For Quick Alerts
  ALLOW NOTIFICATIONS  
  For Daily Alerts

  ಮತ್ತೆ ಅಪ್ಪು ಸಿನಿಮಾಗಾಗಿ ಬಂದ್ರು ಜಾನಿ ಮಾಸ್ಟರ್

  By Pavithra
  |
  Natasaarvabhowma Kannada movie : ರಾಜಕುಮಾರ ನಂತರ ಮತ್ತೆ ಅಪ್ಪುಗಾಗಿ ಬಂದ ಜಾನಿ ಮಾಸ್ಟರ್...!!

  ಕಳೆದ ವರ್ಷ ತೆರೆ ಕಂಡು ಕರುನಾಡಿನ ಜನತೆಯ ಮನಸ್ಸು ಗೆದ್ದ ಸಿನಿಮಾ 'ರಾಜಕುಮಾರ'. ಅದರಂತೆ ವಾವ್ಹ್ ಡ್ಯಾನ್ಸ್ ಅಂದ್ರೆ ಇದಪ್ಪ. ಅಪ್ಪು ಅವರನ್ನ ಕುಣಿಸೋದಕ್ಕೆ ಇವರೇ ಸರಿ ಅಂತ ಜನರು ಹೊಗಳಿದ್ದು ಅದೇ ರಾಜಕುಮಾರ ಸಿನಿಮಾದ ಅಪ್ಪು ಡ್ಯಾನ್ಸ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದ ಜಾನಿ ಮಾಸ್ಟರ್ ಅವರನ್ನ. ಅಪ್ಪು ಡ್ಯಾನ್ಸ್ ಹಾಡಿಗೆ ಕೊರಿಯೋಗ್ರಾಫ್ ಮಾಡಿದ್ದ ಜಾನಿ ಮಾಸ್ಟರ್ ಮತ್ತೆ ಬಂದಿದ್ದಾರೆ.

  ಹೌದು.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಜಾನಿ ಮಾಸ್ಟರ್ ಮತ್ತೆ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ 'ನಟಸಾರ್ವಭೌಮ' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ.

  ಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸ

  ಪವರ್ ಸ್ಟಾರ್ ಹಾಗೂ ಜಾನಿ ಮಾಸ್ಟರ್ ಒಂದಾಗಿದ್ದಾರೆ ಎನ್ನುವುದನ್ನು ತಿಳಿದ ತಕ್ಷಣ ಅಭಿಮಾನಿಗಳು ಈಗಾಗಲೇ ಹಾಡು ಮತ್ತು ಡ್ಯಾನ್ಸ್ ಹೇಗಿರಲಿದೆ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ನಟ ಸಾರ್ವಭೌಮ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

  ವೈದಿ ಕ್ಯಾಮೆರಾ ವರ್ಕ್ ಸಿನಿಮಾಗಿದ್ದು ರಚಿತಾ ರಾಮ್ ಮತ್ತೆ ಪವರ್ ಸ್ಟಾರ್ ಜೊತೆ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಡಿ ಇಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಅಪ್ಪು, ಜಾನಿ ಮಾಸ್ಟರ್ ಹಾಗೂ ಪವನ್ ಒಡೆಯರ್ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Johnny Master is choreographing for kannada Nandasarvabhooma movie song. Puneeth Rajkumar is acting as the hero in the film and directed by Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X