»   » 'ಜೋಗಿ' ಪ್ರೇಮ್ ಆಕ್ಷನ್ ಕಟ್ ನಲ್ಲಿ ವಿನಯ್ ರಾಜ್

'ಜೋಗಿ' ಪ್ರೇಮ್ ಆಕ್ಷನ್ ಕಟ್ ನಲ್ಲಿ ವಿನಯ್ ರಾಜ್

By: ಜೀವನರಸಿಕ
Subscribe to Filmibeat Kannada

ಜೋಗಿ ಪ್ರೇಮ್ ಒಬ್ಬ ಉತ್ತಮ ನಿರ್ದೇಶಕ. ನಟನಾಗಿ ಬದಲಾದ ನಿರ್ದೇಶಕನನ್ನು ಜನರು ಒಪ್ಪಿಕೊಂಡಿದ್ದ ರಿಯಲ್ ಸ್ಟಾರ್ ಉಪ್ಪಿಯಂತಹಾ ಮಾಸ್ಟರ್ ಮೈಂಡ್ ನ ಮಾತ್ರ. ಪ್ರೇಮ್ ನಟನಾಗಿ ಕಾಣಿಸಿಕೊಂಡ ನಾಲ್ಕೂ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದ್ವು.

ಈಗ ಆಕ್ಟಿಂಗ್ ಸಾಕು ನಮ್ಗೆಲ್ಲ ಆಗಿ ಬರೋಲ್ಲ ಅಂತ ಪ್ರೇಮ್ ಡೈರೆಕ್ಷನ್ ಗೆ ಇಳಿದ ಹಾಗಿದೆ. ರಾಜ್ ಕುಟುಂಬದ ಮೂರನೇ ತಲೆಮಾರು ವಿನಯ್ ರಾಜ್ ಕುಮಾರ್ ಸಿನಿಮಾಗೆ ಆಕ್ಷನ್ ಕಟ್ ಹೇಳೋಕೆ ಜೋಗಿ ಪ್ರೇಮ್ ರೆಡಿಯಾಗಿದ್ದಾರೆ. ['ಸಿದ್ದಾರ್ಥ' ಚಿತ್ರ ವಿಮರ್ಶೆ]

'Jogi' Prem to direct Vinay Rajkumar movie

ನಾಳೆ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿ ಟೈಟಲ್ ಲಾಂಚ್ ತಯಾರಿ ನಡೆದಿದ್ದು ಹೊಸ ವರ್ಷದ ದಿನದಂದು ಶಿವಣ್ಣ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಜೊತೆ ರಾಘವೇಂದ್ರ ರಾಜ್ ಕುಮಾರ್ ಪುತ್ರನ ಹೆಸರಿಡದ ಸಿನಿಮಾದ ಮೂಹೂರ್ತ ಕೂಡ ನಡೆಯಲಿದೆ.

ಬರೋಬ್ಬರಿ 4 ವರ್ಷಗಳ ನಂತರ ಪ್ರೇಮ್ ಡೈರೆಕ್ಷನ್ ನಲ್ಲಿ ಚಿತ್ರವೊಂದರ ಮುಹೂರ್ತ ನಡೀತಿದೆ. ಶಿವಣ್ಣನಿಗೆ ಜೋಗಯ್ಯ, ಪುನೀತ್ ಅವರಿಗೆ ರಾಜ್ ದಿ ಶೋ ಮ್ಯಾನ್ ಸಿನಿಮಾ ಮಾಡಿದ ನಂತರ ರಾಜ್ ಕುಟುಂಬದ ಮತ್ತೊಬ್ಬ ನಟನಿಗೆ ಪ್ರೇಮ್ ಆಕ್ಷನ್ ಕಟ್ ಹೇಳ್ತಿರೋದು ವಿಶೇಷ.

'Jogi' Prem to direct Vinay Rajkumar movie

ಜೋಗಿ ಪ್ರೇಮ್ ಅಭಿನಯದ ಇತ್ತೀಚೆಗಿನ 'ಡಿಕೆ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಗೆಲ್ಲಲಿಲ್ಲ. ಅದಕ್ಕೂ ಮುಂಚಿನ ಈ ಪ್ರೀತಿ ಏಕೆ ಭೂಮಿ ಮೇಲಿದೆ, ಪ್ರೇಮ್ ಅಡ್ಡ, ದಾಸವಾಳ ಚಿತ್ರಗಳು ಪ್ರೇಮ್ ಅವರಿಗೆ ಒಳ್ಳೆಯ ಅನುಭವವನ್ನೇ ಕೊಟ್ಟಿವೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲಾ ಹಾಗೆ.

English summary
After series of flop movies as an actor 'Jogi' fame Prem is back to direction. His next project is with Vinay Rajkumar. The movie is all set to go floors on Ugadi (21st March) festival.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada