮಾಡಿದ್ದೇವು. ಏಕ್ ಲವ್ ಯಾ ತಂಡಕ್ಕೆ ಲವ್ ಯೂ. ಈ ತಂಡ ಒಳ್ಳೆಯ ಸಿನಿಮಾಗಳನ್ನು ಮಾಡಲಿ" ಎಂದು ಬರೆದುಕೊಂಡಿದ್ದಾರೆ.

  ಇನ್ನು ರಾಣಾ ನಾಯಕನಾಗಿರುವ ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕಿಯಾಗಿ ರೇಷ್ಮಾ ನಾಣಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ರೇಷ್ಮಾಗೆ ಇದು ಮೊದಲ ಸಿನಿಮಾವಾಗಿದ್ದು, ಚೊಚ್ಚಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಾಣುವ ಉತ್ಸುಕದಲ್ಲಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದಾರೆ.

  English summary
  Director Jogi Prem Has meet Powerstar Puneeth rajkumar along with Ek love ya actor Rana

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X