twitter
    For Quick Alerts
    ALLOW NOTIFICATIONS  
    For Daily Alerts

    ಜಾಗೃತಿ ಅಭಿಯಾನ: ಗಿನ್ನಿಸ್ ದಾಖಲೆ ಸೃಷ್ಟಿಸಿದ ಜೋಶ್ ಆಪ್

    By ಫಿಲ್ಮಿಬೀಟ್ ಡೆಸ್ಕ್
    |

    ಭಾರತದದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಎಂಗೇಜಿಂಗ್ ಆಗಿರುವ ಶಾರ್ಟ್ ವಿಡಿಯೋ ಆಪ್ ಜೋಶ್ ಆಪ್ ಗಿನ್ನಿಸ್ ದಾಖಲೇ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾರತದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 10ರಿಂದ 15ರ ನಡುವೆ ಜೋಶ್ ಆಯೋಜಿಸಿದ್ದ ಅಭಿಯಾನ ಈ ಸಾಧನೆ ಕಾರಣವಾಗಿದೆ.

    Josh App Creates Guinness World Record For Its Salute India Campaign For 75th Independence Day

    ರಾಷ್ಟ್ರಗೀತೆಗೆ ಸೆಲ್ಯೂಟ್ ಮಾಡುವ ಅತಿ ದೊಡ್ಡ ಆನ್ ಲೈನ್ ವಿಡಿಯೋವನ್ನು ರಚಿಸುವ ಮೂಲಕ ಜೋಶ್ ವಿಶ್ವ ದಾಖಲೆಯ ಸಾಧನೆ ಮಾಡಿದೆ. #SaluteIndia ಅಭಿಮಾನದ ಸಮಯದಲ್ಲಿ ಭಾರತೀಯರು ಬಾಲ ಕಾರ್ಮಿಕರು, ತಾರತಮ್ಯ, ಭ್ರಷ್ಟಾಚಾರ, ವರದಕ್ಷಿಣೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಲು ಈ ಅಭಿಯಾನದಲ್ಲಿ ಒತ್ತಾಯಿಸಲಾಗಿತ್ತು.

    ಈ ಅಭಿಯಾನದಲ್ಲಿ ಭಾಗವಹಿಸುವವರು ಕನಿಷ್ಟ ಐದು ಸೆಕೆಂಡ್ ಗಳ ವಿಡಿಯೋವನ್ನು ರಚಿಸಬೇಕಾಗಿತ್ತು. ರಾಷ್ಟ್ರಗೀತೆಯ ಹಿನ್ನಲೆಯಲ್ಲಿ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಈ ಅಭಿಯಾನ ಭಾರಿ ಯಶಸ್ಸು ಕಂಡಿತ್ತು. ಒಟ್ಟು 29,529 ವಿಡಿಯೋ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮುರಿದಿತ್ತು. ಹಳೆಯ ವಿಡಿಯೋವನ್ನು ಪ್ರವಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಮಾಡಿದ್ದು, ಆಗ 23,529 ವಿಡಿಯೋಗಳನ್ನು ಮಾಡಲಾಗಿತ್ತು.

    Josh App Creates Guinness World Record For Its Salute India Campaign For 75th Independence Day

    ಈ ಬಗ್ಗೆ ಜೋಶ್ ಆಪ್ ನ ಕ್ರಿಯೇಟರ್ ಹೆಡ್ ಮತ್ತು ಕಂಟೆಂಟ್ ಇಕೋಸಿಸ್ಟಮ್ ಸುಂದರ್ ವೆಂಕಟ್ರಮನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಅತಿದೊಡ್ಡ ಆನ್ ಲೈನ್ ವಿಡಿಯೋ ಮೂಲಕ ವಿಶ್ವ ದಾಖಲೆ ಸ್ಥಾಪಿರುವುದು ತುಂಬ ಸಂತೋಷವಾಗಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಟ್ ನಿಂದ ಪ್ರಮಾಣೀಕರಣವನ್ನು ಪಡೆಯುವುದು ನಮಗೆ ಅಪಾರ ಹೆಮ್ಮೆಯನ್ನು ನೀಡಿದೆ. ಇದು ನಮ್ಮ ಸಾಮರ್ಥ್ಯ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗು ಧನ್ಯವಾದಗಳು" ಎಂದು ಹೇಳಿದ್ದಾರೆ.

    ಸಂಸ್ಥಾಪಕ ವೀರೇಂದ್ರ ಗುಪ್ತ ಮತ್ತು ಸಹ ಸಂಸ್ಥಾಪಕ ಉಮಂಗ್ ಬೇಡಿ ಮಾತನಾಡಿ, "ನಮ್ಮ ಈ ವೇದಿಕೆ ಭಾರತದಲ್ಲಿ ಭಾರತಕ್ಕಾಗಿ ಹುಟ್ಟಿದೆ. ಇದು ಭಾರತೀಯ ನೆಟ್ಟಿಗರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುತ್ತದೆ. ವಿಡಿಯೋ ವೇದಿಕೆ, ಜನರು ಹಾಗೂ ಸಂಕಲ್ಪ ಎಂಬ ಮೂರು ಮುಖ್ಯ ಧ್ಯೇಯಗಳ ಮೇಲೆ ನಾವು ಕಾರ್ಯನಿರ್ವಹಿಸುತ್ತಿದ್ದು, ಇವೆಲ್ಲವೂ ಒಟ್ಟಾಗಿ ಸಾಧನೆಗೆ ನೆರವಾಗಿವೆ. ರಾಷ್ಟ್ರಕ್ಕಾಗಿ ಸಾವಿರಾರು ಭಾರತೀಯರು ಒಟ್ಟಾಗಿ ತಮ್ಮ ದೇಶಪ್ರೇಮ ಮೆರೆದಿರುವುದನ್ನು ನೋಡಲು ಹೆಮ್ಮೆಯೆನಿಸುತ್ತದೆ. ಇದಕ್ಕೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ" ಎಂದು ಹೇಳಿದರು.

    ವಿಶ್ವ ದರ್ಜೆಯ ಮಟ್ಟದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ, ಉನ್ನತ ಗುಣಮಟ್ಟದ ಹಾಗೂ ಅಧೀಕೃತ ವಿಡಿಯೋಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಿ, ಬೃಹತ್ ಬಳಕೆದಾರರನ್ನು ಒಳಗೊಳ್ಳುವ ವಿಷಯಗಳನ್ನು ನೀಡುತ್ತಿರುವ, ವೈಯಕ್ತೀಕರಣಕ್ಕೆ ಅವಕಾಶವಾಗಿರು Ai/ML ಸ್ಟಾಕ್ ಮೂಲಕ ಈ ವೇದಿಕೆಯು ಅತ್ಯಾಧುನಿಕ ತಂತ್ರಜ್ಞಾನ ಮುನ್ನೆಲೆಯಲ್ಲಿರುವ ಇಂಥ ಸಂದರ್ಭದಲ್ಲಿ ಹಲವು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ನಮ್ಮ ತಂಡಕ್ಕೆ ಒಂದು ಕನಸಿನಂತೆ ಆರಂಭವಾದದ್ದು ಈಗ ದೊಡ್ಡ ಸಾಧನೆಯಾಗಿದೆ. ನಮಗೆ ನೆರವಾದ ಬಳಕೆದಾರರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ತಿಳಿಸಿದ್ದಾರೆ.

    'ಭಾರತದ ರಾಷ್ಟ್ರಗೀತೆಗೆ ಜನರು ಸಲ್ಯೂಟ್ ಮಾಡುತ್ತಿರುವ ಅತಿ ದೊಡ್ಡ ಆನ್‌ಲೈನ್ ವಿಡಿಯೋ' ಎಂಬ ಗಿನ್ನಿಸ್ ವಿಶ್ವ ದಾಖಲೆಗೆ ಜೋಶ್ ಆಪ್ ಸೇರಿರುವುದನ್ನು ಘೋಷಿಸಲು ನಮಗೆ ಸಂತಸವೆನಿಸುತ್ತಿದೆ. 29,529 ವಿಡಿಯೋಗಳನ್ನು ಸೃಷ್ಟಿಸಿದ ಹಾಗೂ ಇದಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಅಭಿನಂದನೆಗಳು. ಭಾರತದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ದೇಶದ ಎಲ್ಲೆಡೆಯಿಂದ ಜನರನ್ನು ಡಿಜಿಟಲ್ ಆಗಿ ಒಗ್ಗೂಡಿಸಿದ ಜೋಶ್ ಆಪ್‌ಗೆ ಸಂದ ಗೌರವವಿದು' ಎಂದು ಗಿನ್ನಿಸ್ ವಿಶ್ವ ದಾಖಲೆಯ EMEA APAC ನೀಲ್ ಫೋಸ್ಟರ್ ತಿಳಿಸಿದ್ದಾರೆ.

    English summary
    Josh created history by setting a new Guinness World Records title. This feat was achieved during the #SaluteIndia campaign to mark 75th independence day,
    Saturday, September 25, 2021, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X