»   » ಜೋಶ್ ರಾಕೇಶ್ ಜೊತೆ ರಮ್ಯಾ ಬಾರ್ನಾ ರೊಮಾನ್ಸ್

ಜೋಶ್ ರಾಕೇಶ್ ಜೊತೆ ರಮ್ಯಾ ಬಾರ್ನಾ ರೊಮಾನ್ಸ್

Posted By:
Subscribe to Filmibeat Kannada
Ramya Barna
ಜೋಶ್ ಖ್ಯಾತಿಯ ನಟ ರಾಕೇಶ್ ಜೊತೆ ರಮ್ಯಾ ಬಾರ್ನಾ ಈಗ ರೊಮಾನ್ಸ್ ಮಾಡಲಿದ್ದಾರೆ. ರಾಕೇಶ್ ನಟಿಸುತ್ತಿರುವ ಹೊಸ ಚಿತ್ರ ನಟೋರಿಯಸ್ ಗೆ ಸಂಜನಾ ಜಾಗಕ್ಕೆ ರಮ್ಯಾ ಬಾರ್ನಾ ಬಂದಿದ್ದಾರೆ. ಅಲ್ಲಿಗೆ ನಟ-ನಟಿಯರ ಕೋಕೋ ಆಟಕ್ಕೆ ಈ ಚಿತ್ರ ಕೂಡ ಸೇರ್ಪಡೆಯಾಗಿದೆ. ಸಂಜನಾ ಹಾಗೂ ರಾಕೇಶ್ ಭಾಗದ ಶೂಟಿಂಗ್ ಕೂಡ ನಡೆದಿತ್ತು. ನಂತರ ನಡೆದ ಈ ಬದಲಾವಣೆ ಅಚ್ಚರಿ ಮೂಡಿಸಿದೆ.

ಈ ಮೂಲಕ ರಮ್ಯಾ ಬಾರ್ನಾಗೆ ಪೂರ್ಣ ಪ್ರಮಾಣದ ನಾಯಕಿ ಪಟ್ಟ ಅಪರೂಪಕ್ಕೆ ಮತ್ತೆ ಒಲಿದಂತಾಗಿದೆ. ಈ ಮೊದಲು ಸಾಕಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿರುವ ರಮ್ಯಾ ಬಾರ್ನಾ, ನಾಯಕಿಯಾಗಿದ್ದು ಬೆರಳೆಣಿಕೆ ಚಿತ್ರಗಳಲ್ಲಿ ಮಾತ್ರ. ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರದಲ್ಲಿ ನಿಧಿ ಸುಬ್ಬಯ್ಯ ಸಹೋದರಿ ಪಾತ್ರದಲ್ಲಿ ಮಿಂಚಿದ್ದ ರಮ್ಯಾ ಬಾರ್ನಾಗೆ ಅದೇಕೋ ನಾಯಕಿಯಾಗುವ ಅವಕಾಶ ಕಡಿಮೆಯಿತ್ತು. ಈಗ ಲಕ್ ಸಿಕ್ಕಿದೆ.

ಇನ್ನು ನಟ ರಾಕೇಶ್ ಅವರೀಗ ಫುಲ್ ಜೋಶ್ ನಲ್ಲಿದ್ದಾರೆ. ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ಹಾಗೂ ಲೂಸ್ ಮಾದ ಯೋಗೇಶ್ ಸಂಗಮದ 'ಯಾರೇ ಕೂಗಾಡಲಿ' ಚಿತ್ರದಲ್ಲಿ ನೆಗೆಟಿವ್ ಶೇಟ್ ಇರುವ ಪ್ರಮುಖ ಪಾತ್ರವೊಂದನ್ನು ಗಿಟ್ಟಿಸಿಕೊಂಡಿದ್ದ ರಾಕೇಶ್ ಈಗ 'ನಟೋರಿಯಸ್' ಎಂಬ ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ.

ಜಿಜೆ ಎಂಬ ಹೊಸ ನಿರ್ದೇಶಕರ ಹೊಸ ಚಿತ್ರದ ಹೀರೋ ಆಗುವ ಮೂಲಕ ರಾಕೇಶ್ ಸಾಕಷ್ಟು ಕುತೂಲಹ ಕೆರಳಿಸಿದ್ದಾರೆ. 'ಜೋಶ್' ನಂತರ ಗಟ್ಟಿತನ ಇರುವ ಪಾತ್ರಕ್ಕಾಗಿ ಹುಡುಕಾಡುತ್ತಿದ್ದ ರಾಕೇಶ್, ಈಗ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೇ ಭಾರಿ ಚೂಸಿ ಆಗಿದ್ದಾರೆ. ಈಗ ಅವರಿಷ್ಟದ ಪ್ರಕಾರವೇ ಒಳ್ಳೊಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ.

ಸದ್ದಿಲ್ಲದೇ 06 ಆಗಸ್ಟ್ 2012 ರಂದು ಶೂಟಿಂಗ್ ಪ್ರಾರಂಭಿಸಿರುವ 'ನಟೋರಿಯಸ್' ಚಿತ್ರಕ್ಕೆ ಗುರುರಾಜ್ ಎಂಬವರು ನಿರ್ಮಾಪಕರು. ಇದು ಅವರ ಮೊದಲ ನಿರ್ಮಾಣದ ಚಿತ್ರವಾಗಿದೆ. ರಾಕೇಶ್ ಅವರಿಗೆ ನಾಯಕಿಯಾಗಿ 'ಗ್ಲಾಮರ್ ಡಾಲ್' ಸಂಜನಾ ಬದಲಿಗೆ ಈಗ ರಮ್ಯಾ ಬಾರ್ನಾ ಬಂದಿದ್ದಾಗಿದೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ. ಜೊತೆಗೆ ನವಿರಾದ ಪ್ರೀತಿ-ಪ್ರೇಮ, ತಲ್ಲಣ ಹಾಗೂ ಹಾಸ್ಯ ಎಲ್ಲವೂ ಇದೆ ಎಂದಿದೆ ಚಿತ್ರತಂಡ.

ಈ 'ನಟೋರಿಯಸ್' ಚಿತ್ರದ ಛಾಯಾಗ್ರಾಹಕರು ಬಾಲಿವುಡ್ ನಲ್ಲಿ ಕೆಲಸ ಮಾಡಿದ ಅನುಭವಿ ಧನುಷ್. ತಮಿಳಿನಲ್ಲಿ ಕೆಲವು ಚಿತ್ರಗಳಿಗೆ ಸಂಗೀತ ನೀಡಿರುವ ಪ್ರಭು, ನಟೋರಿಯಸ್ ಚಿತ್ರದ ಸಂಗೀತ ನಿರ್ದೇಶಕರು. ಚಿತ್ರದಲ್ಲಿ ರಾಜು ತಾಳಿಕೋಟೆ, ಸಾಧುಕೋಕಿಲ ಮುಂತಾದ ಹಿರಿಯ ಕಲಾವಿದರ ದೊಡ್ಡ ಬಳಗವೇ ಇದೆಯಂತೆ.

ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ, ವಿಭಿನ್ನ ಚಿತ್ರ ಕೊಡುವ ಹುಮ್ಮಸ್ಸಿನಲ್ಲಿದೆ. ಇದೀಗ ಈ ನಟೋರಿಯಸ್ ಟೀಮ್ ಸೇರಿಕೊಂಡಿರುವ ರಮ್ಯಾ ಬಾರ್ನಾ ಲಕ್ ಈ ಚಿತ್ರದ ಮೂಲಕವಾದರೂ ಬದಲಾಗಬಹುದೇ? ಫಲಿತಾಂಶಕ್ಕೆ ಚಿತ್ರ ತೆರೆಗೆ ಬರುವವರೆಗೆ ಕಾದು ನೋಡಬೇಕಾಗಿದೆ. ಒನ್ ಇಂಡಿಯಾ ಕನ್ನಡ)

English summary
Kannada actress Ramya Barna acts in Josh fame actor Rakesh upcoming movie 'Notorious'. This movie shooting started on 06th August 2012. Sanjana was the heroine when it started, but now Sanjana replaced by Ramya Barna. Newcomer called 'Jije' directing this movie and Gururaj is the producer.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada