Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೆಟ್ರೋಮ್ಯಾಕ್ಸ್' ಚಿತ್ರತಂಡದ ಜೊತೆ 'ಜೋಶ್': ಸಿನಿಮಾಕ್ಕೆ ಶುಭಹಾರೈಕೆ
ಸತೀಶ್ ನೀನಾಸಂ, ಹರಿಪ್ರಿಯ ಸೇರಿದಂತೆ ಇನ್ನು ಕೆಲವರು ನಟಿಸಿರುವ 'ಪೆಟ್ರೊಮ್ಯಾಕ್ಸ್ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದ್ದು, ಸಿನಿಮಾ ತಂಡವನ್ನು ಭಾರತದ ಜನಪ್ರಿಯ ಕಿರು ವಿಡಿಯೋ ಅಪ್ಲಿಕೇಶನ್ ಜೋಶ್‌ನ ಕನ್ನಡ ಕಂಟೆಂಟ್ ಕ್ರಿಯೇಟರ್‌ಗಳು ಭೇಟಿಯಾಗಿ ಶುಭ ಹಾರೈಸಿದ್ದಾರೆ.
ಜೋಶ್ ಕಿರು ವಿಡಿಯೋ ಅಪ್ಲಿಕೇಶನ್ ಭಾರತದಲ್ಲಿ ಅತಿ ವೇಗವಾಗಿ ಜನಪ್ರಿಯವಾಗುತ್ತಿರುವ ಅಪ್ಲಿಕೇಶನ್ ಆಗಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಯ ಸ್ಥಳೀಯ ವಿಡಿಯೋ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸಿದೆ.
ಜೊತೆಗೆ ಸ್ಟಾರ್ ನಟರೊಟ್ಟಿಗೆ ಮೀಟ್ ಆಂಡ್ ಗ್ರೀಟ್ ಸೇರಿದಂತೆ ಇನ್ನೂ ಹಲವು ಮಾದರಿಯ ಇವೆಂಟ್‌ಗಳನ್ನು ಆಯೋಜಿಸಿ ಜೋಶ್ ಕ್ರಿಯೇಟರ್‌ಗಳಿಗೆ ಹೆಚ್ಚು ಕ್ರಿಯಾಶೀಲ ಕಂಟೆಂಟ್ ಪೋಸ್ಟ್ ಮಾಡಲು ಅವಕಾಶ ಮಾಡಿಕೊಡುತ್ತದೆ.
ಇದೀಗ ಕೆಲವು ಆಯ್ದ ಜೋಶ್ ಕಂಟೆಂಟ್ ಕ್ರಿಯೇಟರ್‌ಗಳಿಗೆ 'ಪೆಟ್ರೋಮ್ಯಾಕ್ಸ್' ಸಿನಿಮಾ ತಂಡದೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸುವ ಅವಕಾಶವನ್ನು ಕಲ್ಪಿಸಲಾಗಿತ್ತು.
ಈ ಸದಾವಕಾಶವನ್ನು ಬಳಸಿಕೊಂಡ ಜೋಶ್ ಕಂಟೆಂಟ್ ಕ್ರಿಯೇಟರ್‌ಗಳು 'ಪೆಟ್ರೋಮ್ಯಾಕ್ಸ್' ಸಿನಿಮಾದ ನಾಯಕ ಸತೀಶ್ ನೀನಾಸಂ, ನಾಗಭೂಷಣ್ ಅವರೊಟ್ಟಿಗೆ ಭೇಟಿಯಾಗಿ ಮಾತುಕತೆ ನಡೆಸಿದರು. ಚಿತ್ರಗಳನ್ನು ತೆಗೆಸಿಕೊಂಡರು.
ಅದು ಮಾತ್ರವೇ ಅಲ್ಲದೆ, ಸತೀಶ್, ನಾಗಭೂಷಣ್ ಅವರೊಟ್ಟಿಗೆ ಜೋಶ್‌ಗಾಗಿ ವಿಡಿಯೋಗಳನ್ನು ಸಹ ಮಾಡಿ ಖುಷಿ ಪಟ್ಟರು. ಸತೀಶ್ ಅವರು ಕೆಲವು ಜೋಶ್ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ 'ಪೆಟ್ರೊಮ್ಯಾಕ್ಸ್' ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಸಖತ್ ಆಗಿ ಸ್ಟೆಪ್ ಸಹ ಹಾಕಿದರು. ಇದೇ ಶುಕ್ರವಾರ ಬಿಡುಗಡೆ ಆಗುತ್ತಿರುವ 'ಪೆಟ್ರೋಮ್ಯಾಕ್ಸ್' ಸಿನಿಮಾಕ್ಕೆ ಶುಭ ಸಹ ಹಾರೈಸಿದರು.

'ಪೆಟ್ರೋಮ್ಯಾಕ್ಸ್' ಸಿನಿಮಾ ಇದೇ ಜುಲೈ 15 ರಂದು ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ಸತೀಶ್ ನೀನಾಸಂ, ಹರಿಪ್ರಿಯ, ನಾಗಭೂಷಣ್, ಅಚ್ಯುತ್ ಕುಮಾರ್, ಕಾರುಣ್ಯಾ ರಾಮ್, ಸುಮನ್ ರಂಗನಾಥ್, ಪದ್ಮಜಾ ರಾವ್, ಸುಧಾ ಬೆಳವಾಡಿ ಇನ್ನೂ ಹಲವರು ನಟಿಸಿದ್ದಾರೆ.
'ಪೆಟ್ರೋಮ್ಯಾಕ್ಸ್' ಸಿನಿಮಾವನ್ನು ಜನಪ್ರಿಯ ನಿರ್ದೇಶಕ ವಿಜಯ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಅನುಪ್ ಸಿಳಿನ್ ಸಂಗೀತ ನೀಡಿದ್ದಾರೆ. ಸಂಕಲನ ಸುರೇಶ್ ಅರಸ್, ಸಿನಿಮಾಟೊಗ್ರಫಿ ನಿರಂಜನ್ ಬಾಬು. ಸುಧೀರ್ ಕೆ.ಎಮ್ ನಿರ್ಮಾಣಮಾಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಪೋಲಿತನ ತುಂಬಿದ ಸಂಭಾಷಣೆಗಳ ಜೊತೆಗೆ ಸಮಾಜದ ಡೊಂಕುಗಳನ್ನು ಒರೆಗೆ ಹಚ್ಚುವ ಸಂಭಾಷಣೆಗಳು ಸಹ ಅಡಕವಾಗಿವೆ. ಟ್ರೈಲರ್ ಈಗಾಗಲೇ ಸೂಪರ್ ವೈರಲ್ ಆಗಿದೆ.
Recommended Video