Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾವಿನ ನೋವಿಗೆ ಧ್ವನಿಯಾದ 'ಜೋಗಿ ಪ್ರೇಮ್'
ಜೋಗಿ ಪ್ರೇಮ್ 'ಎಕ್ಸ್‌ಕ್ಯೂಸ್ ಮಿ', 'ಜೋಗಿ' ಚಿತ್ರಗಳಲ್ಲಿ ತಾಯಿಯ ನೋವಿನ ಸನ್ನಿವೇಶಗಳಿಗೆ ಜೀವ ಕೊಟ್ಟು ಖ್ಯಾತಿ ಗಳಿಸಿದ ನಿರ್ದೇಶಕ. ಆದರೆ ಇದೀಗ ವ್ಯಕ್ತಿಯೋಬ್ಬರ ಸಾವಿನ ನೋವಿಗೆ ಧ್ವನಿಯಾಗಿ ಮಾನವೀಯತೆ ಮೆರೆದಿದ್ದಾರೆ. ಹೌದು ಕನ್ನಡದ 'ಪರಸಂಗ' ಚಿತ್ರದ ಹಾಡೊಂದನ್ನು ಜೋಗಿ ಪ್ರೇಮ್ ಹಾಡಿದ್ದು ಈ ಹಾಡು ಸೂಪರ್ ಹಿಟ್ ಆಗಿದೆ.
ಆದ್ರೆ ಈ ಹಾಡು ಹುಟ್ಟಿದ ಸನ್ನಿವೇಶ ಮಾತ್ರ ಒಂದು ಸಾವಿನ ಹಿಂದಿನ ನೋವಿನ ಕ್ಷಣದಲ್ಲಿ ಅನ್ನೋದು ತುಂಬ ಜನರಿಗೆ ಗೊತ್ತಿಲ್ಲ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಎನ್.ಕೆ.ಲೋಲಾಕ್ಷಿ ಈ ಹಾಡನ್ನು ಬರೆದಿದ್ದಾರೆ.
ಹಿಸ್ಟರಿ
ಕ್ರಿಯೆಟ್
ಮಾಡಲು
ಸಜ್ಜಾಗಿದೆ
'ದಿ
ವಿಲನ್'
ಟೀಂ
2007ರಲ್ಲಿ ಲೋಲಾಕ್ಷಿಯವರ ಅಕ್ಕನ ಮಗಳಾದ ಭಾವನ, ಮನೆಯಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಸರ್ ಎಲೆಕ್ಟ್ರಿಕ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದರು. ಭಾವನರನ್ನ ತನ್ನ ಮಗಳಂತೆ ಹಚ್ಚಿಕೊಂಡಿದ್ದ ಲೋಲಾಕ್ಷಿಯವರು ಭಾವನ ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಪದೆ ಪದೆ ಕಾಡುತ್ತಿದ್ದ ಭಾವನರ ನೆನಪುಗಳು ಲೋಲಾಕ್ಷಿಯವರನ್ನ ಖಿನ್ನತೆಗೆ ಒಳಗಾಗುವಂತೆ ಮಾಡುತ್ತಿತ್ತು.ಈ ಸಂದರ್ಭದಲ್ಲಿ ಲೋಲಾಕ್ಷಿಯವರು ಭಾವನ ನೆನಪಿನಲ್ಲೆ ಪದ್ಯಗಳನ್ನ ಬರೆಯಲಾರಂಭಿಸದರು.
ಭಾವನ ವಿಧಿವಶರಾದ 5 ವರ್ಷಗಳ ನಂತರ ಹಲವು ಪದ್ಯಗಳನ್ನ ಬರೆದಿದ್ದ ಲೋಲಾಕ್ಷಿ ಭಾವನ ಹೆಸರಿನಲ್ಲಿ ಸಿಡಿಯೊಂದನ್ನ ಬಿಡುಗಡೆ ಮಾಡಿದರು. ಅದರಲ್ಲಿ 'ಮರಳಿ ಬಾರದ ಊರಿಗೆ' ಎಂಬ ಭಾವಗೀತೆ ಸಾಕಷ್ಟು ಖ್ಯಾತಿ ಗಳಿಸಿತು. ಐದಾರು ವರ್ಷಗಳಿಂದ ಭಾವಗೀತೆಯಾಗಿಯೇ ಉಳಿದಿದ್ದ 'ಮರಳಿ ಬಾರದ ಊರಿಗೆ' ಹಾಡು ಇದೀಗ ಚಿತ್ರಗೀತೆಯಾಗಿದ್ದು. 'ಪರಸಂಗ' ಚಿತ್ರದಲ್ಲಿ ಭಾವನಾತ್ಮಕ ರೂಪ ಪಡೆದುಕೊಂಡಿದೆ.

ಬಹುಮುಖ್ಯವಾಗಿ 'ಪರಸಂಗ' ಚಿತ್ರಕ್ಕೆ ಬಳಕೆಯಾಗುತ್ತಿರುವ ಹಾಡಿಗೆ ಜೋಗಿ ಪ್ರೇಮ್ ಧ್ವನಿಯಾಗಿದ್ದು ಪ್ರೇಮ್ ಹಾಡಿರುವ ಈ ಹಾಡು ಸಖತ್ ಹಿಟ್ ಆಗಿದೆ. ಭಾವನ ಹೆಸರಿನ ಭಾವನೆಗಳ ನೆನಪಿನಲ್ಲಿ ಹುಟ್ಟಿದ ಹಾಡಿಗೆ ಭಾವದಿಂದಲೇ ಧ್ವನಿಗೂಡಿಸಿರುವ ಪ್ರೇಮ್ ಸಹ ಈ ಗೀತೆಯ ಸಾಹಿತ್ಯವನ್ನ ಮೆಚ್ಚಿಕೊಂಡಿದ್ದಾರೆ. ಅದೇನೆ ಇದ್ದರೂ ಪ್ರೇಮ್ ಭಾವನಾತ್ಮಕ ಸನ್ನಿವೇಶಗಳನ್ನಷ್ಟೇ ಚಿತ್ರೀಕರಿಸದೆ ಬೇರೆಯವರ ಭಾವನೆಗಳಿಗೆ ಧ್ವನಿಯೂ ಆಗುತ್ತಾರೆ ಅಂತ ಈ ಹಾಡಿನ ಮೂಲಕ ಸಾಬೀತು ಮಾಡಿದ್ದಾರೆ.