For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿ ಅರೆಸ್ಟ್: 'ಗಾಂಧಿಗಿರಿ'ಗೆ ಹೆಚ್ಚಿದ ತಲೆನೋವು

  |

  ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಬಂಧನವಾಗಿದ್ದಾರೆ. ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಸಿಸಿಬಿ ಪೊಲೀಸರು ನಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Filmibeat Kannada

  ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ನಟಿ ಸಂಜನಾ ಸಹ ಅರೆಸ್ಟ್ ಆಗಿದ್ದಾರೆ. ಮತ್ತಷ್ಟು ವ್ಯಕ್ತಿಗಳಿಗೆ ಈ ಕೇಸ್‌ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ರಾಗಿಣಿ ಮತ್ತು ಸಂಜನಾ ಯಾವಾಗ ಹೊರಗೆ ಬರ್ತಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಉತ್ತರ ಇಲ್ಲ. ಆದ್ರೆ, ರಾಗಿಣಿ ಬಂಧನದಿಂದ 'ಗಾಂಧಿಗಿರಿ' ಚಿತ್ರತಂಡಕ್ಕೆ ಕಷ್ಟವಾಗಿದೆ. ಮುಂದೆ ಓದಿ...

  ಶೂಟಿಂಗ್ ಪ್ಲಾನ್ ಮಾಡಿದ್ದ ಗಾಂಧಿಗಿರಿ

  ಶೂಟಿಂಗ್ ಪ್ಲಾನ್ ಮಾಡಿದ್ದ ಗಾಂಧಿಗಿರಿ

  ಜೋಗಿ ಪ್ರೇಮ್ ನಾಯಕನಾಗಿ ನಟಿಸುತ್ತಿರುವ ಚಿತ್ರ 'ಗಾಂಧಿಗಿರಿ'. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಘು ಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಯ ಹಂತದ ಶೂಟಿಂಗ್ ಆರಂಭಿಸಲು ನಿರ್ಧರಿಸಿದ್ದರು. ಆದ್ರೀಗ, ಶೂಟಿಂಗ್‌ಗೂ ಕಂಟಕ ಎದುರಾಗಿದೆ.

  ಮತ್ತೆ 5 ದಿನ ಸಿಸಿಬಿ ಪೊಲೀಸರ ವಶಕ್ಕೆ ನಟಿ ರಾಗಿಣಿ

  ಐದು ವರ್ಷದ ಹಿಂದಿನ ಚಿತ್ರ

  ಐದು ವರ್ಷದ ಹಿಂದಿನ ಚಿತ್ರ

  2015ರಲ್ಲಿ ಸೆಟ್ಟೇರಿದ ಗಾಂಧಿಗಿರಿ ಚಿತ್ರ ಇನ್ನೂ ಮುಗಿದಿಲ್ಲ. ಹಲವು ತೊಡಕುಗಳನ್ನು ಭೇದಿಸಿ ಕೊನೆಯ ಹಂತಕ್ಕೆ ಬಂದಿದೆ. ಸೆಪ್ಟೆಂಬರ್ 14ರಿಂದ ಕೊನೆಯ ಹಂತದ ಚಿತ್ರೀಕರಣಕ್ಕೆ ಎಲ್ಲ ತಯಾರಿ ನಡೆದಿತ್ತು. ಈ ನಡುವೆ ನಟಿ ರಾಗಿಣಿ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇದು ಚಿತ್ರತಂಡಕ್ಕೆ ತಲೆ ನೋವು ಹೆಚ್ಚಿಸಿದೆ. ಹೀಗಾಗಿ, ಮತ್ತಷ್ಟು ದಿನ ಗಾಂಧಿಗಿರಿ ಚಿತ್ರೀಕರಣ ಮುಂದಕ್ಕೆ ಹೋಗಿದೆ.

  ಫಿಲಂ ಚೇಂಬರ್‌ಗೆ ಪತ್ರ

  ಫಿಲಂ ಚೇಂಬರ್‌ಗೆ ಪತ್ರ

  ರಾಗಿಣಿ ಬಂಧನದಿಂದ ಕಂಗಲಾಗಿರುವ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪತ್ರದ ಹಿನ್ನೆಲೆ ಉತ್ತರಿಸಿ ಫಿಲಂ ಚೇಂಬರ್ ಇನ್ನು ಸ್ವಲ್ಪ ಕಾಯುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

  ಡ್ರಗ್ಸ್ ಪ್ರಕರಣದಲ್ಲಿ ಬರಿ ಹೆಣ್ಮಕ್ಳ ಹೆಸರು ಮಾತ್ರ ಯಾಕೆ ಬರ್ತಿದೆ?

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿ-2

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿ-2

  ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಅವರನ್ನು ಆರೋಪಿ ನಂ 2 ಎಂದು ಹೇಳಲಾಗಿದೆ. ಸದ್ಯಕ್ಕೆ ಸಿಸಿಬಿ ಪೊಲೀಸರ ವಶದಲ್ಲಿರುವ ನಟಿಗೆ ಜಾಮೀನು ಸಿಗುತ್ತಾ ಅಥವಾ ಜೈಲಿಗೆ ಹೋಗಬೇಕಾಗುತ್ತದಾ ಎಂಬ ಚರ್ಚೆ ನಡೆಯುತ್ತಿದೆ. ಕೋರ್ಟ್‌ ಆದೇಶ ನಂತರ ಮುಂದಿನ ನಡೆ ನಿರ್ಧಾರವಾಗಲಿದ್ದು, ಆಮೇಲೆ ಚಿತ್ರತಂಡ ಯೋಚಿಸಬೇಕಾಗುತ್ತದೆ.

  English summary
  Kannada actor-director Jogi Prem's Gandhigiri movie postponed indefinitely because of Ragini arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X